Ticker

6/recent/ticker-posts

Ad Code

Responsive Advertisement

ಅನಧಿಕೃತ ಮದ್ಯವನ್ನು ನಾಶಪಡಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು.

 ವಿವಿಧ ಮೊಕದ್ದಮೆಗಳಲ್ಲಿ  ವಶಪಡಿಸಿಕೊಂಡಿದ್ದ ಅನಧಿಕೃತ  ಮದ್ಯವನ್ನು  ನಾಶಪಡಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು.





ಮಧುಗಿರಿ :ವಿವಿಧ  ಅಬಕಾರಿ ಮೊಕದ್ದಮೆಗಳಲ್ಲಿ ವಶಪಡಿಸಿಕೊಂಡಿ, ಹಸ್ತಾಂತರಿಸಿರುವ ಮಧ್ಯ,ಬಿಯರ್, ಸೆಂದಿಯನ್ನು  ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ನ್ಯಾಯಾಲಯದ ಆದೇಶದ  ಮಧುಗಿರಿ  ಪ್ರಭಾರ ತಹಶೀಲ್ದಾರ್  ಕಮಲಮ್ಮ    ಹಾಗೂ ಶಿರಾ ಡಿಪೋ ಮ್ಯಾನೇಜರ್ ವೀರಾರೆಡ್ಡಿ, ಅಬಕಾರಿ ಅಧೀಕ್ಷಕರಾದ ಸುರೇಶ ಆರ್ ಮತ್ತು ಅಬಕಾರಿ ನಿರೀಕ್ಷಕರಾದ ರಾಮ್ ಮೂರ್ತಿ ಎಸ್ ಇವರ ಸಮೂಹದಲ್ಲಿ  ಒಟ್ಟು 220 ಮೊಕದ್ದಮೆಗಳಲ್ಲಿ  ಇಲಾಖೆಯು  ವಶಪಡಿಸಿಕೊಂಡಿರುವ ಮಧ್ಯ, ಬಿಯರ್, ಸೆಂದಿಯನ್ನು  ತಮಗೆ ಸೇರಿದ್ದೆಂದು ಯಾರು ಸಹ ಸೂಕ್ತ ದಾಖಲೆಗಳೊಂದಿಗೆ ಈ ಪ್ರಾಧಿಕಾರದ ಮುಂದೆ ಅಹವಾಲನ್ನು ಸಲ್ಲಿಸಿರುವುದಿಲ್ಲ,

ಆದ್ದರಿಂದ  ವಶಪಡಿಸಿಕೊಂಡಿರುವ ಮಧ್ಯ, ಬಿಯರ್, ಸೆಂದಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಅಬಕಾರಿ ನಿರೀಕ್ಷಕರು ಮಧುಗಿರಿ ವಲಯ ಇವರ ಶಿಫಾರಸು ಮಾಡಿರುವುದರಿಂದ ಆದೇಶ ಹೊರತುಪಡಿಸಿದ್ದು,  ಈ ವಶಪಡಿಸಿಕೊಂಡಿರುವ ಮಧ್ಯದ ಸುಮಾರು 824.510 ಲೀಟರ್ ಮಧ್ಯ, 42.940   ಲೀಟರ್  ಬಿಯರ್, ಒಟ್ಟು ಅಂದಾಜು ಮೌಲ್ಯ 4 ಲಕ್ಷ ರೂಪಾಯಿಗಳು ಇದ್ದು ಇದನ್ನು ಪುರಸಭಾ ಇಲಾಖೆಯ  ಘನ ತಾಜ್ಯ ವಿಲೇವಾರಿ ಘಟಕದಲ್ಲಿ  ಎಲ್ಲಾ ಮದ್ಯವನ್ನು ನಾಶ ಪಡಿಸಿದರು.

ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement