ಮಧುಗಿರಿ:- ತಾಲ್ಲೂಕಿನ ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದನಹಳ್ಳಿ ಗ್ರಾಮದ ಸರ್ವೆ ನಂಬರ್ 5/6ರಲ್ಲಿ ನಿರ್ಮಾಣವಾಗುತ್ತಿರುವ ತೋಟದ ಮನೆ ಕೆಲಸಕ್ಕೆ ಬಳಸುತ್ತಿರುವ ಮರಳು ಯಾವುದೇ ಅಕ್ರಮ ದಿಂದ ಸಾಗಿಸುತ್ತಿಲ್ಲ, ಎತ್ತಿನಗಾಡಿಯ ಮೂಲಕ ನದಿ ಪಾತ್ರದಿಂದ ಸಾಗಿಸಲಾಗುತ್ತಿದೆ ಎಂದು ಪುರವರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಪಿ. ಹನುಮಂತರಾಯಪ್ಪ ತಿಳಿಸಿದರು.
ಈ ಜಮೀನಿನಲ್ಲಿ ಶೆಡ್ ಮನೆ ನಿರ್ಮಾಣ ಮಾಡುತ್ತಿದ್ದು, ಹಲವರು ಅಕ್ರಮವಾಗಿ ಮರಳು ದಾಸ್ತಾನು ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಈ ಭಾಗದಲ್ಲಿ ಮನೆ ನಿರ್ಮಾಣ ಮಾಡಲು ಎತ್ತಿನಗಾಡಿಗಳಲ್ಲಿ ಮರಳು ಒಡೆದುಕೊಂಡು ನಿರ್ಮಿಸುತ್ತಿರುವುದು ಸತ್ಯ ಅದನ್ನು ಹೊರತುಪಡಿಸಿ ಯಾವುದೇ ಮಾರಾಟಕ್ಕಾಗಲಿ ಮತ್ತೊಂದು ವಿಚಾರದಲ್ಲಿ ಯಾರೂ ಮರಳು ದಾಸ್ತಾನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ವಿ. ಜಯ ರುದ್ರಯ್ಯ, ಸಂಕಾಪುರ ದರ್ಶನ್, ರಂಗನಾಥ್, ಅಬ್ದುಲ್ ಸಲಾಂ, ದಿಲೀಪ್ ಕುಮಾರ್, ಜಿಲಾನ್, ರಂಗಶ್ಯಾಮಯ್ಯ ಗಜೇಂದ್ರ, ಸುಧಾಕರ, ಸಂಜಯ್, ಹನುಮಂತರಾಯ, ಅಭಿಜಿತ್ ,ಟಿ .ಎನ್. ಶಿವಶಂಕರ್ ,ಸಿದ್ದೆಶ್, ಗೊಂದಿಹಳ್ಳಿ ಗ್ರಾಪಂ ಸದಸ್ಯ ಶಿವಶಂಕರ್ ರೆಡ್ಡಿ ಹಾಗೂ ಗ್ರಾಮಸ್ಥರು ಮತ್ತಿತರಿದ್ದರು.
0 Comments