Ticker

6/recent/ticker-posts

Ad Code

Responsive Advertisement

ಭಾರತದ ಲಿಂಗಾನುಪಾತದಲ್ಲಿ ಗಣನೀಯ ಏರಿಕೆ, ಮಹಿಳೆಯರೇ ಮೇಲುಗೈ !

ನವದೆಹಲಿ, ಡಿ 18: ಭಾರತದಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಐದನೇ ಸುತ್ತಿನ ಪ್ರಕಾರ, ೧೦೦೦ ( 1000 ) ಪುರುಷರಿಗೆ ಅಂದಾಜು ೧೦೨೦ ( 1020 ) ಮಹಿಳೆಯರು ಇದ್ದಾರೆ. ಈ ಲಿಂಗಾನುಪಾತದ ಅಂಕಿ ಅಂಶ ನವೆಂಬರ್ನಲ್ಲಿ ಹೊರಬಿದ್ದಿದೆ. ಈ ಮೂಲಕ ಕಳೆದ ಮೂವತ್ತು ವರ್ಷಗಳಲ್ಲಿ ಭಾರತದ ಲಿಂಗಾನುಪಾತದಲ್ಲಿ ಗಣನೀಯ ಏರಿಕೆ ಕಂಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಐದನೇ ಸುತ್ತಿನ ಪ್ರಕಾರ, ದೇಶದ ಜನಸಂಖ್ಯೆಯ ಲಿಂಗ ಅನುಪಾತವು (೧೦೦೦ ಪುರುಷರಿಗೆ ಮಹಿಳೆಯರು) ೧೦೨೦ ಎಂದು ಅಂದಾಜಿಸಲಾಗಿದೆ' ಎಂದು ಕೇಂದ್ರ ಆರೋಗ್ಯ ಮತ್ತು ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.

ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ ಐದನೇ ಸುತ್ತಿನ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ನವೆಂಬರ್ ೨೪ ರಂದು ಬಿಡುಗಡೆ ಮಾಡಿತ್ತು ಇದರ ಪ್ರಕಾರ ಭಾರತದಲ್ಲಿ ಈಗ ಪ್ರತಿ ೧೦೦೦ ಪುರುಷರಿಗೆ ಸಮಾನಾಗಿ ೧,೦೨೦ ಮಹಿಳೆಯರಿದ್ದಾರೆ. ಅಲ್ಲದೇ ಜನಸಂಖ್ಯಾ ಸ್ಫೋಟದ ಭೀತಿ ಮುಂದೆ ಎದುರಾಗದು ಎಂದು ಈ ಸಮೀಕ್ಷೆ ಹೇಳಿತ್ತು. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯು ಒಂದು ಮಾದರಿ ಸಮೀಕ್ಷೆಯಾಗಿದೆ. ಮುಂದೆ ರಾಷ್ಟ್ರೀಯ ಜನಗಣತಿ ನಡೆಸಿದಾಗ ಮಾತ್ರ ಹೆಚ್ಚಿನ ಜನಸಂಖ್ಯೆಗೆ ಈ ಸಮೀಕ್ಷೆಯನ್ನು ಅನ್ವಯಿಸಿದಾಗ ಇದನ್ನು ಖಚಿತವಾಗಿ ಹೇಳಬಹುದಾಗಿದೆ ಎಂದಿತ್ತು.

ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯೊಂದಿಗೆ ಮಕ್ಕಳ ಲಿಂಗ ಅನುಪಾತದ ಸುಧಾರಣೆಯ ಬಗ್ಗೆ ಸಚಿವರು, 'ಯೋಜನೆಯ ಪ್ರಮುಖ ಅಂಶಗಳಲ್ಲಿ ರಾಷ್ಟ್ರವ್ಯಾಪಿ ಮಾಧ್ಯಮ ಮತ್ತು ಪ್ರಚಾರ ಅಭಿಯಾನಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಬಹು-ವಲಯಗಳ ಮಧ್ಯಸ್ಥಿಕೆಗಳು ಕೂಡ ಇದರಲ್ಲಿ ಸೇರಿವೆ. 

೧೮೭೬ರ ನಂತರ ನಡೆಸಿದ ಸಮೀಕ್ಷೆಗಳೆಲ್ಲದರ ಪೈಕಿ, ಈ ಸಮೀಕ್ಷೆ ಮೊದಲ ಬಾರಿಗೆ, ಸ್ತ್ರೀಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ ಎಂದು ತೋರಿಸಿದೆ. ಅಲ್ಲದೆ, ೧೯೯೨ರಲ್ಲಿ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷಾ ಘಟಕ ಪ್ರಾರಂಭವಾದ ನಂತರ ಮೊದಲ ಬಾರಿಗೆ, ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿರುವುದಾಗಿ ದಾಖಲಾಗಿದೆ. 

NFHS-5 ಸಮೀಕ್ಷೆಯನ್ನು ೨೦೧೯ ಮತ್ತು ೨೦೨೧ ರ ನಡುವೆ ಎರಡು ಹಂತಗಳಲ್ಲಿ ನಡೆಸಲಾಗಿದೆ. ಮೊದಲನೆಯ ಹಂತದ ಸಮೀಕ್ಷೆಯನ್ನು ೨೦೧೯ರ ಜೂನ್ ಮತ್ತು ೨೦೨೦ರ ಜನವರಿ ೩೦ರವರೆಗೆ ಮತ್ತು ಎರಡನೇ ಹಂತದ ಸಮೀಕ್ಷೆಯನ್ನು ೨೦೨೦ರ ಜನವರಿ ೨ರಿಂದ ೨೦೨೧ರ ಏಪ್ರಿಲ್ ೩೦ರವರೆಗೆ ನಡೆಸಲಾಯಿತು. ದೇಶದ ೭೦೭ ಜಿಲ್ಲೆಗಳ ೬೫೦,೦೦೦ ಕುಟುಂಬಗಳನ್ನು ಈ ಸಮೀಕ್ಷೆ ಒಳಗೊಂಡಿದೆ. ೨ ಹಂತದಲ್ಲಿ ರಾಜ್ಯಗಳಾದ ಅರುಣಾಚಲ ಪ್ರದೇಶ, ಛತ್ತೀಸ್ಗಢ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ದೆಹಲಿಯ ಓಅಖಿ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ ಪುದುಚೇರಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. 

ಭಾರತದಲ್ಲಿ ಈ ಹಿಂದೆ ಪುರುಷ ಹಾಗೂ ಮಹಿಳೆಯರ ಲಿಂಗಾನುಪಾತ ತೀವ್ರ ಏರುಪೇರಿನಲ್ಲಿತ್ತು. ಈ ವೇಳೆ ಅಂದರೆ ೧೯೯೦ರಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್ಗೆ ಬರೆದ ಲೇಖನದಲ್ಲಿ ಭಾರತವನ್ನು ( missing women country ) ಎಂದು ಕರೆದಿದ್ದರು. ಅಂದರೆ ಮಹಿಳೆಯರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಆಗ ಭಾರತದಲ್ಲಿ ೧,೦೦೦ ಪುರುಷರಿಗೆ ೯೨೭ ಮಹಿಳೆಯರಿದ್ದರು. ೨೦೦೫-೦೬ ರಲ್ಲಿ ನಡೆಸಲಾದ NFHS-3 ಸಮೀಕ್ಷೆ ಪ್ರಕಾರ, ಲಿಂಗಾನುಪಾತವು ಸಮಾನವಾಗಿತ್ತು, ೧೦೦೦ ಪುರುಷರಿಗೆ ೧೦೦೦ ಮಹಿಳೆಯರಿದ್ದರು. ಆದರೆ ೨೦೧೫-೧೬ ರ NFHS-4 ಸಮೀಕ್ಷೆಯಲ್ಲಿ ೧೦೦೦ ಪುರುಷರಿಗೆ ೯೯೧ ಮಹಿಳೆಯರಿದ್ದರು. ಆದರೆ ಇದೇ ಮೊದಲ ಬಾರಿಗೆ NFHS ಸಮೀಕ್ಷೆಯಲ್ಲಿ ಲಿಂಗ ಅನುಪಾತವು ಮಹಿಳೆಯರ ಪರವಾಗಿ ಬಂದಿದೆ.

ಪ್ರತಿ ದೇಶದಲ್ಲಿ ಯಾವಾಗಲೂ ಗಂಡು ಹೆಣ್ಣಿನ ಲಿಂಗಾನುಪಾತ ಸಮಾನವಾಗಿ ಇರಬೇಕು. ಇದು ಯಾವುದೇ ಕಾರಣಕ್ಕೂ ಹೆಚ್ಚು ಕಡಿಮೆ ಆಗಬಾರದು. ಆದರೆ ನಮ್ಮ ದೇಶದಲ್ಲಿ ಜನರ ಅನಕ್ಷರತೆ, ಬಡತನ ಮೂಢನಂಬಿಕೆಯಿ0ದಾಗಿ ಹಾಗೂ ಗಂಡು ಮಕ್ಕಳ ಮೇಲಿನ ವ್ಯಾಮೋಹ, ವಂಶೋದ್ಧಾರಕನೇ ಬೇಕು ಎಂಬ ಕಾರಣಕ್ಕೆ ಬಹುತೇಕ ಅಕ್ರಮವಾಗಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ನಡೆಸಿದ ಪರಿಣಾಮ ಇತ್ತೀಚಿನವರೆಗೆ ಭಾರತದಲ್ಲಿ ಯಾವಾಗಲೂ ಗಂಡು ಹೆಣ್ಣಿನ ಲಿಂಗಾನುಪಾತ ಸಮತೋಲವಾಗಿ ಬಂದಿರಲಿಲ್ಲ. ಯಾವಾಗಲೂ ಇಲ್ಲಿ ಪುರುಷರ ಜನಸಂಖ್ಯೆ ಸ್ತ್ರೀ ಜನಸಂಖ್ಯೆಗಿ0ತ ಹೆಚ್ಚಳ ಆದರೆ ನವೆಂಬರ್ ನಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಹಾಗೂ ಆರೋಗ್ಯ ಸಮೀಕ್ಷೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

Varthajala Daily, Bengaluru

Post a Comment

0 Comments

Ad Code

Responsive Advertisement