Ticker

6/recent/ticker-posts

Ad Code

Responsive Advertisement

RANGAKANNADA : VARTHAJALA : ಮಲ್ಲೇಶ್ವರದ ಸೇವಾಸದನದಲಿ ನಗೆಗಡಲಿನ ಸಂಜೆ....

ಮಲ್ಲೇಶ್ವರದ ‘ಸೇವಾ ಸದನ’ ದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದ “ಗೆಜ್ಜೆ-ಹೆಜ್ಜೆ” ರಂಗ ತಂಡ ಹಾಗೂ ದ್ವಿಭಾಷಾ ರಾಷ್ಟಿಯ ದಿನಪತ್ರಿಕೆ “ವಾರ್ತಾಜಾಲ” ಯ ಸಹಯೋಗದಲ್ಲಿ “ರಂಗ ಕನ್ನಡ-೨೦೨೧” ಸ್ಮರಣ ಸಂಚಿಕೆಯ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈವ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಹಿರಿಯ ಪತ್ರಕರ್ತ ಶ್ರೀಯುತ ವೆಂಕಟನಾರಾಯಣ್ ಹಾಗೂ ಯಶಸ್ವಿ ಸಿನಿಮಾ ನಿರ್ದೇಶಕ ನಾಗಣ್ಣ ಮತ್ತು ಪದ್ಮಶ್ರೀ ಪುರಸ್ಕೃತ ಡಾ| ದೊಡ್ಡರಂಗೇಗೌಡ, ಮತ್ತೊಬ್ಬ ಹಿರಿಯ ಪತ್ರಕರ್ತ ಮುಳ್ಳಹಳ್ಳಿಸೂರಿ, ಹಿರಿಯ ಕಲಾವಿದ ಬ್ಯಾಂಕ್ ಜನಾರ್ದನ್, ಸಾಹಿತಿ ಹಾಗೂ ಪತ್ರಕರ್ತ ಹೊರೆಯಾಲ ದೊರೆಸ್ವಾಮಿ, ಮಲ್ಲೇಶ್ವರ ಸಂಚಾರಿ ವಿಭಾಗದ ಸಬ್ ಇನ್ಸ್ಪೆಕ್ಟರ್ ಶಾಂತ ಶೆಟ್ಟಿ ಕೆ, ವಾರ್ತಾಜಾಲ ಮತ್ತು ಮಲ್ಲೇಶ್ವರ ಸುತ್ತಮುತ್ತ ಪತ್ರಿಕೆಯ ಸಂಪಾದಕ ಬಿ.ಕೆ.ಪ್ರಸನ್ನ - ಮುಂತಾದವರ ಸಮ್ಮುಖದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ರಂಗನಟ ಮೈಸೂರು ರಮಾನಂದ್ ಅವರ “ಸಾರಾಯಿ ಸಂಕಟ” ಎಂಬ ನಗೆ ನಾಟಕ ಹಾಗೂ ಕುಮಾರಿ ಅಭಿಜ್ಞಾ ಪಿ. ಕಶ್ಯಪ್ ಅವರ ಪ್ರಾರ್ಥನೆ, ಶ್ರೀಮತಿ ಪ್ರಸನ್ನ ಲಕ್ಷ್ಮಿ ಟಿ.ಆರ್. ಮತ್ತು ಅವರ ಸುಪುತ್ರಿ ಸೌಮ್ಯಶ್ರೀ ವೈ.ಕೆ. ಅವರ ಭಾವಗೀತೆಗಳ ಸಂಗಮದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ನೆರೆದಿದ್ದ ನೋಡುಗರು, ಹಾಜರಿದ್ದ ಗಣ್ಯರಿಗೆ ಮೈಸೂರು ರಮಾನಂದ್ ಅವರ ನಗೆ ನಾಟಕ ಇಡೀ ಸೇವಾ ಸದನವನ್ನು ನಗೆಗಡಲಿನಲ್ಲಿ ತೇಲಿಸಿತು. 







ಸ್ಮರಣ ಸಂಚಿಕೆಯ ವಿನ್ಯಾಸ ಮಾಡಿದ ರಾಜು ಬುಗರಿಬೆಟ್ಟು ಅವರ ಶ್ರಮ ಸಂಚಿಕೆಯನ್ನು ನೋಡಿ ಅದರ ಮೇಲ್ಮೆö ನೋಡಿದ ಕಲಾಸಕ್ತರು ಹಾಗೂ ಆಗಮಿಸಿದ ಗಣ್ಯರು ಮೆಚ್ಚುಗೆ ಸೂಚಿಸಿದರು. ಹತ್ತಾರು ಪುರಸ್ಕೃತರು, ನೂರಾರು ನೋಡುಗರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. 

Post a Comment

0 Comments

Ad Code

Responsive Advertisement