ಕೊರೊನ ಸಂಕಷ್ಟದ ನಂತರಕನ್ನಡ ನಾಡು-ನುಡಿಗಳು ಅನೇಕ ಆಂತಕಗಳನ್ನು ಎದಿರುಸುತ್ತಿವೆ ಈ ಹೊಸ ಸವಾಲುಗಳಿಗೆ ಹೊಸ ಹೋರಾಟದ ಮಾರ್ಗ ಅನಿವಾರ್ಯವಾಗಿದೆ.ವಿಷಾದದ ಸಂಗತಿ ಎ0ದರೆಕನ್ನಡದ ಬಗ್ಗೆ ಅಪಾರ ಪ್ರೀತಿಇರುವಕನ್ನಡ ಸಂಘಟನೆಗಳು ಬದಲಾದ ಸನ್ನಿವೇಶದಲ್ಲಿಕನ್ನಡ ಸಮಸ್ಯೆಗಳಿಗೆ ಹೇಗೆ ಪರಿಹಾರಕಂಡು ಕೊಳ್ಳಬೇಕು ಎನ್ನುವುದನ್ನುಗ್ರಹಿಸುವಲ್ಲಿ ವಿಫಲವಾಗಿದೆ.
ಈಗ ಕನ್ನಡ ಸಂಘಟನೆಗಳು ಸಾಂಪ್ರದಾಯಿಕ ಪ್ರತಿಭಟನೆಯ ಮಾರ್ಗಗಳನ್ನು ಬಿಟ್ಟು ಹೊಸ ಸಾಧ್ಯತೆಯನ್ನು ಕಂಡುಕೊಳ್ಳಬೇಕಿದೆ ಎಂದು ಸಂಗೊಳ್ಳಿರಾಯಣ್ಣ ಪ್ರಶಸ್ತಿ ಪುರಸ್ಕೃತ ಕನ್ನಡ ಚಿಂತಕ ರಾ.ನಂ. ಚಂದ್ರಶೇಖರಅವರು 02-ಜನವರಿ-2022ರಂದು ಎಚ್‌ಎಎಲ್‌ಕೇಂದ್ರೀಯ ಕನ್ನಡ ಸಂಘವು ಅಯೋಜಿಸಿದ್ದ ಕಾರ್ಖಾನೆಯ ಸಾಧಕರಿಗೆಅಭಿನಂದನೆ ಮತ್ತುರಮಾ ಫಣಿಭಟ್ ಗೋಪಿ ಅವರ ‘ಭಾವಲೋಕ’ ಕೃತಿಯ ಲೋಕಾರ್ಪಣೆಯಕಾರ್ಯಕ್ರಮದಲ್ಲಿಅಭಿನಂದನೆಯನ್ನು ಸ್ವೀಕರಿಸಿ ಮಾತಾನಾಡಿದರು.
ಕಾರ್ಮಿಕ ನಾಯಕನಾಗಲು ಸ್ಥಳೀಯ ಭಾಷೆಯಅರಿವುಅಗತ್ಯವೆಂದು ಕೇರಳದಿಂದ ಬಂದ ನಾನು ಕಾರ್ಮಿಕರೊಡನೆ ಸಂವಹನ ಮಾಡಲುಕನ್ನಡಕಲಿತೆ.ಆ ಕನ್ನಡ ಕಲಿಕೆ ನನ್ನನ್ನುಕಾರ್ಮಿಕ ನಾಯಕನನ್ನಾಗಿ ಮಾಡಿತು.ಅದೇಕನ್ನಡ ಸಂಪರ್ಕ ಮುಂದುವರಿದುಕನ್ನಡ ಸಾಹಿತ್ಯದಅನನ್ಯತೆಯನ್ನು ಮಲಯಾಳಂಗೆ ಪರಿಚಯಿಸಲು ಪ್ರಚೋದಿಸಿತು.ಈ ನನ್ನಕನ್ನಡಅನುವಾದದಕಾಯಕಇಂದು ನನಗೆ ‘ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸಿ’್ತಯನ್ನು ತಂದುಕೊಟ್ಟಿದೆಎAದು ತಿಳಿಸಿದ ಖ್ಯಾತ ಮಲಯಾಳಂ ಸಾಹಿತಿ ರಾಮನ್‌ತಳಿ ಸುಧಾಕರನ್ ಸ್ಥಳೀಯ ಭಾಷೆ ಸಂಸ್ಕೃತಿಯೊAದಿಗೆ ಬೆರೆತರೆಅವರಿಗೆ ಮಾನ್ಯತೆ ಸಿಗುವುದರ ಜೊತೆಗೆ ನಾಡಿನ ಪ್ರಗತಿಗೆ ಕೈ ಜೋಡಿಸಿದ ತೃಪ್ತಿ ಸಿಗುತ್ತದೆ.ಈ ತೃಪ್ತಿಯನ್ನು ಪಡೆಯಲುಎಲ್ಲಾಕನ್ನಡೇತರರುಕನ್ನಡಕಲಿಯಲು ಸೂಚಿಸಿದರು.
ಎಚ್‌ಎಎಲ್‌ಕೇಂದ್ರೀಯಕನ್ನಡ ಸಂಘವು ಸಾಹಿತ್ಯ ಮತ್ತುಕನ್ನಡ ಪರಿಚಾರಿಕೆಯನ್ನುಉತ್ತಮರೀತಿಯಲ್ಲಿ ಮಾಡುತ್ತಿದ್ದುಇದುಎಲ್ಲಾ ಸಂಘಟನೆಗಳಿಗೆ ಅನುಕರಣೀಯವಾಗಿದೆ.ಸಂಘಟನೆಯ ಮಹತ್ವವನ್ನುಅರಿತಿರುವಕಾರ್ಮಿಕರುಕನ್ನಡ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಕನ್ನಡದಉತ್ಕರ್ಷಕ್ಕೆ ಸಹಕರಿಸಬೇಕೆಂದು ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ನಿಕಟ ಪೂರ್ವಅಧ್ಯಕ್ಷೆಡಾ.ವಸುಂಧರ ಭೂಪತಿಅವರು ಮನವಿ ಮಾಡಿಉದಯೋನ್ಮುಖಕಾರ್ಮಿಕ ಬರಹಗಾರರಿಗೆ ಸಾಹಿತ್ಯ ಕಮ್ಮಟಗಳನ್ನು ನಡೆಸುವಂತೆ ಸೂಚಿಸಿದರು.ದೃಷ್ಟಿ ನ್ಯೂನ್ಯತೆಯಕವಿಯತ್ರಿರಮಾ ಫಣಿಭಟ್ ಗೋಪಿ ಅವರ ‘ಭಾವಲೋಕ’ ಕವನ ಸಂಕಲನದಲ್ಲಿ ಪ್ರಕೃತಿ ಮತ್ತು ಪ್ರೇಮದ ಸೇತುವೆಯಾಗಿ ಹಲವು ಕವನಗಳು ಮೂಡಿಬಂದಿವೆ. ಹೊರಗಣ್ಣಿನ ನೋಟವಿಲ್ಲದಿದ್ದರು ಒಳಗಣ್ಣಿನಿಂದ ಮಾನವೀಯ ಸಂಬAಧ, ಪ್ರಕೃತಿಯ ನಿಗೂಢತೆಗಳನ್ನು ಚಿತ್ರಿಸಿರುವ ರೀತಿ ಮುದನೀಡುತ್ತದೆಎಂದುಅಭಿಪ್ರಾಯಪಟ್ಟರು.
ಸಮಾಜದ ಆಗೂ ಹೋಗುಗಳು ಮನುಷ್ಯನ ಮೇಲೆ ಬೀರುವ ಸಂಬ0ಧ ಮತ್ತು ಪ್ರಕೃತಿಯೊಂದಿಗೆ ನನಗಿದ್ದ ಅವಿನಾಭಾವ ನಂಟು ಭಾವಲೋಕ ಕವನ ಸಂಕಲನಕ್ಕೆ ಪ್ರೇರಣೆಎಂದು ಅ0ಧ ಕವಿಯತ್ರಿ ರಮಾ ಫಣಿಭಟ್ ಗೋಪಿ ಅವರು ನುಡಿದರು.
ಪ್ರಸ್ತಾವಿಕ ಮಾತುಗಳನ್ನಾಡಿದ ಸಂಘದ ಅಧ್ಯಕ್ಷ ರಾಮಸ್ವಾಮಿ ಆರ್. ಕಾರ್ಖಾನೆಯಲ್ಲಿ ದುಡಿಯುವವರು ತಮ್ಮ ಅಸಕ್ತಿಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದೊಡ್ಡ ಮಾನ್ಯತೆ ಪಡೆಯುವುದು ಹೆಮ್ಮೆಯ ಸಂಗತಿ. ಇ0ತಹ ವಿಶಿಷ್ಟ ಸಾಧಕರನ್ನು ಗೌರವಿಸುವ ಮೂಲಕ ಹೊಸ ವರ್ಷವನ್ನು ಆಚರಿಸುತ್ತಿದೆ. ಇದೆ ಸಂದರ್ಭದಲ್ಲಿ ಕಾರ್ಖಾನೆಯಲ್ಲಿರುವ ಬರಹಗಾರರನ್ನು ಪ್ರೋತ್ಸಾಹಿಸುವ ಯೋಜನೆಯನ್ನುರೂಪಿಸುತ್ತಿದೆಎಂದರು. ಪ್ರಾರ0ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ರಾಜೇಶ್ ಸ್ವಾಗತಿಸಿದರು.
ಚಂದ್ರಶೇಖರಪ್ಪಅವರು ವಂದನಾರ್ಪಣೆಯನ್ನು ಮಾಡಿದರು.
ಎಚ್‌ಎಎಲ್ ಲಲಿತಕಲಾ ಸಂಘದ ಕಾರ್ಯದರ್ಶಿ ಎಸ್. ರಾಜುಹಾಸನ್ ಭಾಗವಹಿಸಿದ್ದರು.
0 Comments