Ticker

6/recent/ticker-posts

Ad Code

Responsive Advertisement

ಮಾಜಿ ಸೈನಿಕರಿಗೆ ಕೊಡುವ ಸೌಲಭ್ಯ ಅರೆ ಸೈನ್ಯ ಪಡೆಯ ಸೈನಿಕರಿಗೂ ಕೊಡಬೇಕು

ಬಳ್ಳಾರಿ ಜ 02: ಮಾಜಿ ಸೈನಿಕರಿಗೆ ಕೊಡುವಂತ ಎಲ್ಲ ಸೌಲಭ್ಯಗಳನ್ನು ಅರೆ ಸೈನ್ಯ ಪಡೆಯ ಸೈನಿಕರಿಗೂ ಕೊಡಬೇಕು ಎಂದು ಸೈನಿಕರು ಮತ್ತು ಅರೆ ಸೇನಾ ಪಡೆಯ ಸೈನಿಕರು ಎಂಬ ತಾರತಮ್ಯ ಮಾಡಬಾರದು ಎಂದು ಕಲ್ಯಾಣ ಕರ್ನಾಟಕ ಮಾಜಿ ಅರೆಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟೇಶ್‌ರಾವ್, ಗೌರವ ಅಧ್ಯಕ್ಷ ವಿರುಪಾಕ್ಷಯ್ಯ ಸ್ವಾಮಿ ಒತ್ತಾಯಿಸಿದರು. 

ನಗರದ ಪತ್ರಿಕಾಭವನದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾÀ ಮಾಜಿ ಸೈನಿಕರು ಮತ್ತು ಮಾಜಿ ಅರೆ ಪಡೆಯ ಸೈನಿಕರ ಮಧ್ಯೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳಲ್ಲಿ ಜಾರಿಗೆ ಬರುವಂತೆ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಪಿ, ಐಟಿಬಿಪಿ, ಎಎಸ್‌ಎಸ್‌ಎಎಂ ಮತ್ತು ಆರ್‌ಐಎಫ್‌ಎಲ್‌ಇ ಈ ಆರು ಪಡೆಗಳನ್ನು ಸೇರಿಸಿ, ಕಲ್ಯಾಣ ಕರ್ನಾಟಕ ಮಾಜಿ ಅರೆ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ತರಲಾಗಿದ್ದು, ಬಳ್ಳಾರಿ ಸೇರಿದಂತೆ ಆರು ಜಿಲ್ಲೆಗಳಲ್ಲಿ ಸಂಘಟನೆಯನ್ನು ವಿಸತರಿಸಲಾಗುವುದು ಎಂದರು.  ಕೇಂದ್ರ ಸರಕಾರ ಈ ತಾರತಮ್ಯ ನೀತಿ ಅನುಸರಿಸುವುದರನ್ನು ಬಿಟ್ಟು ಮಾಜಿ ಸೈನಿಕರಿಗೆ ನೀಡುವ ಸೌಲಭ್ಯಗಳನ್ನು ನಮಗೂ ನೀಡಬೇಕು. ನಾವು ಅವರಷ್ಟೇ ಕೆಲಸ ಮಾಡಿದ್ದೇವೆ ಎಂದು ಒತ್ತಾಯಿಸಿದ ಅವರು, ಸಂಘದ ಅಡಿಯಲ್ಲಿ ನಾಡಿನ ಅಂಗವಿಕಲರಿಗಾಗಿ ಮಾನಸಿಕ ಅಸ್ವಸ್ಥತೆ, ಕುರುಡರು, ಕಿವುಡರು ಮತ್ತು ಮೂಗರಿಗಾಗಿ ಪತ್ಯೇಕ ಬೋಧನಾ ಶಾಲೆ ವಿಶ್ರಾಂತಿ ಗೃಹ ಶಿಬಿರಗಳನ್ನು ನಡೆಸಲಾಗುವುದು. ಅನಾಥಾಶ್ರಮ, ವೃದ್ಧಾಶ್ರಮ, ದೀನದಲಿತರ ಬಡವರ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಲಾಗಿದೆ ಎಂದು ಅವರು ತಿಳಿಸಿದರು.ನಿವೃತ್ತಿ ಹೊಂದಿದ ಸೈನಿಕರಿಂದ ಶಾಲಾ ಕಾಲೇಜುಗಳಲ್ಲಿ ರಾಷ್ಟçಗೀತೆ, ರಾಷ್ಟç ಲಾಂಛನ, ರಾಷ್ಟçಧ್ವಜ ಮತ್ತು ರಾಷ್ಟçಚಿಹ್ನೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ರಾಷ್ಟಾçಭಿಮಾನ ಮೂಡಿಸುವ ಕೆಲಸವನ್ನು ಮಾಡಲಾಗುವುದು. ಅಲ್ಲದೆ, ಆರು ಜಿಲ್ಲೆಗಳಲ್ಲಿ ಯಾವುದೇ ಕಾರ್ಖಾನೆಗಳಲ್ಲಿ ಭದ್ರತೆ ಉದ್ಯೋಗಗಳಲ್ಲಿ ಮಾಜಿ ಸೈನಿಕರಿಗೆ  ಮೊದಲ ಆದ್ಯತೆ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಸಂಘದ  ಮುಖಂಡರಾದ ಮುದ್ದಯ್ಯ ಸ್ವಾಮಿ, ಬಸವಯ್ಯಸ್ವಾಮಿ, ಪ್ರಹ್ಲಾದರೆಡ್ಡಿ, ಈಶ್ವರಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು. 


Post a Comment

0 Comments

Ad Code

Responsive Advertisement