Ticker

6/recent/ticker-posts

Ad Code

Responsive Advertisement

Breaking News: ಸಿದ್ದರಾಮಯ್ಯ ಭೇಟಿಗೆ ಕಾರಣವೇನು ಗೊತ್ತ: ಜೆಡಿಎಸ್ ಪುಟ್ಟರಾಜು

ಮಂಡ್ಯ, ಜ 28: ಮಂಡ್ಯದ ಮಾಜಿ ಸಂಸದ ಹಾಗು ಮಾಜಿ ಶಾಸಕ, ಸಚಿವ ಪುಟ್ಟರಾಜುರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬೇಟಿ ಮಾಡಿರುವುದು ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ದಾರಿಯಾಗಿರುವುದು ಸುಳ್ಳಲ್ಲ. ಈಗಾಗಲೇ ಕೆಲವು ಮಾಧ್ಯಮಗಳಲ್ಲಿ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡುತ್ತಿರುವ ಹೊತ್ತಲ್ಲಿ ಮೌನಿಯಾಗಿದ್ದ ಮಂಡ್ಯದ ಮಾಜಿ ಸಂಸದ ಹಾಗು ಮಾಜಿ ಶಾಸಕ, ಸಚಿವರಾಗಿದ್ದ ಪುಟ್ಟರಾಜುರವರು ಮೌನ ಮುರಿದಿದ್ದಾರೆ.

ಮಂಡ್ಯದ ಮಾಜಿ ಸಂಸದ ಹಾಗು ಮಾಜಿ ಶಾಸಕ, ಸಚಿವರಾಗಿದ್ದ ಪುಟ್ಟರಾಜುರವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಂದು ಸುದ್ದಿ ಹರಿದಾಡುತ್ತಿದೆ. ಈ ಸಂಬ0ಧ ತಾವೇ ಸ್ಪಷ್ಟನೆ ನೀಡಿರೋ ಪುಟ್ಟರಾಜುರವರು, ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡೋ ಮಾತೇ ಇಲ್ಲ ಎಂದರು. ಅಲ್ಲದೇ ಮಾನ್ಯ ದೇವೇಗೌಡರ ಗಮನಕ್ಕೆ ತಂದು ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿದ್ದೇನೆಂದರು.

ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸಿದ್ದರಾಮಯ್ಯರವರ ಮನೆಗೆ ಹೋಗಿದ್ದೆ. ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯರವರ ಮನೆಗೆ ಹೋಗಿದ್ದಾಗ ಅಲ್ಲಿಗೆ ಜಮೀರ್ ಅಹ್ಮದ್ ಹಾಗು ಇತರೆ ಕಾಂಗ್ರೆಸ್ ನಾಯಕರು ಆಗಮಿಸಿದ್ದರು. ನಾನಲ್ಲ ಯಾವುದೇ ಕಾರ್ಯಕರ್ತರು ಕೂಡ ಪಕ್ಷ ಬಿಡುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.

ಹೆಚ್. ಡಿ. ದೇವೇಗೌಡರ ದಾರಿಯಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಅವರು ಸಕ್ರಿಯ ರಾಜಕಾರಣದಲ್ಲಿ ಇರೋವರೆಗೂ ಜೆಡಿಎಸ್‌ನಲ್ಲೇ ಇರುತ್ತೇನೆಂದರು. ಪಕ್ಷದ ಯಾವುದೇ ಶಾಸಕರು ಪಕ್ಷ ಬಿಡುವ ಪರಿಸ್ಥಿತಿ ಇಲ್ಲ. ಎಲ್ಲರು ಒಟ್ಟಾಗಿದ್ದೇವೆಂದರು.

Varthajala Daily, Bengaluru

Contact for advertisements 9448119247

Post a Comment

0 Comments

Ad Code

Responsive Advertisement