Ticker

6/recent/ticker-posts

Ad Code

Responsive Advertisement

ಸಚಿವ ಆನಂದ ಸಿಂಗ್‌ಗೆ ಅತಿಥಿ ಉಪನ್ಯಾಸಕರಿಂದ ಮನವಿ

ಬಳ್ಳಾರಿ, ಡಿ 12, (ಹೊಸಪೇಟೆ): ವಿವಿಧ ಬೇಡಿಕೆಗಳನ್ನು ಇಡೇರಿಸಲು ಒತ್ತಾಯಿಸಿ ಸಚಿವ ಆನಂದ ಸಿಂಗ್‌ಗೆ ಅತಿಥಿ ಉಪನ್ಯಾಸಕರಿಂದ ಮನವಿ, ಅತಿಥಿ ಉಪನ್ಯಾಸಕರು ಎರಡನೇ ದಿನದಂದು ತರಗತಿಗಳನ್ನು ಬಹಿಷ್ಕರಿಸಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಸಮಸ್ಯೆಗಳನ್ನು ಸರಕಾರ ಸ್ಪಂಧಿಸಬೇಕಿದೆ ಎಂದು ಒತ್ತಾಯಿಸಿದರು.

ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡನೇ ದಿನದಂದು ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟ ಧರಣಿಯನ್ನು ಹೋರಾಟವನ್ನು ಅಕ್ರೋಶವನ್ನು ವ್ಯಕ್ತ ಪಡಿಸಿದರು. ರಾಜ್ಯದಲ್ಲಿ ಪದವಿ ಕಾಲೇಜುಗಳು ೨೦೦೩/೪ (2003/4) ನೇ ಸಾಲಿನಿಂದ ಅತಿಥಿ ಉಪನ್ಯಾಸಕರನ್ನು ನೆಚ್ಚಿಕೊಂಡು ಉಪನ್ಯಾಸವನ್ನು ಅವಲಂಭಿಸಿದೆ. ೧೪,೮೦೦ (14,800) ಉಪನ್ಯಾಸಕರು ಸರಕಾರ ಕೊಡುವ ಅತಿ ಕಡಿಮೆ ಗೌರವಧನದಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ನಮ್ಮನ್ನಾಳುವ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಅನುಕೂಲದಂತೆ ಕಾಯ್ದೆ ಕಾನೂನುಗಳನ್ನು ತಿದ್ದು ಪಡೆ ಮಾಡಿಕೊಳ್ಳುತ್ತಾರೆ. ಆದರೆ ಅತಿಥಿ ಉಪನ್ಯಾಸಕರ ಸಮಸ್ಯೆಗಳು ಬಂದರೆ ಕಾಯ್ದೆಗಳಲ್ಲಿ ಇವರ ಸೇವಾ ಭದ್ರತೆಯನ್ನು ಮಾಡಲಾಗುವುದಿಲ್ಲ.ಅವರ ಕನಿಷ್ಠ ವೇತನ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಮಾಡಲು ಬರುವುದಿಲ್ಲ ಎಂದು ಉಡಾಫೆಯ ಉತ್ತರವನ್ನು ನೀಡುತ್ತಾರೆ ಎಂದು ಹೇಳಿದರು.

ಯು.ಜಿ.ಸಿ ಯ ನಿಯಮಾನುಸರ ತಿಂಗಳಿಗೆ ೫೦ ಸಾವಿರ (50,000) ರೂ. ವೇತವನ್ನು ನೀಡಬೇಕು, ಆದರೆ ೧೧ ಸಾವಿರ ಹಾಗೂ ೧೩ (11,000 and 13,000) ಸಾವಿರ ಗೌರವಧವನ್ನು ನೀಡುತ್ತಿದ್ದಾರೆ. ಶೈಕ್ಷಣಿಕ ವರ್ಷದಲ್ಲಿ ಪದವಿ ಶಿಕ್ಷಣವನ್ನು ೩ ತಿಂಗಳಿಗೆ (3 months) ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದೆ. ಈ ಹಿಂದಿನ ಸರಕಾರವು ವರ್ಷದ ೧೦ ತಿಂಗಳು (10 months) ಉಪನ್ಯಾಸವನ್ನು ನಿಗದಿ ಮಾಡಿ ಗೌರವಧನವನ್ನು ನೀಡುತ್ತಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದೆ. ಹಿಂದಿನ ವರ್ಷದ ಮಾದರಿಯಲ್ಲಿ ಕಾರ್ಯಭಾರವನ್ನು ಸರಕಾರ ಮುಂದುವರಿಸಬೇಕಿದೆ ಎಂದು ಅಕ್ರೋಶವನ್ನು ವ್ಯಕ್ತ ಪಡಿಸಿದರು. ಕೊರೋನಾ ವೈರಸನಂತಹ ಕಾಯಿಲೆಯಲ್ಲಿ ಅತಿಥಿ ಉಪನ್ಯಾಸಕರ ಜೀವನ ತುಂಬ ಚಿಂತಜನಕವಾಗಿದೆ. ಕಾಯಿಲೆಯಲ್ಲಿ ಮೃತಪಟ್ಟಿರುವ ಉಪನ್ಯಾಸಕರ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕಿತ್ತು ಆದರೆ ಇವತ್ತಿನವರೆಗೆ ಯಾವುದೇ ರೀತಿಯಲ್ಲಿ ಪರಿಹಾರಕ್ಕೆ ನೀಡಲು ಮುಂದಾಗಿಲ್ಲ ಎಂದು ಬೇಸರದಿಂದ ಹೇಳಿದರು.

ಸರಕಾರವು ವೇತವನ್ನು ಹೆಚ್ಚಿಸಬೇಕು. ದೆಹಲಿ, ಹರಿಯಾಣ, ಆಂದ್ರಪ್ರದೇಶ, ಒಡಿಸ್ಸಾ ಮಾದರಿಯಲ್ಲಿ ಸೇವಾ ಭದ್ರತೆಯನ್ನು ಜಾರಿ ಮಾಡಬೇಕಿದೆ. ಅವರ ಕುಟುಂಬಕ್ಕೆ ಆರೋಗ್ಯ ಸೌಲಭ್ಯಗಳನ್ನು ನೀಡಬೇಕಿದೆ.ತಿಂಗಳಿಗೊಮ್ಮೆ ವೇತವನ್ನು ನೀಡಬೇಕಿದೆ ಎಂದು ಅವರು ಅಸಹಾಯಕತೆಯನ್ನು ತೋಡಿಕೊಂಡರು.ಸಚಿವ ಆನಂದ ಸಿಂಗ್ ಅವರು ಅತಿಥಿ ಉಪನ್ಯಾಸಕರ ತಮ್ಮ ಸಮಸ್ಯೆಗಳ ಕುರಿತು ಅವರು ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿಬೇಕಿದೆ ಎಂದು ಮನವಿಯನ್ನು ಮಾಡಿಕೊಂಡ ನಂತರ ಸಚಿವ ಆನಂದ್ ಸಿಂಗ್ ಸಂಭ0ದಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸಿ ನಿಮ್ಮ ಸಮಸ್ಯೆಗಳನ್ನು ಸ್ಪಂಧಿಸುವ0ತೆ ತಿಳಿಸಲಾಗುತ್ತದೆ ಎಂದು ಅವರು ಸಕರಾತ್ಮಕವಾಗಿ ಉತ್ತರಿಸಿದರು.

ಈ ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಡಾ. ಷಣ್ಮುಖಪ್ಪ, ನಾಗವೇಣಿ, ಉಜ್ಜಪ್ಪ, ದಂಡಿ ಪದ್ಮಜ, ಅಕ್ಕಿ ಮಲ್ಲಿಕಾರ್ಜುನ, ವಾಸುದೇವ, ಪಾಂಡೇಶ, ಡಾ. ಸಂದೀಪ್, ಡಾ.ಎಸ್ ಚೌಡೇಶ, ಡಾ.ಹೆಚ್.ಎಂ ತಿಪ್ಪೇಶ್, ಮಂಜುನಾಥ, ಬಿ.ಕೆ ಮುರಳಿಧರ್, ಮಂಜನಾಥ ಬಂಡಾರಿ, ಹನುಮಂತ, ಪವನ್ ಕುಮಾರ್, ಬಂಡೆ ರಾಮಲೆಪ್ಪ, ಕೆ.ಎಂ. ಸಾವಿತ್ರಿ, ಯಶೋಧ, ಶ್ವೆತಾ, ಐಶ್ವರ್ಯ, ಆರ್.ಉಮಾದೇವಿ, ಜ್ಯೋತಿ, ಸುಮಲತ, ಹನುಮಂತಮ್ಮ, ವಿನಾಕ್ಷಿ, ಸುಪ್ರಿಯ, ಅಕ್ಷತ, ಸೌಮ್ಯ ಭಾಗವಹಿಸಿದರು.

Varthajala Daily, Bengaluru 


Post a Comment

0 Comments

Ad Code

Responsive Advertisement