ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಬೆಂಗಳೂರಿನ ಪೂರ್ಣಪ್ರಜ್ಞ ಲೇಔಟ್ ನಲ್ಲಿರುವ ಕಲ್ಪವೃಕ್ಷ ಕ್ಷೇತ್ರ-ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದ ಸಂಯುಕ್ತ ಆಶ್ರಯದಲ್ಲಿ ಜನವರಿ 4 ರಿಂದ 7 ರ ವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಭಜನ-ಪ್ರವಚನ-ಕೀರ್ತನ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ವಿವರಗಳು ಈ ರೀತಿ ಇವೆ :
ಜನವರಿ 4, ಮಂಗಳವಾರ ಸಂಜೆ 6 ಗಂಟೆಗೆ : ಶ್ರೀ ಗೋವರ್ಧನ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ : ಶ್ರೀ ಪವಮಾನಾಚಾರ್ ಕೊಲ೯ಹಳ್ಳಿ ಇವರಿಂದ ಪ್ರವಚನ.
ಜನವರಿ 5, ಬುಧವಾರ ಸಂಜೆ 6 ಗಂಟೆಗೆ : ಶ್ರೀ ಹನುಮಗಿರಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ : ಶ್ರೀ ಪವಮಾನಾಚಾರ್ ಕೊಲ೯ಹಳ್ಳಿ ಇವರಿಂದ ಪ್ರವಚನ.
ಜನವರಿ 6, ಗುರುವಾರ ಸಂಜೆ 6 ಗಂಟೆಗೆ : ವಿದುಷಿ ಶ್ರೀಮತಿ ಗಾಯತ್ರಿ ರವೀಂದ್ರ ಮತ್ತು ಕು|| ಪೂಜಾ ರವೀಂದ್ರ ಇವರಿಂದ "ಹರಿನಾಮ ಸಂಕೀರ್ತನೆ" ವಾದ್ಯ ಸಹಕಾರ : ವಿದ್ವಾನ್ ಶ್ರೀ ಮಧುಸೂದನ ಮುತಾಲಿಕ್ (ತಬಲಾ) ವಿದ್ವಾನ್ ಶ್ರೀ ದುಶ್ಯಂತ್ (ಕೀ-ಬೋರ್ಡ್).
ಜನವರಿ 7, ಶುಕ್ರವಾರ ಸಂಜೆ 6 ಗಂಟೆಗೆ : ಶ್ರೀ ರಮಾ ತ್ರಿವಿಕ್ರಮ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ : ಶ್ರೀ ಪವಮಾನಾಚಾರ್ ಕೊಲ೯ಹಳ್ಳಿ ಇವರಿಂದ ಪ್ರವಚನ.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪೂರ್ಣಪ್ರಜ್ಞ ಬಡಾವಣೆ, ಬೆಂಗಳೂರು-560061
0 Comments