Ticker

6/recent/ticker-posts

Ad Code

Responsive Advertisement

55 ವರ್ಷಗಳ ಸಾರ್ಥಕ ಸೇವೆಯಲ್ಲಿ ಓದುಗರೊಡನೆಯ ಒಡನಾಟದಲ್ಲಿ . . .

ಭಾರತದ ಅತದೊಡ್ಡ ಪುಸ್ತಕ ಭಂಡಾರವೆ0ಬ ಅಗ್ಗಳಿಕೆಗೆ ಪಾತ್ರವಾಗಿರುವ ಜನಮೆಚ್ಚಿದ ಪುಸ್ತಕ ಭಂಡಾರ ‘ಸಪ್ನ’ ಪುಸ್ತಕಕ್ಕಷ್ಟೇ ಅಲ್ಲ, ಶೈಕ್ಷಣಿಕ ಪೂರಕ ಸಾಮಾಗ್ರಿಗಳಿಗೂ ಅಂದರೆ ಪುಸ್ತಕಗಳು, ಸ್ಟೇಷನರಿ, ಮಲ್ಟಿಮೀಡಿಯಾ, ಗಿಫ್ಟ್÷್ಸ ಟಾಯ್ಸ್ ಮತ್ತು ಸ್ಪೋರ್ಟ್ಸ್, ಚಾಕೋಲೆಟ್ಸ್ ಮುಂತಾದ ಪರಿಕರಗಳ ಪೂರೈಕೆಯ ಪ್ರಖ್ಯಾತಿ ಪಡೆದಿರುವುದು ನಾಡಿನ ಹೆಮ್ಮೆಯ ಪ್ರತೀಕ. ವೈವಿಧ್ಯಮಯ ದೃಷ್ಟಿಯಿಂದಷ್ಟೇ ಅಲ್ಲ. ಆಹ್ಲಾದಕರ ವಾತಾವರಣದ ಆನಂದಮಯ ಪ್ರಪಂಚದಲ್ಲಿ ಮನಸ್ಸಿಗೆ ಮುದ ನೀಡುವ ವಾತಾವರಣದಲ್ಲಿ ಕಣ್ತುಂಬಿಕೊಳ್ಳಲು ಬೇಕಾದಷ್ಟು ಪುಸ್ತಕ, ಹೀಗೆ ...

 


ಬೆಂಗಳೂರು ನಗರದಲ್ಲಿ 9 ಶಾಖೆಗಳು ಹಾಗೂ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ಹೊರ ರಾಜ್ಯದ ಕೊಯಮತ್ತೂರು ನಗರಗಳಲ್ಲಿಯೂ ಸೇರಿದಂತೆ ಒಟ್ಟು 19 ಶಾಖೆಗಳ ಸುಮಾರು 5.5 ಲಕ್ಷ ಚದರ ಅಡಿಗಳ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಓದುಗರ ಕಣ್ಮನ ತಣಿಸುತ್ತಿರುವ ಈ ಜ್ಞಾನ ಕಾಶಿ 1967ರಲ್ಲಿ ಸಂಸ್ಥೆಯ ಸಂಸ್ಥಾಪಕ  ಅಧ್ಯಕ್ಷರಾಗಿದ್ದ 

ಶ್ರೀ ಸುರೇಶ್ ಸಿ. ಷಾ ಇವರಿಂದ ಪ್ರಾರಂಭಿಸಲ್ಪಟ್ಟಿತು. 

1967 ರಲ್ಲಿ 40 ಅಡಿಗಳ ವಿಸ್ತೀರ್ಣದೊಂದಿಗೆ ಪ್ರಾರಂಭವಾಗಿ, ಇಂದು 5.5 ಲಕ್ಷ ಚದರ ಅಡಿಗಳ ವಿಸ್ತೀರ್ಣದೊಂದಿಗೆ ಸುಂದರ ಸುಸಜ್ಜಿತ ಮಾಲ್‌ನಲ್ಲಿ ಆಧುನಿಕ ಶಾಪಿಂಗ್ ಅನುಭವದ ಧಾಟಿಯಲ್ಲಿ, ನೋಡುಗರ ಕಣ್ಮನ ತಣಿಸುವ ಈ ಪುಸ್ತಕ ಕಾಶಿ. ಪ್ರತಿದಿನ ಸುಮಾರು 60 ಸಾವಿರ ಗ್ರಾಹಕರಿಗೆ / ಓದುಗರಿಗೆ ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಅನನ್ಯ, ಅದ್ಭುತ. ಈ ಗಳಿಕೆಯೇ 10+ಮಿಲಿಯನ್‌ಗೂ ಹೆಚ್ಚು ಸಂತುಷ್ಟ ಗ್ರಾಹಕರಿಗೆ ಪ್ರೀತಿಯ, ಮೆಚ್ಚಿನ ಪುಸ್ತಕ ಕಾಶಿ. ಇದಕ್ಕೆ ಕಿರೀಟ ಪ್ರಾಯವಾಗಿ ತನ್ನ ಮುಡಿಗೆ ಹಲವಾರು  ಪ್ರಶಸ್ತಿ ಗೌರವಗಳನ್ನು ಏರಿಸಿಕೊಂಡಿರುವುದು ತನ್ನ ಸೇವೆಗೆ ಸಂದ ಪ್ರತಿಫಲ.

ಈಗ ಸಪ್ನ 55 ವರ್ಷಗಳ ಸಾರ್ಥಕ ಸೇವೆಯ ನೆನಪಿನಲ್ಲಿ ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಸಮಾಜಿಕ, ಶೈಕ್ಷಣಿಕವಾಗಿ ಹಾಗೂ ಬೇರೆ ಬೇರೆ ಆಯಾಮಗಳಲ್ಲಿ ತಾನು ಸಲ್ಲಿಸುತ್ತಿರುವ ಸೇವೆ ಅನನ್ಯ, ಅಮೋಘ.

ಉನ್ಮಾದ ಹಾಗೂ ಉತ್ಸುಕತೆಯ ಮಹತ್ವಾಕಾಂಕ್ಷೆಯಿ0ದ ಈ ಬಾರಿಯ ವಾರ್ಷಿಕೋತ್ಸವವನ್ನು ಇದೇ ಜನವರಿ 26 ರಿಂದ ಫೆಬ್ರವರಿ 06, 2022 ರವರೆಗೂ ಏರ್ಪಡಿಸಿದ್ದು, ಈ ಹನ್ನೆರಡು ದಿನಗಳ ಪ್ರಯಾಣದಲ್ಲಿ ನಮ್ಮ ಸಂತುಷ್ಟ ಗ್ರಾಹಕರಿಗೆ ಸಂತೃಪ್ತಿಯ ಸೇವೆಯನ್ನು ಸಲ್ಲಿಸುವುದೇ ನಮ್ಮ ಧ್ಯೇಯ. ಈ ಅವಧಿಯಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಪುಸ್ತಕಗಳ ಮೇಲೆ ಶೇ. 50% ರವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಈಗಾಗಲೇ ಹೇಳಿರುವಂತೆ ಸಪ್ನ, ಪುಸ್ತಕಕ್ಕೆ ಸೀಮಿತವಿರದೆ ಇಲ್ಲಿ ತನ್ನದೇ ಉತ್ಪಾದನೆಯ ವಸ್ತುಗಳಾದ ಲೇಖನ ಸಾಮಾಗ್ರಿಗಳು, ಫೈಲ್ಸ್, ಫೋಲ್ರ‍್ಸ್, ಡೈರೀಸ್, ನೋಟ್ ಪುಸ್ತಕಗಳು, Sಣoಡಿe-67 ಬ್ರಾಂಡಿನ ಐಟಂಗಳ ಮೇಲೆ ವಿಶೇಷ ರಿಯಾಯಿತಿಯೂ ಇದೆ. ಒಟ್ಟಾರೆ ಇಲ್ಲಿ ಏನಿದೆ ಎಂಬುದಕ್ಕಿ0ತ ಏನೆಲ್ಲಾ ಇವೆ ಎಂಬ ಮಹಾತ್ವಾಕಾಂಕ್ಷೆಯ ವೈವಿಧ್ಯಮಯ ವಿಹಂಗಮ ಭವ್ಯ ನೋಟವನ್ನು ಕಾಣಬಹುದು.

Post a Comment

0 Comments

Ad Code

Responsive Advertisement