ಲಖನೌ, ಜ 24: ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಏರತೊಡಗಿರುವ ಮಧ್ಯೆಯೇ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯೊಂದರಿAದ ತಿಳಿದುಬಂದಿದೆ. ಸಮಾಜವಾದಿ ಪಕ್ಷ (ಎಸ್ಪಿ) ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷಾ ವರದಿಗಳು ಹೇಳಿವೆ.
403 ಸಂಖ್ಯಾಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯು 230 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಲಿದೆ ಎಂದು ಸಮೀಕ್ಷ ವರದಿಗಳು ತಿಳಿಸಿವೆ.
ಸಮಾಜವಾದಿ ಪಕ್ಷವು ಸುಮಾರು 150 ಸ್ಥಾನ ಗಳಿಸಲಿದೆ ಎಂದು ಸಮೀಕ್ಷಾ ವರದಿಗಳು ಹೇಳಿವೆ.
ಅತಿಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ರಾಜ್ಯವಾದ ಕಾರಣ ಉತ್ತರ ಪ್ರದೇಶವನ್ನು ಗೆಲ್ಲುವುದು ಬಿಜೆಪಿಯ ಪ್ರಮುಖ ಗುರಿಯೂ ಹಾಗು ಪಾತ್ರವು ಆಗಿದೆ.
ಸಮಾಜವಾದಿ ಪಕ್ಷವು ಈ ಬಾರಿ 150 ರಷ್ಟು ಸ್ಥಾನ ಗಳಿಸಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧದ ಆಡಳಿತ ವಿರೋಧಿ ಅಲೆಯೇ ಈ ಪಕ್ಷದ ಸಂಖ್ಯಾಬಲ ಹೆಚ್ಚಾಗಲು ಕಾರಣ ಎಂದು ಸಮೀಕ್ಷೆ ವರದಿಗಳಿಂದ ತಿಳಿದುಬಂದಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಪರವಾಗಿದ್ದ ಯಾದವೇತರ ಒಬಿಸಿ ಮತದಾರರನ್ನು ತಲುಪುವಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬಹುಪೂರ್ಣ ಯಶಸ್ವಿಯಾಗಿದ್ದಾರೆ. ಅಲ್ಲದೆ, ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್ಪಿಗಳ ಪ್ರಭಾವಿ ನಾಯಕರನ್ನು ಎಸ್ಪಿ ಈ ಬಾರಿ ತನ್ನತ್ತ ಸೆಳೆದುಕೊಂಡಿದೆ ಮತ್ತು ಮುಂದೆಯು ಸೆಳೆದುಕೊಳ್ಳಬಹುದೆಂದು ವರದಿಗಳು ಉಲ್ಲೇಖಿಸಿವೆ.
ಕಾಂಗ್ರೆಸ್ಗೆ ಈ ಬಾರಿಯೂ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗಲಾರದು ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 3-5 ಸ್ಥಾನ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಬಹುಜನ ಸಮಾಜ ಪಕ್ಷ (ಬಿಎಸ್ಪಿ) 8-16 ಸ್ಥಾನಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ.
Varthajala Daily, Bengaluru.
Contact for Advertisements 9448119247
0 Comments