Ticker

6/recent/ticker-posts

Ad Code

Responsive Advertisement

ವಿಧಾನಪರಿಷತ್ ಚುನಾವಣೆಲಿ ಆತಂಕವಿರುವುದು ಕಾಂಗ್ರೆಸ್ಗೆ: ಸಿಎಂ ಬೊಮ್ಮಾಯಿ

ಬೆಳಗಾವಿ, ಡಿಸೆಂಬರ್ 07: ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ. ರಾಜ್ಯ ವಿಧಾನಪರಿಷತ್ ಚುನಾವಣೆಲಿ ಆತಂಕವಿರುವುದು ಕಾಂಗ್ರೆಸ್ಗೆ ಎಂದು ಸಿಎಂ ಬೊಮ್ಮಾಯಿ ಬೆಳಗಾವಿಯಲ್ಲಿ ಇಂದು ವಿಧಾನಪರಿಷತ್ ಚುನಾವಣೆ ಪ್ರಚಾರದ ಸಮಯದಲ್ಲಿ ಹೇಳಿದರು. ನನ್ನ ಅವಧಿಯಲ್ಲೇ ವಿಧ್ಯಾಯೋಜನೆ ಜಾರಿ ಆಗುತ್ತೆ. ರಾಜ್ಯದ ಅಕಾಲಿಕ ಮಳೆ-ಬೆಳೆ ಹಾನಿ ವಿಚಾರವಾಗಿ ಪರಿಹಾರ ನೀಡಲು ನಮ್ಮ ಸರಕಾರ ಸಿದ್ಧವಿದೆ, ಈ ವಿಚಾರವಾಗಿ ಕಾಂಗ್ರೆಸ್ನವರಿ0ದ ನಮಗೆ ಯಾವುದೇ ಪ್ರಮಾಣಪತ್ರ ಬೇಕಾಗಿಲ್ಲ.


ನಾವೇನು ಜೆಡಿಎಸ್‌ನವರ ಮೈತ್ರಿ ಬಯಸಿಲ್ಲ, ಅದು ಅವರ ಪಕ್ಷದ ವಿಚಾರ, ನಮಗೆ ಬೇಡದ ವಿಷಯ. ಹಿಂದೆ, ಈ ವಿಚಾರವಾಗಿ ಯಡಿಯೂರಪ್ಪನವರು ಬಹಿರಂಗ ಬೆಂಬಲ ಕೋರಿದ್ದರು, ಅದು ಅವರ ಅಭಿಪ್ರಾಯ, ಅವರು ಹಿರಿಯರಿದ್ದಾರೆ. ನಮ್ಮ ಪಕ್ಷವು ಬೆಳಗಾವಿಯ ವಿಧಾನಪರಿಷತ್ ಚುನಾವಣೆಲಿ ಜಯಗಳಿಸುವುದು ಖಚಿತ. ನಮ್ಮ ಪಕ್ಷದ ಕಾರ್ಯಕರ್ತರು ವಿಜೃಂಬಣೆಯಿ0ದ ಗೆಲುವು ಆಚರಿಸುವುದು ನಿಶ್ಚಿತ ಎಂದು ಹೇಳಿದರು.

Post a Comment

0 Comments

Ad Code

Responsive Advertisement