ಬೆಂಗಳೂರು : ರಾಮನಗರದಲ್ಲಿ ಸೋಮವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಪುತ್ಥಳಿಗಳ ಅನಾವರಣ ಸಮಾರಂಭದಲ್ಲಿ, ಮುಖ್ಯಮಂತ್ರಿಗಳ ಎದುರೇ ವೇದಿಕೆಯಲ್ಲಿ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ ರವರು ಭಾಷಣ ಮಾಡುತ್ತಿರುವಾಗ, ಅವರ ಮೇಲೆ ಕಾಂಗ್ರೆಸ್‍ನ ಸಂಸದ ಡಿ.ಕೆ.ಸುರೇಶ್ ರವರು ಸಚಿವರ ಮೇಲೆ ವೇದಿಕೆಯಲ್ಲೇ ಹಲ್ಲೆ ಮಾಡಲು ಮುಂದಾಗಿದ್ದು, ಇದೇ ವೇಳೆ ಅವರಿಗೆ ಹಲ್ಲೆ ಮಾಡಲು ಬೆಂಬಲ ನೀಡಿದ ಕಾಂಗ್ರೆಸ್ ಎಂಎಲ್‍ಸಿ ಎಸ್.ರವಿ ಅವರು ಮೈಕ್ ಕಿತ್ತೆಸೆದಿದ್ದಾರೆಂಬ ಕಾರಣಕ್ಕೆ ಇವರೀರ್ವರ ಮೇಲೂ ಕಾನೂನಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಲ್ಲೇಶ್ವರದ ಡಾ. ಟಿ.ಪಾರ್ಥಸಾರಥಿ ವೃತ್ತದಲ್ಲಿ ರಾಷ್ಟ್ರಕವಿ ಕುವೆಂಪು ಪುತ್ಥಳಿ ಎದುರು ಬಿಜೆಪಿಯ ಮಲ್ಲೇಶ್ವರಂ ಮಂಡಲ, ರಾಜ್ಯ ಯುವ ಮೋರ್ಚಾ, ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ್ ಸಿ. ಬಾಳಿಕಾಯಿ, ಮಾಜಿ ಪಾಲಿಕೆ ಸದಸ್ಯರುಗಳಾದ ಜಯಪ್ರಕಾಶ್ ಎಂ.ಸಿ., ಎಂ.ವಿಜಯಕುಮಾರಿ, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯಕಾರಣಿ ಸದಸ್ಯರುಗಳಾದ ಡಾ. ಜಿ.ಎಸ್.ಚೌಧರಿ, ಎನ್.ಆರ್. ಪರಮೇಶ್ವರಯ್ಯ, ವಾರ್ಡ್ 66 ಉಪಾಧ್ಯಕ್ಷ ಎನ್.ನಾಗರಾಜು, ರವಿಕುಮಾರ್, ಸಂತೋಷ್ ಜಿ., ಛಲವಾದಿ ನಾರಾಯಣಸ್ವಾಮಿ, ಕಾವೇರಿ, ವಾರ್ಡ್ 45 ಕಾರ್ಯದರ್ಶಿ ಸುಂದರೇಶ್ ಮೆನನ್ ಮುಂತಾದ ಪಕ್ಷದ ಮುಖಂಡರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
0 Comments