ಮಧುಗಿರಿ: ರಜೆ ಮೇಲೆ ಊರಿಗೆ ಬಂದಿದ್ದ ಸುಬೇದಾರ್ ವಸಂತರಾಜ್ ರವರು ಅಪಘಾತದಲ್ಲಿ ಮರಣ ಹೊಂದಿದ ಘಟನೆ ನಡೆದಿದೆ.
ತಾಲೂಕಿನ ಐ.ಡಿ.ಹಳ್ಳಿ ಹೋಬಳಿ ಹೂವಿನಹಳ್ಳಿ ಗ್ರಾಮದ ವಸಂತರಾಜ್ ಹೆಚ್.ಕೆ.(42)ರವರು ಭಾರತೀಯ ಸೇನೆಯ 35ಎಫ್.ಡಿ ಆರ್ಟಿಲರಿ ರೆಜಿಮೆಂಟಿನಲ್ಲಿ ಅಸ್ಸಾಂ ರಾಜ್ಯದ ಮಿಸ್ಸೆಮರಿಯಲ್ಲಿ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಳೆದ ತಿಂಗಳು ರಜೆ ಪಡೆದುಕೊಂಡು ಬಂದಿದ್ದರು. ಹುಟ್ಟೂರಿಗೆ ಬಂದು ಸಂಬಂಧಿಕರು, ಸ್ನೇಹಿತರೊಂದಿಗೆ ಕಾಲಕಳೆದಿದ್ದರು. ಬೆಳಗಾಂನಲ್ಲಿ ಇವರ ಕುಟುಂಬ ವಾಸವಿದ್ದು ವಾಪಸ್ ಬೆಳಗಾಂಗೆ ತೆರಳುವಾಗ ಶನಿವಾರ ಧಾರವಾಡದ ಬಳಿ ಕಾರು ಮತ್ತು ಲಾರಿಯ ನಡುವೆ ನಡೆದ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಇನ್ನೂ ಎರಡು ವರ್ಷ ಸೇವಾ ಅವಧಿಯಿದ್ದ ಇವರು ಪತ್ನಿ ಹಾಗೂ ಒಬ್ಬ ಪುತ್ರ , ಪುತ್ರಿಯನ್ನು ಅಗಲಿದ್ದಾರೆ.
ಅಂತಿಮ ನಮನ:
ಶಾಸಕ ಎಂ.ವಿ.ವೀರಭದ್ರಯ್ಯ, ಸೇನಾಧಿಕಾರಿಗಳು , ತಹಸೀಲ್ದಾರ್ ಅರುಂಧತಿ, ಉಪತಹಶೀಲ್ದಾರ್ ಇನಾಯತುಲ್ಲಾ, ವಿಎ ಜಗದೀಶ್, ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಅಗಲಿದ ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ವರದಿ: ನಾಗೇಶ್ ಜೀವಾ ಮಧುಗಿರಿ.
0 Comments