Ticker

6/recent/ticker-posts

Ad Code

Responsive Advertisement

ಕೊಡಿಗೇನಹಳ್ಳಿ : 87 ಲೀ ಅಕ್ರಮ ಮದ್ಯ ವಶ


ಕೊಡಿಗೇನಹಳ್ಳಿ : ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಸ್ಥಳಗಳಲ್ಲಿ ಸೋಂಕು ಹರಡುವ ಸಂಭವನೀಯತ ಇರುವುದರಿಂದ ಈ ನಿಟ್ಟಿನಲ್ಲಿ ಅಬಕಾರಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಇಲಾಖೆಯು ನಿರಂತರವಾಗಿ ಗಸ್ತು ದಾಳಿ ಕಾರ್ಯ ನಡೆಸಿ ಸುಮಾರು  86.400 ಲೀ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದೆ.

ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮದಿಂದ ಗುಂಡಗಲ್ಲು ಗ್ರಾಮಕ್ಕೆ ತೆರಳುವ ಸಾರ್ವಜನಿಕ ರಸ್ತೆಯಲ್ಲಿ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಬುಧವಾರ ಸಂಜೆ  5 ಗಂಟೆಯ ಸಮಯದಲ್ಲಿ ತಾಲ್ಲೂಕಿನ  ಲಕ್ಷ್ಮೀನರಸಯ್ಯ ಹಾಗೂ ಪಿ ಬಸವರಾಜು ಎಂಬುವವರು ಕೊಡಿಗೇನಹಳ್ಳಿ ಇಂದ ಗುಂಡಗಲ್ಲು ಗ್ರಾಮಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತಿದ್ದಾಗ ಸಿಕ್ಕಿಬಿದ್ದಿದು, ಐ.ಡಿ.ಹಳ್ಳಿ ಹೋಬಳಿ ದೊಡ್ಡದಾಳವಾಟ ಗ್ರಾಮದ ಸಿದ್ದಯ್ಯ ಬಿನ್ ನರಸಪ್ಪ ತಮ್ಮ ಟಾಟಾ ಇಂಡಿಕಾ ಕಾರ್ ನಲ್ಲಿ ಒಟ್ಟು 86.400 ಲೀ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದು ಟಾಟಾ ಇಂಡಿಕಾ ಕಾರನ್ನು ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆರೋಪಿಗಳ ವಿರುದ್ಧ ಘೋರ ಪ್ರಕರಣ ದಾಖಲಿಸಿದಾರೆ.

ಈ ಸಂದರ್ಭದಲ್ಲಿ ಅಬಕಾರಿ ಉಪ ಆಯುಕ್ತರು ಹಾಗೂ ಅಬಕಾರಿ ಉಪ ಅಧೀಕ್ಷಕರÀ  ಸುರೇಶ್ .ಆರ್ ಮಾರ್ಗದಶನದಲ್ಲಿ ಅಬಕಾರಿ ಉಪ ನಿರೀಕ್ಷಕ  ಟಿ ಯೋಗಾನಂದ ಪ್ರಕರಣ ದಾಖಲಿಸಿದ್ದು ಸಿಬ್ಬಂದಿಗಳಾದ ರಾಜೇಶ್, ಮಹಂತೇಶ್ ಕೆ.ಪಿ , ಶ್ರೀಶೈಲಾಪೂಜಾರ್ , ಜಗದೀಶ್.ಜಿ  ದಾಳಿಯಲ್ಲಿ ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement