Ticker

6/recent/ticker-posts

Ad Code

Responsive Advertisement

ರಂಗೋಲಿ ಕಲೆಯಲ್ಲಿ ರಾಯರ ಕಾಣುತ್ತಿರುವ ಶ್ರೀಮತಿ ಉಮಾದೇವಿ

ಇವರು ಬಿಡಿಸುವ ರಂಗೋಲಿಗಳು ನಿಜಕ್ಕೂ ಪರಮಾತ್ಮನಿಗೆ ಪ್ರಿಯವಾಗುವಂತಹುದೇ, ಏಕೆಂದರೆ ಅವುಗಳಲ್ಲಿ ರಂಗೋಲಿ ಕಲೆಯ ಅನುಭವವಲ್ಲದೇ ಅನುಭಾವದ ಸಿಂಚನವೂ ಸೇರಿ ಒಂದು ರೀತಿಯ ಅಲೌಕಿಕ ಅನುಭವವನ್ನು ನೀಡುತ್ತದೆ.









ಇವರು ಶ್ರೀಮತಿ ಉಮಾದೇವಿ. ಗೃಹಿಣಿಯಾಗಿರುವ ಇವರು ಬೆಂಗಳೂರಿನ ಕೃಷ್ಣರಾಜಪುರಂನ ನಿವಾಸಿ, ಇವರ ಪತಿ ಶ್ರೀ ಎ.ಆರ್.ಸೋಮಸುಂದರ್ ರವರು ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಶ್ರೀ ಎ.ಎಸ್. ವೆಂಕಟೇಶ್ ಇವರ ಏಕಮಾತ್ರ ಪುತ್ರ. ಮೊದಲ ವರ್ಷದ ಇಂಜಿನೀಯರಿ0ಗ್ ಓದುತ್ತಿರುತ್ತಾನೆ.

ನಾನು ಇಲ್ಲಿ ಹೇಳ ಹೊರಟಿರುವುದು ಶ್ರೀಮತಿ ಉಮಾದೇವಿಯರಲ್ಲಿ ಅಡಗಿ ಕರಗತವಾಗಿರುವ ಅಧಮ್ಯ ರಂಗೋಲಿ ಕಲೆಯ ಬಗ್ಗೆ. ಈವರೆವಿಗೂ ಸುಮಾರು 300 ಕ್ಕೂ ಹೆಚ್ಚು ವರ್ಣಮಯವಾದ, ಕಣ್ಮನ ಸೆಳೆಯುವಂತಹ ರಂಗೋಲಿಗಳನ್ನು ಬಿಡಿಸಿ ಅಸಂಖ್ಯ ಭಕುತರ, ಕಲಾರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಕೆ.ಆರ್.ಪುರಂನಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇವರು ಬಿಡಿಸುವ ರಂಗೋಲಿಗಳ ವೈಭವವಂತೂ ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳೇ ಧರೆಗಿಳಿದು ಬಂದು ಹರಸಿ ಹೋದಂತ0ಹ ದಿವ್ಯಾನುಭವವನ್ನು ನೀಡುತ್ತದೆ. ಅಷ್ಟು ಸೊಗಸಾಗಿ, ಅಷ್ಟೇ ನಿಖರತೆಯಿಂದ ಕೂಡಿದ ಭವ್ಯವಾದ ವರ್ಣರಂಜಿತ ರಂಗೋಲಿಗಳು ನಿಜಕ್ಕೂ ನೋಡುಗರ ಮನಕ್ಕೆ, ಭಕುತರ ಹೃದಯಕ್ಕೆ ಲಗ್ಗೆ ಇಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಶ್ರೀ  ಬಿ.ಎನ್. ಲಕ್ಷ್ಮೀ ನರಸಿಂಹ ಶಾಸ್ತ್ರಿಗಳ  ಮಗಳಾಗಿರುವ ಶ್ರೀಮತಿ ಬಿ.ಎಲ್.ಉಮಾದೇವಿ ಸುಮಾರು 15 ಬಾರಿ ರಂಗೋಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುತೇಕ ಎಲ್ಲಾ ಸ್ವರ್ಧೆಗಳಲ್ಲೂ ಮೊದಲು ಬಂದಿರುವುದೇ ಇವರ ಹೆಗ್ಗಳಿಕೆ. ತಮ್ಮ ರಂಗೋಲಿ ಕಲೆಯಲ್ಲಿ ಗಿನ್ನಿಸ್ ದಾಖಲೆ ಮಾಡಬೇಕೆಂಬ ಹಂಬಲವಿರುವ ಇವರು ಆ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರಂಗೋಲಿ ಬಿಡಿಸುವಲ್ಲಿ ವಿಶೇಷ ಪರಿಣಿತಿ ಹೊಂದಿರುವ ಶ್ರೀಮತಿ ಉಮಾದೇವಿಯವರನ್ನು ಈ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ: 7848839182   

ಬರಹ: ವಿ.ಎಸ್.ಕುಮಾರ್. ಎಂ.ಎ.ಕನ್ನಡ

ಛಾಯಾಚಿತ್ರಗಳು: ಶ್ರೀಮತಿ ಉಮಾದೇವಿ


Post a Comment

0 Comments

Ad Code

Responsive Advertisement