ನವದೆಹಲಿ, ಡಿ ೧೦: ತಮಿಳುನಾಡಿನ ಕುನೂರ್ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಪತ್ನಿ ಮತ್ತು ೧೧ ಸಶಸ್ತ್ರ ಪಡೆಗಳ ಸಿಬ್ಬಂದಿಯೊ0ದಿಗೆ ಸಾವನ್ನಪ್ಪಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರನ್ನು ದೆಹಲಿಯ ಕಂಟೋನ್ಮೆ0ಟ್‌ನ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಸಂಪೂರ್ಣ ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.
ಅವರ ಅಂತ್ಯಕ್ರಿಯೆಯಲ್ಲಿ ಜನರಲ್ ರಾವತ್ ಅವರಿಗೆ ೧೭ ಗನ್ ಸೆಲ್ಯೂಟ್ ನೀಡಲಾಯಿತು. ಸಶಸ್ತ್ರ ಪಡೆಗಳ ಸಿಬ್ಬಂದಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರವನ್ನು ಸ್ಮಶಾನದೊಳಗೆ ಕೊಂಡೊಯ್ಯುತ್ತಿದ್ದ0ತೆ ಹೊರಾಂಗಣದಲ್ಲಿ ನೆರೆದಿದ್ದ ಶೋಕಾರ್ಥಿಗಳ ದೊಡ್ಡ ಗುಂಪುನೊ0ದಿಗೆ ಸುಮಾರು ೮೦೦ ಸೇವಾ ಸಿಬ್ಬಂದಿಯೊ0ದಿಗೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾನೂನು ಸಚಿವ ಕಿರಣ್ ರಿಜಿಜು, ಭಾರತದಲ್ಲಿನ ಫ್ರಾನ್ಸ್ ರಾಯಭಾರಿ ಇಮ್ಯಾನುಯೆಲ್ ಲೆನೈನ್ ಮತ್ತು ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಭಾರತದ ಮೊದಲ ರಕ್ಷಣಾ ಸಿಬ್ಬಂದಿಯ ಸೇನಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಹಿಂದಿನ ದಿನದಲ್ಲಿ, ಜನರಲ್ ರಾವತ್ ಮತ್ತು ಅವರ ಪತ್ನಿಯ ಪಾರ್ಥಿವ ಶರೀರವನ್ನು ಅವರ #೩, ಕಾಮ್ರಾಜ್ ಮಾರ್ಗ್ ಅಧಿಕೃತ ನಿವಾಸದಲ್ಲಿ ಅಂತ್ಯಕ್ರಿಯೆಯ ಮೊದಲು ಜನರಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ದೇಶದ ಸೇವೆಗೆ ತಮ್ಮ ಜೀವನವನ್ನ ಸದಾ ಮುಡುಪಾಗಿಸಿಕೊಂಡಿದ್ದವರು ಹಾಗು ಎಂತಹ ಪರಿಸ್ಥಿತಿಯಲ್ಲು ಎದೆಗುಂಧದೆ ಮುನ್ನುಗ್ಗಲು ಸಿದ್ಧರಾಗಿದ್ದವರು, ಇವರಿಗೆ ಇಂದು ದೇಶದ ಸೇನ ಗೌರವದೊಂದಿಗೆ ಅಂತ್ಯಕ್ರಿಯೆ ನೆಡೆಸಲಾಯಿತು. ಇವರ ಹಾಗು ಇವರೊಟ್ಟಿಗೆ ದೈವಧೀನರಾದ ಸೇನಾ ಸಿಬ್ಬಂದಿಗಳ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ನಮ್ಮ ಪತ್ರಿಕಾ ತಂಡದಿ0ದ (ವಾರ್ತಜಾಲ) ದೇಶದ ಜನರ ಪರವಾಗಿ ಭಗವಂತನಲ್ಲಿ ಪ್ರಾರ್ಥಿಸೋಣ.
Varthajala Daily, Bengaluru
0 Comments