ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘದ 108ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘದ ವತಿಯಿಂದ 108ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ದೀಪಾ ಬೆಳಗಿಸಿ ಉದ್ಘಾಟನೆಯನ್ನು ಚಲನಚಿತ್ರ ನಟಿ ಪದ್ಮವಾಸಂತಿ ,ಖ್ಯಾತ ಹಿನ್ನಲೆ ಗಾಯಕಿ ರಮ್ಯ ವಸಿಷ್ಠ ಮತ್ತು ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು ನಂತರ ಉತ್ತಮ ಅಂಕಗಳಿಸಿದ 129 ವಿದ್ಯಾರ್ಥಿ ,ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಎ.ಅಮೃತ್ ರಾಜ್ ರವರು ಮಾತನಾಡಿ 108ವರ್ಷ ಪೂರೈಸಿದೆ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯಸಿ ,ಪದವಿ ,ಮಾಸ್ಟರ್ ಡಿಗ್ರಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ಪುರಸ್ಕಾರ ಹಮ್ಮಿಕೊಂಡು ಬರಲಾಗುತ್ತಿದೆ.
ಕೊವಿಡ್ ನಿಯಾಮವಳಿ ಆನ್ವಯ ಕಾರ್ಯಕ್ರಮ ಮಾಡಲಾಗುತ್ತಿದೆ .
ಸಹಕಾರ ಸಂಘದ ಉದ್ದೇಶ ಬಿ.ಬಿ.ಎಂ.ಪಿ.ನೌಕರರ ಮಕ್ಕಳು ಉನ್ನತ ವ್ಯಾಸಂಗ ಮಾಡಬೇಕು ಹಾಗೂ ಸರ್ಕಾರದ ಸೇವೆಯಲ್ಲಿ ಸೇರಬೇಕು ನಾಡಿನ ಸೇವೆ ಮಾಡಬೇಕು ಎಂಬ ಉದ್ದೇಶ .
ಬಿ.ಬಿ.ಎಂ.ಪಿ.ನೌಕರರ ಮಕ್ಕಳು ಐ.ಎ.ಎಸ್. ,ಐ.ಪಿ.ಎಸ್. ಮತ್ತು ವೈದ್ಯರು ,ಇಂಜನಿಯರ್ ಗಳಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ .
ಬಿ.ಬಿ.ಎಂ.ಪಿ.ಯಲ್ಲಿ 27ಸಾವಿರಕ್ಕೂ ಹೆಚ್ಚು ಹುದ್ದೆಗಳು ನೇಮಕಾತಿ ಆಗಿಲ್ಲ .ಬಿ.ಬಿ.ಎಂ.ಪಿ.ಮುಖ್ಯ ಆಯುಕ್ತರು ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಪ್ರಕಿಯೆಗೆ ಚಾಲನೆ ನೀಡಿದ್ದಾರೆ .
ಕೊವಿಡ್ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ 30ಕ್ಕೂ ನೌಕರರು ಮೃತಪಟ್ಟರು ಅವರಿಗೆ ಪರಿಹಾರಧನ ನೀಡುವಲ್ಲಿ ವಿಳಂಬ ಮಾಡಿದಾಗ ಸತತ ಹೋರಾಟದ ಫಲದಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಧನ ಬಿಡುಗಡೆ ಮಾಡಿಸುವಲ್ಲಿ ಯಶ್ವಸಿಯಾಗಿ ಹೋರಾಟ ಮಾಡಲಾಯಿತು. ಸಹಕಾರ ಸಂಘದ ವತಿಯಿಂದ ಸುಲಭ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.
ಪದ್ಮವಾಸಂತಿರವರು ಮಾತನಾಡಿ ಮಕ್ಕಳು ವಿದ್ಯಾ ಕಲಿಯಬೇಕು ಕಲಿಯದೇ ಹೋದರೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ .
ಇಂದಿನ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸರ್ಕಾರ ಸಂಘ ,ಸಂಸ್ಥೆಗಳು ಪ್ರೋತ್ಸಹ ನೀಡುತ್ತಿದೆ ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ರಮ್ಯವಸಿಷ್ಠರವರು ವಿದ್ಯಾ ಕಲಿತರೆ ಸಮಾಜದಲ್ಲಿ ಹೇಗೆ ಬಾಳಬೇಕು ಎಂದು ತಿಳಿಯುತ್ತದೆ .ಅವಿದ್ಯಾವಂತರಾದರೆ ಪ್ರಾಣಿ , ಪಕ್ಷೀಗಳಿಗಿಂತ ಕಡೆ ಎಂದು ಲೋಕ ಪರಿಗಣಿಸುತ್ತದೆ. ಸಮಾಜದಲ್ಲಿ ಬಾಳಬೇಕು ,ಸಾಧನೆ ಮಾಡಬೇಕಾದರೆ ವಿದ್ಯಾವಂತರಾಗಬೇಕು ಎಂದು ಹೇಳಿದರು.
ಸಹಕಾರ ಸಂಘದ ಪದಾಧಿಕಾರಿಗಳಾದ ಕೆ.ಜಿ.ರವಿ.ಮತ್ತು ಎಸ್.ಜಿ.ಸುರೇಶ್ ,ಹನುಮಂತಪ್ಪ ,ಮಂಜುನಾಥ್ ,ಕಾಂಚನ , ರಾಜಶೇಖರ್ ,ಮಾರೇಗೌಡ,ಕೆ.ಲಕ್ಷ್ಮೀ ,ಆರ್.ಪಿ.ವಾಣಿರವರು ಪಾಲ್ಗೊಂಡಿದ್ದರು.
0 Comments