ಪ್ರತಿಟನೆ ಹಮ್ಮಿಕೊಂಡಿದ್ದು ಸಂಸದ ಡಿ ಕೆ ಸುರೇಶ್ ವಿರುದ್ಧ ಆದರೆ ಘೋಷಣೆ ಕೂಗಿದ್ದು ಮಾತ್ರ ಡಿ ಕೆ ರವಿ ವಿರುದ್ಧ*....
ಕೋಲಾರ : ಇತ್ತೀಚೆಗಷ್ಟೇ ರಾಮನಗರದಲ್ಲಿ ಡಿ ಕೆ ಸುರೇಶ್ ಹಾಗೂ ಅಶ್ವತ್ಥನಾರಾಯಣ ರವರ ಜಟಾಪಟಿ ರಾಜ್ಯದ ನಾನಾ ಕಡೆಗಳಲ್ಲಿ ಸದ್ದು ಮಾಡಿ ಡಿ ಕೆ ಸುರೇಶ್ ರವರ ನಡೆಯನ್ನು ಖಂಡಿಸುತ್ತಾ ಪ್ರತಿಭಟನೆ ನಡೆಯುತ್ತಿದ್ದರೆ ಶ್ರೀನಿವಾಸಪುರಪಟ್ಟಣದಲ್ಲಿ ಮಾತ್ರ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ವಿಭಿನ್ನವಾಗಿ ಕಾಣುವ ಮೂಲಕ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗಿರುವ ವೀಡಿಯೋವೊಂದು ಇದೀಗ ಸಕತ್ ವೈರಲ್ ಆಗಿದೆ.
ಶ್ರೀನಿವಾಸಪುರ ಪಟ್ಟಣದ ಇಂದ್ರ ಭವನ್ ಸರ್ಕಲ್ ನಲ್ಲಿ ನೆನ್ನೆಯ ದಿನ ಬಿ ಜೆ ಪಿ ತಾ. ಕಾರ್ಯಕರ್ತರು ಸಂಸದ ಡಿಕೆ ಸುರೇಶ್ ರವರ ವಿರುದ್ಧ ಪ್ರತಿಭಟನೆ ನಡೆಸುತ್ತಾ ಘೋಷಣೆಯನ್ನ ಕೂಗುವಾಗ ಡಿ ಕೆ ಸುರೇಶ್ ಬದಲಿಗೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಅತ್ಯಂತ ನಿಷ್ಥಾವಂತರಾಗಿ ಸೇವೆ ಸಲ್ಲಿಸಿದ್ದ ದಿವಂಗತ ಡಿ ಕೆ ರವಿ ಗೆ ಧಿಕ್ಕಾರ ಎಂದು ಪ್ರಾರಂಭದಿಂದಲೂ ಕೊನೆವರೆಗೂ ಕೂಗಿರುವುದು ಡಿ ಕೆ ರವಿ ರವರ ಅಭಿಮಾನಿಗಳನ್ನು ಕೆರಳಿಸಿದೆ.
ನೆನ್ನೆಯ ದಿನ ಬಿ ಜೆ ಪಿ ಗರು ಮಾಡಿಕೊಂಡ ಈ ಯಡವಟ್ಟಿಗೆ ಕಾರ್ಯಕರ್ತರಲ್ಲೇ ಯಾವ ಪುರುಷಾರ್ಥಕ್ಕೆ ಈ ಪ್ರತಿಭಟನೆ ಎಂಬ ಅಸಮಾಧಾನ ಎದ್ದಿದೆ.
0 Comments