ರಾಜ್ಯದ ಕೆ.ಎಫ್.ಸಿ.ಎಸ್.ಸಿ. ಗೋಡನ್‌ಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರ ಶೋಷಣೆ, ಅರ್ಹ ಸವಲತ್ತುಗಳನ್ನು ನೀಡದಿರುವ ಬಗ್ಗೆ ಹಾಗೂ ಇನ್ನಿತರ ಬೇಡಿಕೆಗಳನ್ನು ಒತ್ತಾಯಿಸಿ ದಿನಾಂಕ: 17-01-2022, ಸೋಮವಾರದಿಂದ ರಾಜ್ಯದಾದ್ಯಂತ ಆಯಾ ಗೋಡನ್‌ಗಳ ಮುಂದೆ ಶಾಂತಿಯುತ ಮುಷ್ಕರ ನಡೆಸಲಾಗುತ್ತಿದೆ.
ಕಾರ್ಮಿಕರ ಬೇಡಿಕೆಗಳು :
* ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರಿಗೆ ಸಾರಿಗೆ ಗುತ್ತಿಗೆದಾರರಾಗಲೀ ಅಥವಾ ಗೋಡನ್ ವ್ಯವಸ್ಥಾಪಕರಾಗಲೀ ವೇತನ ಚೀಟಿ, ಉದ್ಯೋಗ ಪತ್ರ, ಗುರುತಿನ ಚೀಟಿ, ಹಕ್ಕಿನ ರಜೆಗಳ ಸವಲತ್ತು ಕೂಡಲೇ ನೀಡಬೇಕು.
* ರಾಜ್ಯದ ಎಲ್ಲಾ ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರಿಗೆ ಭವಿಷ್ಯನಿಧಿ, ಇ.ಎಸ್.ಯ. ಕಟ್ಟಬೇಕಿರುವ ದಿನಾಂಕದಿAದ ಕಟ್ಟಿಸಿ ಅದರ ಸಂಪೂರ್ಣ ಮಾಹಿತಿಯನ್ನು ನಮ್ಮ ಸಂಘಟನೆಗೆ ನೀಡಬೇಕು.
* ರಾಜ್ಯದ ಗೋಡನ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 2018ರಲ್ಲಿ ರೂ.16/- ಹೆಚ್ಚಳ ಮಾಡಿದ್ದಾರೆ. ಅಂದಿನಿAದ ಬೆಲೆ ಏರಿಕೆ, ಜೀವನ ನಿರ್ವಹಿಸಲು ಕಷ್ಟಕರವಾಗಿರುವುದರಿಂದ ಇಂದು ಕಾರ್ಮಿಕರಿಗೆ ಲೋಡಿಂಗ್ ಅಂಡ್ ಅನ್‌ಲೋಡಿಂಗ್‌ಗೆ 16/- ರೂ.ಗಳಿಂದ 25/- ರೂ.ಗಳಿಗೆ ಹೆಚ್ಚಿಸಿ, ಅದೇ ರೀತಿ ಎಫ್.ಸಿ.ಐ. ನಿಂದ ಕೆ.ಎಫ್.ಸಿ.ಎಸ್.ಸಿ.ಗೆ ಬರುವ ಅನ್‌ಲೋಡಿಂಗ್ ದರವನ್ನು ರೂ.08/- ರಿಂದ 13/- ರೂ.ಗೆ ಹೆಚ್ಚಳ ಮಾಡಬೇಕು.
* ಕಾರ್ಮಿಕ ಕಾಯಿದೆ ಪ್ರಕಾರ ಕಾರ್ಮಿಕರಿಗೆ ಕೆಲಸದ ವೇಳೆ, ನಿವೃತ್ತಿಯಾದ ಕಾರ್ಮಿಕರಿಗೆ ಗ್ರಾಚ್ಯುಟಿ ಮತ್ತು ನಿವೃತ್ತಿ ವೇತನ ನೀಡಬೇಕು.
* ಕಾರ್ಮಿಕರಿಗೆ ಕಾನೂನಿನ ಪ್ರಕಾರ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು.
* ಭಾರತದ ಆಹಾರ ನಿಗಮದಲ್ಲಿ (ಎಫ್.ಸಿ.ಐ) ನೀಡುತ್ತಿರುವ ವೇತನದ ಪ್ರಕಾರ ಕೆ.ಎಫ್.ಸಿ.ಎಸ್.ಸಿ. ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರಿಗೂ ಸವಲತ್ತು ನೀಡಬೇಕು.
* ಕಾರ್ಮಿಕರಿಗೆ ಅಪಘಾತ ಉಂಟಾದರೂ ಯಾವುದೇ ಪರಿಹಾರ ನೀಡುತ್ತಿಲ್ಲ ಅದನ್ನು ನೀಡಬೇಕು.
ಕೆಲವು ಗೋಡನ್‌ಗಳಲ್ಲಿ ಗೋಡನ್ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪರು ಮತ್ತು ಉಪ ನಿರ್ದೇಶಕರು ಕಾರ್ಮಿಕರಿಗೆ ಬೆದರಿಕೆ ಹಾಕುತ್ತಿರುವುದಲ್ಲದೇ ನಿಮ್ಮ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿ ಬಂಧಿಸಲಾಗುವುದೆAದು ಬೆದರಿಕೆ ಹಾಕಲಾಗುತ್ತದೆ. ಇದನ್ನು ನಮ್ಮ ಸಂಘ ತೀವ್ರವಾಗಿ ಖಂಡಿಸುತ್ತದೆ. ಎಂದು ಕರ್ನಾಟಕ ಫುಡ್ ಅಂಡ್ ಸಿವಿಲ್ ಸಪ್ಲೆöÊ ಕರ್ಪೊರೇಷನ್ ಲೋಡಿಂಗ್ ಅಂಡ್ ಅನ್ ಲೋಡಿಂಗ್ ಲೇರ‍್ಸ್ ಯೂನಿಯನ್ ನ ಅಧ್ಯಕ್ಷರಾದ ಜಿ.ಆರ್. ಶಿವಶಂಕರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
0 Comments