Ticker

6/recent/ticker-posts

Ad Code

Responsive Advertisement

ರೈತ ಹೋರಾಟದ ಸಂಪೂರ್ಣ ಜಯದ ಸಲುವಾಗಿ ವಿಜಯೋತ್ಸವ ದಿನ ಆಚರಣೆ

ಬಳ್ಳಾರಿ, ಡಿ 12: ಆರ್ ಕೆ ಎಸ್ (ರೈತ ಕೃಷಿ ಕಾರ್ಮಿಕರ) ಸಂಘಟನೆಯಿ0ದ ರೈತ ಹೋರಾಟದ ಸಂಪೂರ್ಣ ಜಯದ ಸಲುವಾಗಿ ವಿಜಯೋತ್ಸವ ದಿನ ಆಚರಣೆ,  ರಾಯಚೂರು ತಾಲೂಕಿನ ವಡ್ಡೆಪಲ್ಲಿ  ಗ್ರಾಮದಲ್ಲಿ ೧೧/೧೨/೨೦೨೧ ರಂದು ಆರ್ ಕೆ ಎಸ್ (ರೈತ ಕೃಷಿ ಕಾರ್ಮಿಕರ) ಸಂಘಟನೆಯಿ0ದ ರೈತ ಹೋರಾಟದ ಸಂಪೂರ್ಣ ಜಯದ ಸಲುವಾಗಿ ಗ್ರಾಮದಲ್ಲಿ ವಿಜಯೋತ್ಸವ ದಿನವನ್ನು ಆಚರಣೆ ಮಾಡಲಾಯಿತು.

ಕೇಂದ್ರದ ಒಕ್ಕೂಟ ಸರ್ಕಾರವು ೨೦೨೦ ರಲ್ಲಿ ಅತ್ಯಂತ ಸರ್ವಾಧಿಕಾರಿಯ ರೀತಿಯಲ್ಲಿ ಜಾರಿಗೆ ತಂದಿದ್ದ ರೈತ ವಿರೋಧಿ ಜನ ವಿರೋಧಿ ಕಾಯ್ದೆಗಳ ವಿರುದ್ಧ ಕಳೆದ ಒಂದು ವರ್ಷಕ್ಕೂ ಹೆಚ್ಚು ದಿನಗಳ ಕಾಲದಿಂದ ದೇಶದ್ಯಾಂತ ರೈತರು ಹಾಗು ಎಲ್ಲಾ ರೀತಿಯ  ದುಡಿಯುವ ಜನರು ನಡೆಸಿದ ಐತಿಹಾಸಿಕ ಹೋರಾಟಕ್ಕೆ ಅಭೂತಪೂರ್ವವಾದ ಜಯ ಲಭಿಸಿದೆ ಡಿಸೆಂಬರ್ ೧೧ ದಿಲ್ಲಿಯ ರೈತರು ಹೋರಾಟದ ವಿಜಯೋತ್ಸವದ ದಿನವಾಗಿದೆ ಅದಕ್ಕಾಗಿ ನಮ್ಮ ರೈತ ಸಂಘಟನೆಯಿ0ದ  ಹಳ್ಳಿ-ಹಳ್ಳಿಗಳಲ್ಲಿ ವಿಜಯೋತ್ಸವ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಈ ಸಂದರ್ಭದಲ್ಲಿ ವಿಜಯೋತ್ಸವನ್ನು ಉದ್ದೇಶಿಸಿ ಮಲ್ಲನಗೌಡ ಅವರು ಕೇಂದ್ರ ಸರ್ಕಾರವು  ಬಂಡವಾಳಶಾಹಿಗಳನ್ನು ಇನ್ನೂ ಹೆಚ್ಚು   ಉದ್ದಾರ ಮಾಡುವ ಸಲುವಾಗಿ ತಂದಿರುವ ಅಂತ ಕಾಯ್ದೆ ಗಳಾಗಿದ್ದವು  ಇದರಿಂದ ಯಾವುದೇ ರೈತರಿಗೆ ನಯಾಪೈಸೆ  ಉಪಯೋಗವಿಲ್ಲ ಈ ಸತ್ಯವನ್ನು ನಾವೆಲ್ಲಾ ರೈತಬಾಂಧವರು ಅರಿತುಕೊಳ್ಳಬೇಕಾಗಿದೆ ಇವತ್ತಿನ ದಿನಗಳಲ್ಲಿ ಎಲ್ಲಾ ಪಕ್ಷಗಳು ಬಂಡವಾಳಶಾಹಿಗಳ  ಹಿತಾಸಕ್ತಿಯನ್ನು ಕಾಪಾಡುತ್ತೇವೆ ಅದಕ್ಕಾಗಿ ನಮ್ಮ ಹೋರಾಟವು ಬಂಡವಾಳಿಗರು ಅವರ ನಿಷ್ಠಾವಂತ ಪಕ್ಷಗಳ ವಿರುದ್ಧ ರೈತ ಕಾರ್ಮಿಕರ ಹೋರಾಟ ಬೆಳೆಯಬೇಕಾಗಿದೆ ಅದಕ್ಕೆ ಈ ಹೋರಾಟ ದಾರಿದೀಪವಾಗಬೇಕು ಎಂದು ಹೇಳಿದರು  ಹಾಗೆ   ಊರಿನ ಗ್ರಾಮಸ್ಥರಾದ ಬಾಬು,ವಿನಾಯಕುಮಾರ, ಶ್ರೀನಿವಾಸ,ಮಂಜುನಾಥ, ಜಗಲಿಪ್ಪಾ ನಾಯಕ, ರಾಜಕುಮಾರ, ಶ್ರೀಧರ್,ಇನ್ನಿತರರು ಇದ್ದರು.

Varthajala Daily, Bengaluru

Post a Comment

0 Comments

Ad Code

Responsive Advertisement