Ticker

6/recent/ticker-posts

Ad Code

Responsive Advertisement

ಉತ್ತಮ ಶಾಲೆ ತೆರೆದರೆ ಜೈಲುಗಳನ್ನು ಮುಚ್ಚಬಹುದು: ಶ್ರೀ ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ

ಮಧುಗಿರಿ :ವಿದ್ಯಾರ್ಥಿಗಳು ದೇಶದ ನಿಜವಾದ ಭವಿಷ್ಯ,  ಅಬ್ದುಲ್ ಕಲಾಂ ಸೇರಿದಂತೆ ಮಹನೀಯರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸು ಗಳಿಸಿ ತುಮಕೂರು ಶ್ರೀ ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಎಂ ಜಿ ಎಂ  ಶಾಲೆಯಲ್ಲಿ  ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಹಾಲಪ್ಪ ಪ್ರತಿಷ್ಠಾನ ವತಿಯಿಂದ ಸರ್ಕಾರಿ ಶಾಲೆಗಳ ಉನ್ನತಿಕರಣ ಹಾಗೂ ಶಾಲಾ ಪೀಠೋಪಕರಣಗಳು ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ವಿದ್ಯಾರ್ಥಿ ದೆಸೆ ಜೀವನದ ಅತ್ಯಂತ ಶ್ರೇಷ್ಠ ಘಟ್ಟ. ಜೀವನದಲ್ಲಿ ಅರ್ಥಹೀನವಾಗಿ ಕಳೆದ ಸಮಯ ಅತ್ಯಮೂಲ್ಯ ಕಾಲಘಟ್ಟದ ನಷ್ಟ. ಸಮಯ ಎಲ್ಲಕ್ಕಿಂತ ಶ್ರೇಷ್ಠ. ದೇವರು ಎಲ್ಲರಿಗೂ ಕೊಟ್ಟ ಶ್ರೇಷ್ಠ ಸಂಪನ್ಮೂಲ ಸಮಯ.  ಇಂದು ಒಂದು ಉತ್ತಮ ಶಾಲೆ ತೆರೆದರೆ ನಾಳೆ ನೂರು ಜೈಲುಗಳನ್ನು ಮುಚ್ಚಬಹುದು. ಶಿಕ್ಷಕರು ಮಕ್ಕಳಿಗೆ ನೈತಿಕತೆಯ ಚೌಕಟ್ಟಿನಲ್ಲಿ ಸುಂದರವಾದ ಪರಿಸರವನ್ನು ಪರಿಚಯಿಸಬೇಕಿದೆ ಎಂದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಅವಕಾಶಗಳಿವೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.   ಸರ್ಕಾರದ ವತಿಯಿಂದ ಇಂದು ಆಂಗ್ಲ ಮಾದ್ಯಮ ಆರಂಬಿಸಿ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಪೀಟೋಪಕರಣಗಳು ಮತ್ತು ಇತರೆ ಕ್ರೀಡಾ ಸಾಮಗ್ರಿಗಳ ಕೊರತೆ ಕಂಡು ಬರುತ್ತಿದೆ ಎಂದು ತಿಳಿಸಿದರು...

ಈ ಸಂದರ್ಭದಲ್ಲಿ ಸೆಂಟ್ರಲ್ ಮುಸ್ಲೀಂ ಅಸೋಸಿಯೇಶನ್ ಕಾರ್ಯದರ್ಶಿ ಮನ್ಸೂರ್ ಅಹಮದ್, ಎಂ.ಜಿ.ಎಂ  ಶಾಲೆಯ ಅಧ್ಯಕ್ಷ ಡಿ.ಜಿ. ಶಂಕರನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಂ.ಎಸ್. ಶಂಕರನಾರಾಯಣ್, ಧಾರ್ಮಿಕ ಮುಖಂಡ ಎಂ.ಜಿ. ಶೀನಿವಾಸ ಮೂರ್ತಿ, ಫ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ. ವೆಂಕಟರಾಮು , ಬಿಇಓ ನಂಜುಂಡಯ್ಯ, ಸಂದೀಪ್ ನಾರಾಯಣ್, ಸಮಾಜ ಸೇವಕರಾದ ರಿಜ್ವಾನ್ ಪಾಷ    ಹಾಜರಿದ್ದರು.

Post a Comment

0 Comments

Ad Code

Responsive Advertisement