Ticker

6/recent/ticker-posts

Ad Code

Responsive Advertisement

ಕೆಲಸನಿಬಾಯಿಸಲು ಸಾಧ್ಯ ವಾಗದ್ದಿದ್ದರೆ ವರ್ಗಾವಣೆ ಪಡೆದು ಕೊಂಡು ಹೊಗಬಹುದು : ಶಾಸಕ ಎಂ.ವಿ.ವೀರಭಧ್ರಯ್ಯ

ಮಧುಗಿರಿ :  ತಾಲೂಕಿನಲ್ಲಿ ಕೃಷಿ ಇಲಾಖೆಯ ಬಗ್ಗೆ ಹಲವಾರು  ಆರೋಪಗಳಿದ್ದು ರೈತರ ಪರ ಕೆಲಸ ನಿರ್ವಹಿಸಬೇಕಾದ ಇಲಾಖೆಯೆ ರೈತರಿಗೆ ತಲೆ ನೋವಾಗಿದೆ. ನಿಮಗೆ ನಿಬಾಯಿಸಲು ಸಾಧ್ಯ ವಾಗದ್ದಿದ್ದರೆ ವರ್ಗಾವಣೆ ಪಡೆದು ಕೊಂಡು ಹೊಗಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಅವರ ಬಗ್ಗೆ ಶಾಸಕ ಎಂ.ವಿ.ವೀರಭಧ್ರಯ್ಯ ಕೆ.ಡಿ.ಪಿ.ಸಭೆಯಲ್ಲಿ ಅಸಮದಾನ ವ್ಯಕ್ತ ಪಡಿಸಿದ ಘಟನೆ ನಡೆಯಿತು.

ಪಟ್ಟಣದಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಎಂ.ವಿ.ವೀರಭದ್ರಯ್ಯ ನವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ.ಸಭೆಯಲ್ಲಿ ಶಾಸಕರು ಕೃಷಿ ಇಲಾಖೆಯ ಕಾರ್ಯ ವೈಖರಿ ಬಗ್ಗೆ ತರಾಟೆಗೆ ತೆಗದು ಕೊಂಡರು. ರಾಜಕೀಯ ಮಾಡುವುದನ್ನು ಬಿಟ್ಟು ರೈತರ ಪರ ಕೆಲಸ ನಿರ್ವಹಿಸಿ ಇಲಾಖೆಯ ಸೌಲಭ್ಯಗಳನ್ನು ರೈತರಿಗೆ ಪ್ರಮಾಣಿಕವಾಗಿ ತಲುಪಿಸುವ ಕೆಲಸ ನಿರ್ವಹಿಸಿ ಇಲ್ಲದಿದ್ದರೆ ವರ್ಗಾವಣೆ ಪಡೆದು ಹೊರಟು ಹೋಗಿ ಬೇರೆಯವರು ಬಂದು ನಿಮ್ಮ ಇಲಾಖೆಯ ಕೆಲಸ ನಿರ್ವಹಿಸುತ್ತಾರೆ ಎಂದರು.

ತಾಲೂಕಿನ ಪ್ರತಿ ಗ್ರಾಮಗಳ ಪೆಟ್ಟಿಗೆ ಅಂಗಡಿಗಳಲ್ಲೂ ಕೂಡ ಮಧ್ಯ ದೊರೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಅಬಕಾರಿ ಇಲಾಖೆ ಏನು ಕ್ರಮ ತೆಗಿದು ಕೊಂಡಿದೆ ಎಂದು ಅಬಕಾರಿ ನಿರೀಕ್ಷಕ ರಾಮಮೂರ್ತಿ ಅವರನ್ನು ಪ್ರಶ್ನಿಸಿದ ಶಾಸಕರು ಮುಂದಿನ ದಿನಗಳಲ್ಲಿ ಇವುಗಳಿಗೆ ಕಡಿವಾಣ ಹಾಕಿ ಎಂದರು.

ಎತ್ತಿನ ಹೊಳೆ ಯೋಜನೆ ಕಾಮಗಾರಿ ನಿದಾನಗತಿಯಲ್ಲಿ ನಡೆಯುತ್ತಿದ್ದು ತಿಂಗಳಿಗೆ ಕೇವಲ 1ಕೀಮಿ ನಷ್ಟು ದೂರ ಮಾತ್ರ ಕಾಮಗಾರಿ ನಡೆಯುತ್ತಿದ್ದು ಈಗಾದರೆ ಕಾಮಗಾರಿ ಮುಗಿದು ತಾಲೂಕಿನ ಕೆರೆಗಳಿಗೆ ನೀರು ಹರಿಸುವುದು ಯಾವಗ ಎಂದು ಇಲಾಖೆಯ ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದಾಗ ಅನುದಾನದ ಕೊರತೆಯಿಂದಾಗಿ ಕಾಮಗಾರಿ ವಿಳಂಬ ವಾಗುತ್ತಿದ್ದು ಈಗಾಗಲೇ ಕೆಲಸ ನಿರ್ವಹಿಸಿರುವ ಕಾಮಗಾರಿಯ ಬಾಬ್ತು ಇನ್ನು 150 ಕೋಟಿ ರೂ. ಸರಕಾರ ಬಾಕಿ ಪಾವತಿಸಬೇಕಿದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.

ಕೋವಿಡ್ ನಂತರ ಹಾಸ್ಟಲ್‍ಗಳ ಪರತಿಸ್ಥಿತಿ ಹೇಗಿದೆ ಎಷ್ಟು ಜನ ವಿಧ್ಯಾರ್ಥಿಗಳು ತಾಲೂಕಿನಲ್ಲಿ ಹಾಸ್ಟಲ್‍ಗಳ ಪ್ರವೇಶಕ್ಕೆ ನೊಂದಣಿ ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ಕೇಳಿದಾಗ, ಕೋವಿಡ್ ಆರಂಭಕ್ಕೂ ಮುಂಚೆ 1593 ವಿಧ್ಯಾರ್ಥಿಗಳಿದ್ದು ಈಗ 1213 ವಿಧ್ಯಾರ್ಥಿಗಳು ಪ್ರವೇಶ ಪಡೆದು ಕೊಂಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಚಂದ್ರಶೇಖರ್ ಮಾಹಿತಿ ನೀಡಿದಾಗ, ಹಾಸ್ಟಲ್ ಗಳಲ್ಲಿ ಊಟದ ಸೌಲಭ್ಯಗಳನ್ನು ನಿರ್ವಹಿಸಿ ಮೆನ್ಯೂ ಪ್ರಕಾರವೇ ಊಟವನ್ನು ನೀಡಬೇಕು ವಿಧ್ಯಾರ್ಥಿಗಳ ಆರೋಗ್ಯದ ಬಗ್ಗೆಯು ಜಾಗೃತಿ ವಹಿಸಿ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಈಗಿರುವ ಸರಕಾರಿ ನ್ಯಾಯಬೆಲೆ ಅಂಗಡಿಗಳನ್ನು ಹೊಸದಾಗಿ ಜಾರಿ ಯಾಗಿರುವ ಸರಕಾರಿ ಅದೇಶದಂತೆ ತಾಲೂಕಿನಲ್ಲಿ ಸುಮಾರು 40 ಹೊಸ ಅಂಗಡಿಗಳನ್ನು ತೆರಿಯಬಹುದು ನಿರುದ್ಯೋಗ ವಿಧ್ಯಾವಂತರಿಗೆ ಅನುಕೂಲವಾಗಲಿದ್ದು ಗ್ರಾಮಗಳಲ್ಲೇ ನ್ಯಾಯ ಬೆಲೆ ಅಂಗಡಿ ತೆರೆದರೆ ಪಡಿತರ ದಾರರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ ತಿಳಿಸಿದರು.

ಸಬೆಯಲ್ಲಿ ತಾ.ಪಂ.ಇ.ಒ ಲಕ್ಷ್ಮಣ್ ಮಾತನಾಡಿ, ಸರಕಾರದ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಪುಪಿಸುವ ಕಾರ್ಯವನ್ನು ಅಧಿಕಾರಿಗಳು ಅತಿ ಜರುರಾಗಿ ಮಾಡಬೇಕು ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಚ್ ಒಳಗೆ ಸಂಪೂರ್ಣ ವಾಗಿ ಪೂರ್ಣ ಗೋಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಎಇಇ ರಾಜಗೋಪಲ್ ಜಿ.ಪಂ.ಎಇಇ ಸುರೇಶ್ ರೆಡ್ಡಿ, ಅರಣ್ಯ ಇಲಾಖೆ ಅಧಿಕಾರಿ ರವಿ, ಸಿ.ಡಿ.ಪಿ.ಒ.ಎಸ್.ಅನಿತಾ, ಬಿ.ಇ.ಒ.ನಂಜುಂಡಯ್ಯ, ಆರೋಗ್ಯಧಿಕಾರಿ ಡಾ.ರಮೇಶ್ ಬಾಬು, ಆಹಾರ ಇಲಾಖೆಯ ಶಿರಸ್ಥೆ ದಾರ್ ಗಣೇಶ್ ತೊಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥಗೌಡ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗಿರೀಶ್ ಬಾಬು ರೆಡ್ಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ರಾಮ್ ದಾಸ್, ಪುರಸಭೆ ಮುಖ್ಯಾಧಿಕಾರಿ ನಜ್ಮಾ, ಸಮಾಜಿಕ ಆರಣ್ಯ ಇಲಾಖೆಯ ತಾರಕೇಶ್ವರಿ, ಬೆಸ ಕಾಂ ಇಲಾಖೆಯ ಎಇಇ ಶ್ರೀನಿವಾಸ್, ಇದ್ದರು.

Post a Comment

0 Comments

Ad Code

Responsive Advertisement