Ticker

6/recent/ticker-posts

Ad Code

Responsive Advertisement

ಮಧುಗಿರಿ 15 -18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ

 ಮಧುಗಿರಿ: ತಾಲೂಕಿನ ಪುರುವರ ಹೋಬಳಿಯ ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುವರ್ಣಮುಖಿ ಪ್ರೌಢಶಾಲೆಯಲ್ಲಿ 15 ವರ್ಷದಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ರಮಕ್ಕೆ ಗೊಂದಿಹಳ್ಳಿ  ಪಂಚಾಯಿತಿಯ ಅಧ್ಯಕ್ಷೆ ರಮ್ಯಕೃಷ್ಣ ಹಾಗೂ ಡಾ. ಶಶಿಕುಮಾರ್ ಚಾಲನೆ ನೀಡಿದರು.




 ನಂತರ ಮಾತನಾಡಿದ ಡಾ. ಶಶಿಕುಮಾರ್ ಕೋರೋನ ವೈರಸ್ ನಿಂದ ತಪ್ಪಿಸಿಕೊಂಡು ಹೇಗೆ ಜೀವನ ನಡೆಸಬೇಕೆಂಬುದನ್ನ ನಾವು ಅರಿಯದಿದ್ದರೆ ಜೀವನ ತುಂಬಾ ಕಷ್ಟವಾಗುತ್ತದೆ ವ್ಯಾಕ್ಸಿನ್ ಬಗ್ಗೆ ಭಯಬೇಡ ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಿರಿ ಎಂದರು. 

ಅಧ್ಯಕ್ಷೆ ರಮ್ಯಕೃಷ್ಣ ಮಾತನಾಡಿ ಕೋವಿಡ್ ಎರಡನೇ ಅಲೆಬಂದು ಸಾವಿನ ಜೊತೆಗೆ ಕುಟುಂಬದ ಆರ್ಥಿಕ ಪರಿಸ್ಥಿತಿಗೂ ತುಂಬಾ ಪೆಟ್ಟು ನೀಡಿದೆ ಅದರಿಂದ ಎಚ್ಚರಿಕೆಯಿರಲಿ ಯಾರಿಗೂ ಭಯ ಬೇಡ ವೈರಸ್ ಗಳು ರೋಗನಿರೋಧಕ ಶಕ್ತಿ ಕಡಿಮೆ ಇರೋರಿಗೆ ಮಾತ್ರ ಹೆಚ್ಚು ಕಾಡುತ್ತದೆ ಅಷ್ಟೇ ಆದ್ದರಿಂದ ಎಲ್ಲರೂ ಕೂಡ ಉದಾಸೀನತೆ ಮಾಡದೆ ವ್ಯಾಕ್ಸಿನ್ ಅನ್ನು ಪಡೆಯಿರಿ ಎಂದರು. ಈ ವೇಳೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಉದಯಕುಮಾರ್ ಆರೋಗ್ಯ ಇಲಾಖೆಯ ಪಿಎಚ್ ಸಿಓ ಚಂದ್ರಕಲಾ, ರಂಗಸ್ವಾಮಿ ಆಶಾ ಕಾರ್ಯಕರ್ತೆಯರಾದ, ಲಲಿತಾ ಮತ್ತಿತರ ಆಶಾ ಕಾರ್ಯಕರ್ತೆಯರು ಶಾಲೆಯ ಶಿಕ್ಷಕರು ಮತ್ತಿತರರಿದ್ದರು.

Post a Comment

0 Comments

Ad Code

Responsive Advertisement