Ticker

6/recent/ticker-posts

Ad Code

Responsive Advertisement

ಡಾ.ಅಶ್ವತ್ಥನಾರಾಯಣ ಅವರ ಮೇಲೆ ಹಲ್ಲೆಗೆ ಯತ್ನ -ಬಳ್ಳಾರಿ ಯುವಮೋರ್ಚ ಖಂಡನೆ

ಬಳ್ಳಾರಿ :ರಾಮನಗರ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಎದುರಲ್ಲೇ ಕಾಂಗ್ರೆಸ್ಸಿನ ಸಂಸದ ಡಿಕೆ ಸುರೇಶ ಮತ್ತು ವಿಧಾನ ಪರಿಷತ್ ಸದಸ್ಯ ರವಿಯವರು ಸಚಿವರಾದ ಡಾ.ಅಶ್ವತ್ಥನಾರಾಯಣ ಅವರ ಮೇಲೆ ಹಲ್ಲೆಗೆ ಯತ್ನಿಸಿ, ಮೈಕ್ ಕಸಿದು, ತಳ್ಳಾಟ ನಡೆಸಿ ಅಮಾನವೀಯವಾಗಿ ಅಸಭ್ಯ ಹಾಗೂ ಗೂಂಡಾ ವರ್ತನೆಗೆ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕ ವತಿಯಿಂದ  ಬಳ್ಳಾರಿಯಲ್ಲಿ  ಸಂಜೆ 7 ಗಂಟೆಗೆ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೂಡಲೇ ಸಂಸದ  ಡಿಕೆ ಸುರೇಶ ಮತ್ತು ವಿಧಾನ ಪರಿಷತ್ ಸದಸ್ಯ ರವಿಯವರನ್ನು ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ಒತ್ತಾಯ ಮಾಡಲಾಯಿತು.



ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಕಾರ್ಯ ಕಾರಿಣಿ ಸದಸ್ಯರಾದ ಅಡವಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಸ್.ರಾಘವೇಂದ್ರ ಛಲವಾದಿ, ಜಿಲ್ಲಾ ಪದಾಧಿಕಾರಿಗಳಾದ ಅಶೋಕ್, ಸಿದ್ದೇಶ, ನಗರ ಅಧ್ಯಕ್ಷ ಕೆ.ವೆಂಕಟೇಶ, ಪ್ರಧಾನ ಕಾರ್ಯದರ್ಶಿ ಕೆ.ರಾಮಾಂಜನೇಯ, ಕೆ.ಎ.ವೇಮಣ್ಣ, ಕೆ.ಆರ್.ಮಲ್ಲೇಶ ಕುಮಾರ, ಸುಗುಣ, ಪುಷ್ಪ, ಯುವ ಮೋರ್ಚಾ ನಗರ ಅದ್ಯಕ್ಷ ಅರುಣ್ ಬಾಲಚಂದ್ರ, ಓಂ ಪ್ರಕಾಶ, ಉಮೇಶ, ಕುಮಾರ, ಮಲ್ಲೇಶ ಮತ್ತಿತರ ಯುವಕರು ಪಾಲ್ಗೊಂಡಿದ್ದರು.


Post a Comment

0 Comments

Ad Code

Responsive Advertisement