ಮಧುಗಿರಿ : ಉತ್ತಮ ಮಳೆಯಿಂದಾಗಿ ತಾಲೂಕಿನ ಕೃಷಿ ಚಟುವಟಿಕೆ ಗರಿಗೆದರಿದೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ತಾಲೂಕಿನ ಕಸಬ ವ್ಯಾಪ್ತಿಯ ಶಸ್ರಪಾಳ್ಯದಲ್ಲಿ ಕೆ.ಎನ್.ಆರ್ ರವರ ಅವಧಿಯಲ್ಲಿ ನಿರ್ಮಿಸಿದ್ದ ಚೆಕ್ ಡ್ಯಾಂ ಸಮೀಪದಲ್ಲಿ ಮುಚ್ಚಿ ಹೋಗಿದ್ದ ಕಾಲುವೆಯನ್ನು ಅಭಿವೃದ್ಧಿ ಪಡಿಸಿ ಮಾತನಾಡಿದ ಅವರು. ಈ ತಲಪರಿಗೆಯ ನೀರು ಸರಾಗವಾಗಿ ಹರಿಯುವಂತೆ ಮಾಡುವುದರಿಂದ ಕನಿಷ್ಟ ಎರಡರಿಂದ ಮೂರು ಬೆಳೆಯನ್ನು ಬೆಳೆಯ ಬಹುದಾಗಿದೆ. ಗ್ರಾಮದ ಜನರು ನೀರಿನ ವಿಚಾರದಲ್ಲಿ ಯಾರೂ ಗಲಾಟೆ ಗೊಂದಲಗಳಿಗೆ ಅವಕಾಶ ಮಾಡಿಕೊಳ್ಳುವುದು ಬೇಡಾ ಪಕ್ಷಾತೀತವಾಗಿ ನೀರನ್ನು ಹರಿಸಿಕೊಳ್ಳಿ . ಅಮರಾವತಿಯ ವರೆಗೆ ಕಾಲುವೆಯ ಮೂಲಕ ನೀರು ಹರಿಯಲಿದ್ದು ಕಾಲುವೆ ಅಭಿವೃದ್ಧಿಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಅಭಿನಂದಿಸುವುದಾಗಿ ತಿಳಿಸಿದರು.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ನ 11 ಸದಸ್ಯರು ಆಯ್ಕೆಯಾಗಿದ್ದಾರೆ ರಾಜ್ಯದಲ್ಲಿನ ಮತದಾರರು ಹೆಚ್ಚು ಕಾಂಗ್ರೆಸ್ ನತ್ತಾ ಮುಖ ಮಾಡಿದ್ದು ಸ್ಥಳೀಯ ಸಂಸ್ಥೆಗಳಲ್ಲಿ 500ಕ್ಕೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿ ಕೊಂಡಿದ್ದು ಬಿಜೆಪಿ ಪಕ್ಷ ಎರಡನೇ ಸ್ಥಾನದಲ್ಲಿದ್ದು ಜನರು ಬಿಜೆಪಿಯನ್ನು ವಿರೋಧಿಸ ತೊಡಗಿದ್ದಾರೆ. ಮುಂದಿನ ದಿನ ಗಳಲ್ಲಿ ರಾಜ್ಯದಲ್ಲಿ ಬಹುತೇಕವಾಗಿ ಕಾಂಗ್ರೆಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜಾರಿಗೊಂಡ ಎತ್ತಿನಹೊಳೆ ಯೋಜನೆಯ ನೀರು ತಾಲ್ಲೂಕಿಗೂ ಹರಿಯಲಿದೆ ಎಂದರು.ಎತ್ತಿನಹೊಳೆ ಯೊಜನೆಗೆ .ಸರಕಾರ 2500 ರಿಂದ 3000ಕೋಟಿ ಮೀಸಲಿಡಬೇಕಾಗಿದ್ದು ಕೇವಲ 500.ಕೋಟಿ ಮೀಸಲಿಟ್ಟಿದ್ದರಿಂದ ಎತ್ತಿಕಹೊಳೆ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ ತಾಲ್ಲೋಕಿಗೆ ಎತ್ತಿನಹೊಳೆ ನೀರುಬರಬೇಕಾದರೆ ಕಾಂಗ್ರೇಸ್ ಪಕ್ಚ ಅದಿಕಾರಕ್ಕೆ ಬರಬೇಕು ಕೆಎನ್ ರಾಜಣ್ಣ ಶಾಸಕರಾಗಿ ಅಯ್ಜೆಅಗಬೇಕು ಎಂದ ಅವರು ಅವರು ಶಾಸಕರಾಗಿ ಅಯ್ಜೆಅದರೆ ಸಚಿವರಾಗುವುದು ಗ್ಯಾರಂಟಿ ಎಂದರು.
ಡಿ.ಹೆಚ್. ನಾಗರಾಜು ಮಾತನಾಡಿ ಕೆ.ಎನ್.ರಾಜಣ್ಣನವರು ಅಧಿಕಾರವಧಿಯಲ್ಲಿ 15-16ನೇ ಸಾಲಿನ ಅವಧಿಯಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದ್ದು, ಈ ಭಾಗದಲ್ಲಿ ವ್ಯವಸಾಯ ಚಟುವಟಿಕೆ ಆರಂಭಿಸಲು ಸಹಕಾರಿಯಾಗಿದೆ.
ಭಾಗದಲ್ಲಿರುವ ಪ್ರತಿಯೊಬ್ಬರಿಗೂ ಪ್ರತಿಯೊಬ್ಬ ರೈತರಿಗೆ ಸಾಲ ನೀಡಲಾಗುತ್ತಿದೆ ಇದುವರೆಗೂ 10 ಕೋಟಿ ರು ಸಾಲ ನೀಡಲಾಗಿದೆ.ಮುಂದಿನ.ದಿನಗಳಲ್ಲಿ ಇನ್ನೂ 3ಕೋಟಿ ಸಾಲ ನೀಡಲಾಗುವುದು. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜಣ್ಣ ರವರನ್ನು ಹಾಗೂ ರೀತಿ ಮುಂದಿನ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ತಾಲೂಕು ಯುವಕಾಂಗ್ರೇಸ್ ಅದ್ಯಕ್ಷ.ಎಸ್ ಡಿ ಕೆ ವೆಂಕಟೇಶ್ ಪುರಸಭಾಸದಸ್ಯ ಲಾಲಪೇಟೆಮಂಜುನಾಥ.ವಿಎಸ್ ಎಸ್ ಎನ್ ಅದ್ಯಕ್ಚ ಫಾಜಿಲ್ ಪುರಸಭಾಮಾಜಿ ಅದ್ಯಕ್ಷ ಎಮ್ ಕೆ ನಂಜುಂಡಯ್ಯ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷೆಸ್ ಅರ್ ರಾಜಗೋಪಾಲ್ ನಾಗರ್ಜುನ, ಗ್ರಾಪಂ ಅಧ್ಯಕ್ಷರಾದ ಭವ್ಯ ಕೇಶವಮೂರ್ತಿ, ಸಾವಿತ್ರಮ್ಮ ಡಿಹೆಚ್ ನಾಗರಾಜು, ಎಜೆ ಗೋಪಾಲಯ್ಯ,ಪಂಚಾಕ್ಷರಯ್ಯ ಉಪಾದ್ಯಕ್ಷರಾದ ಚೇತನ ಶಿವಕುಮಾರ್,.ಗೌರಮ್ಮ.ರಾಮಾಂಜಿನಪ್ಪ ಸದಸ್ಯರಾದ ವಿರೇಶ್ ,ನಾಗಭೂಷಣ ,ಓಬಣ್ಣ, ರಾಮಚಂದ್ರ, ರಘು, ರಂಗರಾಜು,ದಾಸೇಗೌಡ,ಟಿವಿಎಸ್ ಮಂಜು ಮುಖಂಡರಾದ ಹೆಚ್ ಎಸ್ ನಾಗರಾಜು, ಗಂಕಾರ್ ಚಿಕ್ಕರಾಮಯ್ಯ, ನೀರಗಂಟಿರಂಗರಾಜು, ಮೀಸೆನಾರಯಣಪ್ಪ, ಸೋಂಪುರ ರಂಗಪ್ಪ ಮತ್ತಿತರರು ಹಾಜರಿದ್ದರು.
0 Comments