ಬೆಂಗಳೂರು ನಗರದ ಹಲಸೂರಿನ ಬಳಿ ಇರುವ ಕಲ್ಲಹಳ್ಳಿ, ಕೆನ್ಸಿಂಗ್ಟ್ ನ್ ರಸ್ತೆ, ಎಂ ಇ ಜಿ ಹತ್ತಿರ, ಜೈ ಭೀಮ್ ಟ್ರಸ್ಟ್ ಎಂಬ ಸಂಸ್ಥೆಯಿಂದ ಸುಮಾರು 20 ವರ್ಷದ ಹಿಂದೆ ಸ್ಥಾಪಿಸಲ್ಪಟ್ಟಿದ್ದ ಅಂಬೇಡ್ಕರ್ ಪ್ರತಿಮೆ ದ್ವಂಸ ಮಾಡಿರುವುದರ ಉದ್ದೇಶ ಏನು, ಯಾರ ಕೈವಾಡ ಇದೆಯೋ, ರಾಜಕೀಯ ದುರುದ್ದೇಶವೋ, ವೈಯಕ್ತಿಕ ದ್ವೇಷವೂ ತಿಳಿಯದು.
ಭಾರತ ದೇಶದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ದ್ವಂಸದ ಹಿಂದಿರುವ ರೂವಾರಿ ಯಾರು ಎಂಬುದು ಪ್ರಶ್ನೆ?. ಜೈ ಭೀಮ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾದ ಮೀರಾ ಮುಕುಂದ್ ಅವರ ಪ್ರಕಾರ ಅಂಬೇಡ್ಕರ್ ಶಿಲೆಯು ಸುಮಾರು 20 ವರ್ಷಗಳ ಹಿಂದೆ ಸ್ಥಾಪಿಸಲಾಯಿತು ಹಾಗು ಶಿಲೆಯು ಯಾವುದೇ ರಸ್ತೆಯನ್ನೂ ಅಥವಾ ಯಾವುದೇ ಸಂಚಾರ ದಟ್ಟಣೆ ಅಡ್ಡಚನೆಗೆ ಅವಕಾಶವೂ ನೀಡದಂತೆ ಇರುವಾಗ ಯಾಕೆ ಧ್ವಂಸ ಮಾಡಿದರು ಎಂಬುದು ಪ್ರಶ್ನೆ.
ಬಿಬಿಎಂಪಿ ಹಾಗೂ ಬಿಎಂಟಿಎಫ್ ಅಧಿಕಾರಿಗಳು ರಾತ್ರೋ ರಾತ್ರಿ ಪ್ರತಿಮೆಯನ್ನು ಓಡೆಯುವ ಪ್ರಮೇಯ ಬಂದಿದ್ದು ಆದರೂ ಯಾಕೆ. ಮೀರಾ ಅವರ ಪ್ರಕಾರ ಯೋಗೇಶ್ ಮತ್ತು ಅನು ಕೊಠಾರಿ, ಮಂಜುನಾಥ್ ನಗರ ನಿವಾಸಿಗಳ ದೂರಿನ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಅಧಿಕಾರಿಗಳ ಉತ್ತರ ಆದರೆ ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ಅನಧಿಕೃತ ಶಿಲೆಗಳಿದ್ದು ಅವುಗಳನ್ನೆಲ್ಲ ಓಡೆಯಲು ಸಾದ್ಯವೇ.
ಹಾಗಾದರೆ ಅಧಿಕಾರಿಗಳಿಗೆ ಕರ್ತವ್ಯದ ನೈತಿಕತೆ ಇದ್ದರೆ ಅನಧಿಕೃತ ಶಿಲೆಗಳು ಬೆಂಗಳೂರಿನ ತುಂಬೆಲ್ಲಾ ಇವೆ ಅವುಗಳನ್ನು ಮುಟ್ಟಿ ನೋಡಲಿ ಎಂಬುದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮೀರಾ ಮುಕುಂದ್ ಅವರ ವಾದ. ಮೀರಾ ಮುಕುಂದ್ ಅವರು ಇನ್ನೂ ಹೆಜ್ಜೆ ಮುಂದೆ ಹೋಗಿ ಅವರು ಮಾಡುವ ಪ್ರಶ್ನೆ ಏನು ಎಂದರೆ ನಿಜವಾಗಲೂ ಅಧಿಕಾರಿಗಳು ಶಿಸ್ತಿನ ಸಿಪಾಯಿಗಳೆ ಆಗಿದ್ದರೆ ವಿಧಾನ ಸೌಧದ ಮುಂದೆ ಹಿಂದೆ ಇರುವ ಶಿಲೆಗಳ ಬಗ್ಗೆ ಚಿಂತಿಸಲಿ, ನಿಜವಾಗಿಯೂ ವಿಧಾನ ಸೌಧ ಅಥವಾ ಸರಕಾರಿ ಕಟ್ಟಡಗಳಲ್ಲಿರುವ ಶಿಲೆಗಳು ಅನುಮತಿ ಪಡೆದು ನಿಲ್ಲಿಸಿದ್ದಾರೆಯೇ ಎಂಬುದು ಮೀರಾ ಅವರ ಪ್ರಶ್ನೆ?.
ಹಾಗೆ ನೋಡಿದರೆ ಟ್ರಸ್ಟ್ ನ ಅಂಬೇಡ್ಕರ್ ಶಿಲೆ 20 ವರ್ಷದ ಹಿಂದೆ ಸ್ಥಾಪಿತವಾಗಿದ್ದು, ಇಲ್ಲಿಯವರೆಗೂ ಯಾರಿಗೂ ಯಾವುದೇ ತೊಂದರೆಯಾಗಿದ್ದಿಲ್ಲ, ಆದರೆ ಯಾರೋ ಒಬ್ಬರ ದೂರಿನ ಮೇರೆಗೆ ಈ ರೀತಿ ಶಿಲೆಯನ್ನೂ ತೆರವು ಮಾಡಿರುವುದು ಹೀನಾಯ ಕೃತ್ಯ ಎಂಬುದು ಮೀರಾ ಅವರ ಅಭಿಪ್ರಾಯ. ಟ್ರಸ್ಟ್ ಗೆ ತಿಳುವಳಿಕೆ ಮುಂಗಡ ಪತ್ರವನ್ನು ನೀಡದೆ ಏಕಾ ಏಕಿ ರಾತ್ರೋ ರಾತ್ರಿ ಪ್ರತಿಮೆಯನ್ನು ತೆರವು ಮಾಡಿರುವುದು ಎಷ್ಟು ಸರಿ ಎಂಬುದು ಸ್ಥಳೀಯ ನಾಗರಿಕರ ಹಾಗೂ ಟ್ರಸ್ಟ್ ನವರ ಮನದಾಳದ ಮಾತಾಗಿದೆ. ಒಟ್ಟಿನಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಈ ರೀತಿಯಾಗಿ ನಡೆಸಿಕೊಂಡಿರುವುದು ಹ್ಯೇಯ ಕೃತ್ಯವೇ ಸರಿ. ಇನ್ನಾದರೂ ಅಧಿಕಾರಿಗಳು ಜನರ ಭಾವನೆ ಸ್ಪಂದಿಸುವುದು ಉತ್ತಮ ಎಂಬುದು ಜನರ ಅಭಿಪ್ರಾಯ. ಅಂಬೇಡ್ಕರ್ ರವರ ಪ್ರತಿಮೆಗೆ ಜಾಗ ನೀಡದಷ್ಟು ಬಡವಾಯಿತೆ ಬಿಬಿಎಂಪಿ.
0 Comments