ಮಧುಗಿರಿ : ತಾಲೂಕು ಪಂಚಾಯಿತಿ ಕಚೇರಿ ಆವರಣ ಸುತ್ತ ಮುತ್ತ ಹಲವು ವರ್ಷಗಳಿಂದ ಬೆಳೆದು ನಿಂತ ಗಿಡ ಗೆಂಟೆಗಳನ್ನು ನೂತನ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್ ಸ್ವಚ್ಛ ಪಡಿಸಿದರು...
ನಂತರ ಮಾಧ್ಯಮದೊಂದಿಗೆ ಮಾತನಾಡಿ, ವಿಜ್ಞಾನ, ತಂತ್ರಜ್ಞಾನಗಳ ಮುಖಾಂತರ ದೇಶ ಅಭಿವೃದ್ಧಿ ಹೊಂದುತ್ತಿರುವಾಗ ಮಾನವನು ಆರೋಗ್ಯವಂತನಾಗಿ ಉಳಿಯಬೇಕಾದರೆ ಸ್ವಚ್ಛ ಸುಂದರ ಪರಿಸರವನ್ನು ಉಳಿಸಿ, ಬೆಳೆಸಬೇಕಾದದ್ದು ಅತ್ಯಗತ್ಯ. ಆದ್ದರಿಂದ ಈ ದಿನ ನಮ್ಮ ಕಚೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸ್ವಚ್ಛ ಪರಿಸರ ನಿರ್ಮಾಣಕ್ಕೆ ಈ ಸ್ವಚ್ಛ ಕಾರ್ಯ ಅಗತ್ಯವಾಗಿದೆ ಎಂದು ತಿಳಿಸಿದರು... ಈ ಸಂದರ್ಭದಲ್ಲಿ ಪಂಚಾಯಿತಿ ಅಧಿಕಾರಿಗಳಾದ ಮಧುಸೂದನ್, ವಸಂತ್, ಅರ್ಷಾದ್ ಹುಸೇನ್ , ಅಲ್ಪಸಂಖ್ಯಾತರ ಅಧ್ಯಕ್ಷರಾದ ಸಯ್ಯದ್ ಅಲಾವುದ್ದೀನ್ ,ದಾದಾಪೀರ್ ಹಾಜರಿದ್ದರು..
0 Comments