Ticker

6/recent/ticker-posts

Ad Code

Responsive Advertisement

Breaking News: ಅಶ್ವತ್ ನಾರಾಯಣ ಭಾಷಣಕ್ಕೆ ರಾಮನಗರದಲ್ಲಿ ಅಡ್ಡಿ!!

ರಾಮನಗರ, ಜ 03: ಇಂದು ರಾಮನಗರದ ಚಿಕ್ಕಕಾಲ್ಯದಲ್ಲಿ ಸರಕಾರಿ ಕಾರ್ಯಕ್ರಮದಲ್ಲಿ ದೊಡ್ಡ ಯುಧ್ಧ ನಡೆಯೋದೆ ಇತ್ತು. ಇಂದು ಸಂಸದ ಡಿ ಕೆ ಸುರೇಶ್ ಮತ್ತು ಸಚಿವ ಅಶ್ವತ್ ನಾರಾಯಣ್‌ರವರ ಮಧ್ಯ ಸಿಎಂ ಬೊಮ್ಮಾಯಿ ಎದುರಲ್ಲೆ ಗಲಾಟೆ ನಡೆಯಿತು.



ಅಶ್ವತ್ ನಾರಾಯಣರವರು ಭಾಷಣಕ್ಕೆ ನಿಂತಾಗ ರೊಚ್ಚಿಗೆದ್ದ ಸಂಸದ ಡಿ ಕೆ ಸುರೇಶ್. ಇಬ್ಬರು ಮಧ್ಯೆ ಮಾತಿನ ಸಮರವಾಯಿತು. ಮಾತಿನ ಭರದಲ್ಲಿ ಅಶ್ವತ್ ನಾರಯಣ ಅಭಿವೃಧ್ಧಿ ವಿಚಾರವಾಗಿ ಸಂಸದರ ಬಗ್ಗೆ ಮಾತನ್ನಾಡಲು ಆರಂಭಿಸಿದಾಗ ಸಂಸದರು ರೊಚ್ಚಿಗೆದ್ದು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಅಶ್ವತ್ ನಾರಾಯಣರ ಬಳಿ ತೆರಳಿದಾಗ ವೇದಿಕೆ ರಣರಂಗವಾಯಿತು. 

ನಂತರ ಸಿಎಂ ಬೊಮ್ಮಾಯಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಗರ ಮಧ್ಯೆ ಕೈ ಕೈ ಮಿಲಾಯಿಸುವಷ್ಟು ಮಟ್ಟಕ್ಕೆ ಪರಿಸ್ಥಿತಿ ಹೋಗಿದ್ದು ಕಂಡುಬ0ತು. ಸಚಿವರು ಮತ್ತು ಸಂಸದರು ಈ ರೀತಿ ಸಿಎಂ ಹಾಗು ಸಾರ್ವಜನಿಕರ ಮುಂದೆ ನಡದುಕೊಂಡರೆ ಇನ್ನು ಸಾಮಾನ್ಯ ಜನರು ಯಾವ ರೀತಿ ನಡೆದುಕೊಳ್ಳಬಹುದು ಎಂಬ ಪ್ರಶ್ನೆ.

Varthajala Daily, Bengaluru

Post a Comment

0 Comments

Ad Code

Responsive Advertisement