ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 11-01-2022 ರಂದು ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2021ನೆಯ ಸಾಲಿನ “ಕನ್ನಡ ಕಾಯಕ ದತ್ತಿ ಪ್ರಶಸ್ತಿ”ಗೆ ಕರ್ನಾಟಕ ಗಡಿಭಾಗದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ವಿರಕ್ತ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತç ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಆರ್. ಶಂಕರಪ್ಪ ಹಾಗೂ ಕೊಪ್ಪಳದಲ್ಲಿರುವ ರಂಗನಿರ್ದೇಶಕರು ಹಾಗೂ ಕಲಾವಿದರು ಆದ ಶ್ರೀ ಕೆ. ಇಮಾಮಸಾಬ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಶಸ್ತಿಯ ಮೊತ್ತ ತಲಾ ರೂ. 10,000 ನಗದು, ಸ್ಮರಣಿಕೆೆ ಹಾಗೂ ಫಲ ತಾಂಬೂಲ ಒಳಗೊಂಡಿರುತ್ತದೆ.
ಪರಮ ಪೂಜ್ಯ ಶ್ರೀ.ಮ.ನಿ.ಪ್ರ ಬಸವಲಿಂಗ ಮಹಾಸ್ವಾಮಿಗಳವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಿಗಳೂರ ಗ್ರಾಮದಲ್ಲಿ ದಿನಾಂಕ 02-04-1971 ರಂದು ವೇ. ನೀಲಕಂಠಯ್ಯ ಸೌ.ಸಾವಿತ್ರಮ್ಮ ತಾಯಿಯವರ ಉದರದಲ್ಲಿ ಜನಸಿದ ಪೂಜ್ಯ ಶ್ರೀಗಳು ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಪೂರೈಸಿ, ಹೆಚ್ಚಿನ ಅಧ್ಯಯನಕ್ಕಾಗಿ ವಿಜಯಪೂರ ಜಿಲ್ಲೆ ಸಾಧನೆಯ ಗರಡಿ ಮನೆಯಂತೆ ಇರುವ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶ್ರೀ ಶಿವಯೋಗ ಮಂದಿರದಲ್ಲಿ ಯೋಗ ಅಧ್ಯಯನ ಜೊತೆಗೆ ಸಂಸ್ಕಾರ ಶಿಕ್ಷಣವನ್ನು ಪಡೆದರು. ತದನಂತರ ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದ ಕುಮಾರೇಶ್ವರ ಶಿವಯೋಗಿ ಸಂಘದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ಜಗದ್ಗುರು ಗಂಗಾಧರ ರಾಜಯೋಗಿಂದ್ರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾಗಿ ಸನ್ 1991 ರಂದು ಮಹಾರಾಷ್ಟç ಮತ್ತು ಕರ್ನಾಟಕ ಗಡಿಭಾಗದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ವಿರಕ್ತ ಮಠಕ್ಕೆ ಪೂಜ್ಯಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳ ಹಾವೇರಿ, ಮಾದನ ಹಿಪ್ಪರಗಿಯ ಮಹಾ ಪೂಜ್ಯರ ಅಪ್ಪಣೆ ಮೆರೆಗೆ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿ ದಿನಾಂಕ 07-05-1997 ರಂದು ಶ್ರೀಮಠಕ್ಕೆ ಪಟ್ಟಾಭಿಷೇಕ ನೆರವೇರಿತು. ಶ್ರೀಮಠಕ್ಕೆ ಪೂಜ್ಯರಾಗಿ ಬಂದ ಬಳಿಕ ಕನ್ನಡ ಸೇವೆಗಾಗಿ `ಗಡಿನಾಡು ಶರಣ ಸಾಹಿತ್ಯ' ಸಂಸ್ಥೆಯನ್ನು ಸ್ಥಾಪಿಸಿದರು. ಕನ್ನಡ ನಾಡಿನ ಹಿರಿಯ ಸಾಹಿತಿಗಳಾದ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಮತ್ತು ಭಾಲ್ಕಿಯ ಪರಮ ಪೂಜ್ಯರು ಸೇರಿದಂತೆ ಅನೇಕ ಮಹನೀಯರ ಮಾರ್ಗದರ್ಶನದಲ್ಲಿ ನಿರಂತರ ಕನ್ನಡ ಸೇವೆ ಮಾಡುತ್ತ ಬಂದಿದ್ದಾರೆ.
* * * *
ಡಾ. ಆರ್. ಶಂಕರಪ್ಪ ಇವರು ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತç ವಿಭಾಗದಲ್ಲಿ ಎಂ.ಎ. ಪದವಿ ಪಡೆದು ಪ್ರಸ್ತುತ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತç ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ 291 ಲೇಖನಗಳು, ವಿವಿಧ ವೃತ್ತ ಪತ್ರಿಕೆ ಮತ್ತು ನಿಯಮ ಕಾಲಿಕೆಗಳಲ್ಲಿ 25 ಸಂಶೋಧನಾ ಲೇಖನಗಳು ಪ್ರಕಟವಾಗಿರುತ್ತವೆ. ಒಟ್ಟು 24 ಪುಸ್ತಕಗಳು, 10 ರಾಜ್ಯಮಟ್ಟದ, 25 ರಾಷ್ಟçಮಟ್ಟದ, 20 ಅಂತರರಾಷ್ಟಿçಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ವಿಷಯಗಳ ಮಂಡನೆ ಆಗಿರುತ್ತದೆ.
2011 ಮತ್ತು 2017ರ ಬಾಂಬೆ ಕುಲಾಲ ಸಂಘದ ಉತ್ತಮ ಲೇಖಕ ಪ್ರಶಸ್ತಿ, 2017ರ ಬೆಂಗಳೂರಿನ ಮಾನವ ಹಕ್ಕುಗಳ ಹಿರತಕ್ಷಣಾ ವೇದಿಕೆಯ Commandation and Leadership Award, 2019ರ ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಟಮಲಿಕ ಪಾಂಡ ಉನ್ನತ ಶಿಕ್ಷಣ ಅಕಾಡೆಮಿಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಇವರಿಗೆ ಸಂದ ಗೌರವಗಳಾಗಿರುತ್ತವೆ. 2019ರ ಮುಳಬಾಗಿಲು ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಆಗಿರುತ್ತಾರೆ.
* * * *
ರಂಗನಿರ್ದೇಶಕರು ಹಾಗೂ ಕಲಾವಿದರು ಆದ ಶ್ರೀ ಕೆ. ಇಮಾಮಸಾಬ, ಕೊಪ್ಪಳ ಇವರು 11-05-1978 ರಿಂದ 1983ರವರೆಗೆ ಕನಕಾಂಗಿ ಕಲ್ಯಾಣ, ರತಿ ಕಲ್ಯಾಣ, ಪ್ರಮೀಳಾದೇವಿ, ಗಿರಿಜಾ ಕಲ್ಯಾಣ, ದಕ್ಷಬ್ರಹ್ಮ, ರಾಮಾಂಜನೇಯ ಯುದ್ಧ ಮುಂತಾದ 225ಕ್ಕೂ ಹೆಚ್ಚು ದೊಡ್ಡಾಟಗಳಲ್ಲಿ ಸಂಗೀತ ನಿರ್ದೇಶಕರಾಗಿ ಮತ್ತು ದಿರ್ಗ್ದಶಕನಾಗಿ ಸೇವೆ ಸಲ್ಲಿಸಿರುತ್ತಾರೆ. ಮಾಯಾ ಕುರುಕ್ಷೇತ್ರ, ರಕ್ತರಾತ್ರಿ, ಚಿತ್ರಾಂಗದ, ನರವೀರ ಪಾರ್ಥ, ಮಹಾರಥಿ ಕರ್ಣ, ವೀರ ಧನಂಜಯ, ಶ್ರೀಕೃಷ್ಣ ಗಾರುಡಿ, ಅಗ್ನಿ ಕಮಲ, ದೈವ ದುರಂತ ಕರ್ಣ ಮತ್ತು ಹಲವಾರು 250ಕ್ಕೂ ಹೆಚ್ಚು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿ ಸಂಗೀತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಶ್ರೀ ಗವಿಸಿದ್ದೇಶ್ವರ ಮಹಾತ್ಮೆ, ಶಿಶುನಾಳ ಷರೀಫರ ನಾಟಕ, ನೆಲ್ಲೂರ ನೆಂಬಕ್ಕ, ಭಕ್ತ ಕನಕದಾಸ, ಶಿವಪದ್ಮ, ಬೀರಲಿಂಗೇಶ್ವರ ಮಹಾತ್ಮೆ, ಪುರಂದರ ದಾಸರ ಹಾಡುಗಳು, ಸತ್ಯ ಹರಿಶ್ಚಂದ್ರ ಇನ್ನೂ ಮುಂತಾದ ಭಕ್ತಿ ನಾಟಕಗಳಲ್ಲಿ ಅಭಿನಯಿಸಿ, ನಿರ್ದೇಶನ ನೀಡಿ ಸೇವೆ ಸಲ್ಲಿಸಿರುತ್ತಾರೆ. ಗಾನಯೋಗಿ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳಿಂದ ಆಶೀರ್ವಾದ. 2017ನೇ ಸಾಲಿನ ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಖ್ಯಾತ ರಂಗಕರ್ಮಿ ಸಿ.ಜಿ.ಕೆ. ರಂಗ ಪುರಸ್ಕಾರಗಳು ಲಭಿಸಿವೆ.
ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ. ಭ ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ. ಎಂ. ಪಟೇಲ್‌ಪಾಂಡು ಅವರುಗಳು ಉಪಸ್ಥಿತರಿದ್ದರು.
0 Comments