Ticker

6/recent/ticker-posts

Ad Code

Responsive Advertisement

16 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಸಚಿವ ಉಮೇಶ್ ಕತ್ತಿ ಚಾಲನೆ‌

ಹುಕ್ಕೇರಿ ಕ್ಷೇತ್ರದಲ್ಲಿ ಸುಮಾರು 16 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗೆ ಸಚಿವ ಉಮೇಶ್ ಕತ್ತಿ ಚಾಲನೆ‌.





ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಗ್ರಾಮಕ್ಕೆ ಸುಸಜ್ಜಿತವಾದ ರಸ್ತೆ ಹಾಗೂ ಕೆರೆಗಳ ನಿರ್ಮಾಣ ಮಾಡುವ ಸಲುವಾಗಿ ೧೬ ಗ್ರಾಮಗಳಲ್ಲಿ ೧೬ ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಮತ್ತು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಚಾಲನೆ ನೀಡಿದರು.

ಕಣಗಲಾ, ಅಂಕಲಿ, ಹರಗಾಪೂರ, ಕರಜಗಾ, ಅಮ್ಮಣಗಿ, ನಿಡಸೋಶಿ ಸೇರಿದಂತೆ ಹುಕ್ಕೇರಿ ಕ್ಷೇತ್ರದ ೧೬ ಗ್ರಾಮಗಳಲ್ಲಿ ಸುಮಾರು 23 ಕಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಕತ್ತಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅದರ ಒಂದು ಭಾಗವಾಗಿ ಇಂದು ಮತ್ತು ನಾಳೆ ಕ್ಷೇತ್ರದ 27 ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೆವೆ ಎಂದು ತಿಳಿಸಿದರು.

ಪ್ರಮುಖವಾಗಿ ಕ್ಷೇತ್ರದಲ್ಲಿ ಈಗಾಗಲೇ 28 ಕೆರೆಗಳ ನಿರ್ಮಾಣ ಆಗಿದ್ದು ಅದರಿಂದ ಲಕ್ಷಾಂತರ ರೈತರಿಗೆ ಅನಕೂಲ ಆಗಿದೆ, ಗ್ರಾಮೀಣ ಪ್ರದೇಶದ ನೀರಾವರಿ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ, ಹೀಗಾಗಿ ಮತದಾರರ ಅಪೇಕ್ಷೆಯ ಮೆರೆಗೆ ಅವಶ್ಯಕತೆ ಇದ್ದಲ್ಲಿ,  ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 1.70 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆಗಳ ನಿರ್ಮಾಣ, ಚೆಕಡ್ಯಾಮ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇನ್ನೂ ಕಾಲಕ್ಕೆ ತಕ್ಕಂತೆ ರಸ್ತೆಗಳ ಸುಧಾರಣೆಗಾಗಿ ಜಿಲ್ಲಾ ಪಂಚಾಯತಿ ವತಿಯಿಂದ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಯ ಜೊತೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಕೆಲವು ಕಾಲೋನಿಗಳಲ್ಲಿ ಹೊಸ ರಸ್ತೆ ನಿರ್ಮಾಣ ಮಾಡುವುದಕ್ಕೂ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ನಾಳೆಯಿಂದ ಹುಕ್ಕೇರಿ ಕ್ಷೇತ್ರದಲ್ಲಿ 16ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ಪ್ರಾರಂಭ ಆಗುತ್ತಿದ್ದೂ, ಆದಷ್ಟು ಬೇಗ ಉತ್ತಮ ಗುಣಮಟ್ಟದ ಕೆಲಸವನ್ನು ಗುತ್ತಿಗರದಾರರು ಮಾಡಬೇಕೆಂದು ಈ ವೇಳೆ ಸಚಿವ ಉಮೇಶ್ ಕತ್ತಿಯವರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಂಗಮ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ರಾಜೇಂದ್ರ ಪಾಟೀಲ್, ಅಪ್ಪಾಸಾಹೇಬ್ ಶಿರ್ಕೊಳಿ, ಬಂಡು ಹತ್ತನೂರೆ, ಎಪಿಎಂ.ಸಿ ಅಧ್ಯಕ್ಷರಾದ ಪ್ರಶಾಂತ ಪಾಟೀಲ್ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement