Ticker

6/recent/ticker-posts

Ad Code

Responsive Advertisement

ಸಧೃಡ ದೇಶ ನಿರ್ಮಾಣಕ್ಕೆ ಸಮರ್ಥ ಸಂವಿಧಾನ ಇರಬೇಕು: ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ : ಸಧೃಡ ದೇಶ ನಿರ್ಮಾಣಕ್ಕೆ ಸಮರ್ಥ ಸಂವಿಧಾನ ಇರಬೇಕು. ಇಂತಹ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್‍ಗೆ ಗಣರಾಜ್ಯೋತ್ಸವವನ್ನು ಅರ್ಪಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.


ಪಟ್ಟಣದಲ್ಲಿ ತಾಲೂಕು ಆಡಳಿತ, ಪುರಸಭೆಯಿಂದ ನಡೆದ 73ನೇ ಗಣರಾಜ್ಯೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜ.26 ದೇಶದ ಸಾರ್ವಭೌಮತ್ವವನ್ನು ಎತ್ತಿಹಿಡಿದ ದಿನ. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತಕ್ಕೆ ಜಾತ್ಯಾತೀತ ಹಾಗೂ ಸಾಮಾಜಿಕ ನ್ಯಾಯದ  ತಳಹದಿಯ ಮೇಲೆ ರಚಿಸಿದ ನಮ್ಮ ಸಂವಿಧಾನ ಜಾರಿಯಾದ ದಿನವಾಗಿದ್ದು, ಇದರಲ್ಲಿನ ಮೂಲಭೂತ ಹಕ್ಕನ್ನು ಅನುಭವಿಸುವ ನಾವೆಲ್ಲ ಮೂಲಭೂತ ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸಿ ದೇಶದ ಅಭಿವೃದ್ಧಿಗೆ ಕಾರಣರಾಗಬೇಕು. ಇಂತಹ ದೇಶದ ಪ್ರಗತಿಗೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಮಧುಗಿರಿ ಕೂಡ ಹಲವಾರು ಜನಪ್ರತಿನಿಧಿಗಳಿಂದ ಅಭಿವೃದ್ಧಿ ಹೊಂದಿದ್ದು, ಅವರಿಗೆಲ್ಲ ಅಭಿನಂದನೆಗಳು. ಕುಮಾರಸ್ವಾಮಿ ಅವಧಿಯಲ್ಲಿ ಕೈಗಾರಿಕಾ ವಲಯ ಮಂಜೂರಾಗಿದ್ದು, 334 ಎಕರೆಯಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ನಂಜುಂಡಪ್ಪನವರ ವರದಿಯಂತೆ ಬರಗಾಲ ಪ್ರದೇಶದವಾದ ಈ ಉಪವಿಭಾಗ ಅಭಿವೃದ್ಧಿಗೆ ಕಂದಾಯ ಜಿಲ್ಲೆಯ ಅವಶ್ಯಕತೆಯಿದ್ದು, ನಿಸರ್ಗದ ಸಂಪತ್ತಾಗಿ ಏಕಶಿಲಾ ಬೆಟ್ಟವಿದೆ. ಇದನ್ನು ಪ್ರವಾಸಿತಾಣವಾಗಿಸಿದರೆ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಶಾಶ್ವತ ನೀರಾವರಿ, ಎತ್ತಿನಹೊಳೆಗೆ ಹೆಚ್ಚಿನ ಅನುದಾನದ ಅಗತ್ಯವಿದ್ದು, ಬಿಜೆಪಿ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಮಲತಾಯಿ ಧೋರಣೆ ತೋರುತ್ತಿರುವುದು ಸರಿಯಲ್ಲ. ಕರೊನಾ ನಿರ್ಮೂಲನೆಗೆ ಎಲ್ಲರೂ ಕಡ್ಡಾಯವಾಗಿ ಸ್ವಯಂ ರಕ್ಷಣಾ ಕೆಲಸಕ್ಕೆ ಮುಂದಾಗಬೇಕು. ನಿಮ್ಮ ಆರೋಗ್ಯ ನಿಮ್ಮ ಕೈಲಿದ್ದು, ಕರೊನಾ ಓಡಿಸಲು ಸಹಕರಿಸಿ ಎಂದರು.

ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿ, ರಾಜ ಪ್ರಭುತ್ವ ಹೋಗಲಾಡಿಸಿ ಇಂದು ಪ್ರಜಾ-ಪ್ರಭುತ್ವವನ್ನು ಜಾರಿಗೆ ತಂದ ದಿನ. ಅಂಬೇಡ್ಕರ್‍ರವರ ನಾಯಕತ್ವದಲ್ಲಿ ವಿಶ್ವದ ಏಕೈಕ ಸಾಮಾಜಿಕ ನ್ಯಾಯದ ಪ್ರತಿರೂಪವಾಗಿ ಸಂವಿಧಾನವನ್ನು ರಚಿಸಲಾಗಿದೆ. ಸಾಕಷ್ಟು ಸಂಕಷ್ಟಗಳ ನಡುವೆ ದೇಶಪ್ರೇಮ ಹಾಗೂ ದೇಶವನ್ನು ಅಭಿವೃದ್ಧಿ ಮಾಡಲು ಸಂವಿಧಾನ ನಮಗೆ ಅವಕಾಶ ನೀಡಿದೆ. ಇಂತಹ ದೇಶಕ್ಕೆ ನಾವೆಲ್ಲ ಪ್ರಾಮಾಣಿಕವಾಗಿ ದುಡಿಯಬೇಕು. ಅನ್ನ ನೀಡುವ ರೈತ ಹಾಗೂ ದೇಶ ಕಾಯುವ ಯೋಧರನ್ನು ನೆನೆಯುವ ಜೊತೆಗೆ ಸಮರ್ಥ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್‍ರವರ ಆಶಯಗಳನ್ನು ನಾವೆಲ್ಲ ಪಾಲಿಸುವ ಜೊತೆಗೆ ದೇಶದ ಸಾರ್ವಭೌಮತ್ವವನ್ನು ಕಾಪಾಡಬೇಕು ಎಂದರು.

ಮಧುಗಿರಿ ಹಿಂದುಳಿದ ಸ್ವತಂತ್ರ ಪೂರ್ವದ ಉಪವಿಭಾಗ. ಈ ಭಾಗ ಅಭಿವೃದ್ಧಿಯಾಗಲು ಜಿಲ್ಲಾಕೇಂದ್ರವಾಗಬೇಕು. ಸರ್ಕಾರ ಮಲತಾಯಿ ಧೋರಣೆ ಬಿಟ್ಟು ಕಂದಾಯ ಜಿಲ್ಲೆಯೆಂದು ಘೋಷಿಸಬೇಕು.

- ಎಂ.ವಿ.ವೀರಭದ್ರಯ್ಯ, ಶಾಸಕರು. 

ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಗೌರವಿಸಲಾಯಿತು. ಗ್ರೇಡ್-2 ತಹಶೀಲ್ದಾರ್ ಕಮಲಮ್ಮ, ಡಿಡಿಪಿಐ ಕೃಷ್ಣಮೂರ್ತಿ, ತಾ.ಪಂ.ಇಓ ಲಕ್ಷ್ಮಣ್, ಎಡಿ ಮಧುಸೂಧನ್, ಪುರಸಭೆ ಸದಸ್ಯರಾದ ಎಂ.ಆರ್.ಜಗನ್ನಾಥ್, ಕೆ.ನಾರಾಯಣ್, ಮುಖ್ಯಾಧಿಕಾರಿ ನಜ್ಮಾ, ಬಿಇಓ ನಂಜುಂಡಯ್ಯ, ಅರಣ್ಯಾಧಿಕಾರಿ ರವಿ, ಟಿಹೆಚ್‍ಓ ಡಾ.ರಮೇಶ್‍ಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ, ಕಲಾರಂಗದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಆಯುಕ್ತ ಭಾಸ್ಕರ್‍ರೆಡ್ಡಿ, ಸಿಡಿಪಿಓ ಅನಿತಾ, ತಾಲೂಕು ಮಟ್ಟದ ಅಧಿಕಾರಿಗಳಾದ ರಾಜಗೋಪಾಲ್, ಸುರೇಶ್‍ರೆಡ್ಡಿ, ವಿಶ್ವನಾಥಗೌಡ, ಲಕ್ಷ್ಮೀನರಸಯ್ಯ, ರಾಮದಾಸು, ಡಾ.ಗಿರೀಶ್‍ಬಾಬು ರೆಡ್ಡಿ, ಸಿಪಿಐ ಸರ್ದಾರ್,  ಪಿಎಸೈ ಲಕ್ಷ್ಮೀನಾರಾಯಣ್ ಹಾಗೂ ಇತರರು ಇದ್ದರು.

Post a Comment

0 Comments

Ad Code

Responsive Advertisement