Ticker

6/recent/ticker-posts

Ad Code

Responsive Advertisement

ಸ್ವಚ್ಛ ಬಳ್ಳಾರಿ, ಸ್ವಸ್ಥ ಬಳ್ಳಾರಿ ಅಭಿಯಾನ :100 ದಿನದ ಬಳ್ಳಾರಿ ಕ್ಲೀನ್ ಮಿಷನ್: ಪ್ರೀತಿ ಗೆಹ್ಲೊಟ್

ಬಳ್ಳಾರಿ:ಸ್ವಚ್ಛತೆಯಲ್ಲಿ ಬಳ್ಳಾರಿ ಮಹಾನಗರವನ್ನು ಟಾಪ್ 50ರ ಒಳಗೆ ತರುವ ಗುರಿಯೊಂದಿಗೆ 100 ದಿನಗಳ ಕ್ಲೀನ್ ಬಳ್ಳಾರಿ ಹೆಸರಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೊಟ್ ಹೇಳಿದರು.

ಪಾಲಿಕೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ ಕಾರ್ಯಕ್ರಮದಡಿ ದೇಶದಲ್ಲಿ ಅನೇಕ ಕಾರ್ಯಕ್ರಮ ನಡೆಯುತ್ತಿವೆ. ಇದೇ ಮಾದರಿಯಲ್ಲಿ ನಮ್ಮಲ್ಲೂ ಸಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ನಾಳೆಯಿAದ 100 ದಿನದ ಕಾರ್ಯಾಚರಣೆ ನಡೆಯಲಿದೆ. ಮಿಷನ್ ಮೋಡ್‌ನಲ್ಲಿ ಸ್ವಚ್ಛತಾ ಕೆಲಸ ಕೈಗೊಳ್ಳಲಾಗುವುದು. ಇದಕ್ಕೆ ಮಹಾನಗರ ಪಾಲಿಕೆಯ ಜನರ ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಕಸ ಚೆಲ್ಲುವ ಬದಲು ಒಣ, ಹಸಿ, ಹಾನಿಕಾರಕ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ, ನಮ್ಮ ವಾಹನಗಳಿಗೇ ನೀಡಬೇಕು ಎಂದು ಅವರು ತಿಳಿಸಿದರು.

ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರವಾಗಿ ಪ್ರಚಾರ ಕೈಗೊಂಡಿದ್ದೇವೆ. ಜನರು ನಮ್ಮ ಜೊತೆ ಕೈ ಜೋಡಿಸಬೇಕು ಎಂದು ಕೋರಲಾಗಿದೆ. ಬಳ್ಳಾರಿ ನಗರವನ್ನು ಸ್ವಚ್ಛವಾಗಿಡಲು  ಪಾಲಿಕೆ ಎಲ್ಲಾ ರೀತಿಯ ಸಹಕಾರ ನೀಡಲಿದ್ದು, ಜನರು ಇದಕ್ಕೆ ಪೂರಕವಾಗಿ ಸಹಕರಿಸಬೇಕು ಎಂದು ಅವರು ತಿಳಿಸಿದರು.

ಹಾಲಿ ದೇಶದಲ್ಲಿ ಪ್ರತೀ ವರ್ಷ ಸ್ವಚ್ಛತೆ ವಿಷಯದಲ್ಲಿ ಇಂದೋರ್ ನಂ.1 ಸ್ಥಾನದಲ್ಲಿದ್ದು, ಕರ್ನಾಟಕ ರಾಜ್ಯದಲ್ಲಿ ಮೈಸೂರು ಮೊದಲನೇ ಸ್ಥಾನದಲ್ಲಿದೆ. ಬಳ್ಳಾರಿ ನಗರವು 350ರ ಮೇಲಿನ ಶ್ರೇಯಾಂಕ ಹೊಂದಿದೆ. ಇದರ ಸುಧಾರಣೆ ನಿಟ್ಟಿನಲ್ಲಿ ನಾವು ಕೆಲಸಮಾಡಬೇಕಿದೆ ಎಂದರು.

ಸ್ವಚ್ಛತೆಯ ವಿಷಯಲ್ಲಿ ಮಾದರಿ ವಾರ್ಡ್ಗಳನ್ನು ನಾವೀಗ ಗುರುತಿಸಿದ್ದೇವೆ. 22 ಮತ್ತು 24 ವಾರ್ಡ್ಗಳನ್ನು ಮಾದರಿ ವಾರ್ಡ್ ಮಾಡಲು ಕ್ರಮ ವಹಿಸಿದ್ದೇವೆ. 13 ವಾರ್ಡ್ಗಳಲ್ಲಿ ನಿರಂತರ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ. ಇದರ ಜೊತೆಗೆ ಕಸ ವಿಂಗಡಣೆ ಮತ್ತು ಗೊಬ್ಬರ ಮಾಡುವ ಕುರಿತು ತಿಳಿಸಲು ಕಲಿಕಾ ಕೇಂದ್ರ ತೆರೆಯಲಿದ್ದೇವೆ ಎಂದು ಅವರು ತಿಳಿಸಿದರು.

ಆರೋಗ್ಯ ಶಾಖೆಯ ಮುಖ್ಯಸ್ಥ ಡಾ. ಹನುಮಂತಪ್ಪ ಮಾತನಾಡಿ, ನಮ್ಮ ಸ್ವಚ್ಛ ಬಳ್ಳಾರಿ ಮಿಷನ್ ಸಾಧನೆಗಾಗಿ ಕೆಲ ಎನ್‌ಜಿಒಗಳ ಜೊತೆ ಮಾತಕತೆ ನಡೆಸಿದ್ದೇವೆ. ಪ್ರತೀ ವಾರ್ಡ್ನಲ್ಲಿ ಎನ್‌ಜಿಒ ಕೆಲಸಮಾಡಲಿವೆ. ನಗರದಲ್ಲಿ ಖಾಲಿ ಇರುವ ನಿವೇಶನಗಳನ್ನು ಗುರುತಿಸಿ, ಅವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಿದ್ದೇವೆ. ಮಾಲೀಕರಿಗೆ ನೋಟಿಸ್ ನೀಡಿದ್ದೇವೆ. ಹಾಲಿ ನಗರದಲ್ಲಿ 317 ನಿವೇಶನಗಳಲ್ಲಿ ಕಸ ಹಾಕಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಹಾನಗರ ವ್ಯಾಪ್ತಿಯಲ್ಲಿ ಒಟ್ಟಾರೆ 15000 ನಾಯಿಗಳಿವೆ. ಇವುಗಳಿಗೆ ಲಸಿಕೆ ನೀಡುವ ಕಾರ್ಯ ಇದೀಗ ಆರಂಭ ಆಗಿದೆ. ಮುಂದಿನ ದಿನಗಳಲ್ಲಿ ನಾಯಿಗಳ ಸಂತತಿ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.


Post a Comment

0 Comments

Ad Code

Responsive Advertisement