Ticker

6/recent/ticker-posts

Ad Code

Responsive Advertisement

25 ವರ್ಷಗಳ ನಂತರ ಕಾಂಗ್ರೆಸ್‌ಗೆ ಗಂಡು ಮಗು ಹುಟ್ಟಿದೆ: ಈಶ್ವರಪ್ಪ

25 ವರ್ಷಗಳ ನಂತರ ಕಾಂಗ್ರೆಸ್‌ಗೆ ಗಂಡು ಮಗು ಹುಟ್ಟಿದೆ ಎಂದು ಈಶ್ವರಪ್ಪ ಲೇವಡಿ ಮಾಡಿದರು. ನಾಮಕರಣ ಮಾಡಿ ಒಳ್ಳೆಯ ಹೆಸರಿಟ್ಟರೇ ನಾನು ಭಾಗಿಯಾಗುತ್ತೇನೆ ಎಂದ ಕಾಂಗ್ರೆಸ್ಸಿಗರ ಕಾಲೆಳೆದರು.

ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಿ0ದ ಬಿಜೆಪಿ ಬುಡ ಅಲ್ಲಾಡ್ತಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಕೆ.ಎಸ್.ಈಶ್ವರಪ್ಪ ಭರಪೂರ ವ್ಯಂಗ್ಯದ ಮಾತುಗಳಿಂದ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್‌ಗೆ ಬುಡವೇ ಇಲ್ಲ, ಈಗಾಗಲೇ ಬುಡವೇ ಹೊರಟು ಹೋಗಿದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಮಾತಿನಲ್ಲೇ ತಿವಿದಿದ್ದಾರೆ. ೨೦೨೩ಕ್ಕೆ ನಾವೇ ಅಧಿಕಾರಕ್ಕೆ ಬರ್ತೇವೆ. ಎಲ್ಲೋ ಅಲ್ಪಸಂಖ್ಯಾತರ ಇರುವ ಕಡೆ ಗೆದ್ದು, ಕನಸ್ಸು ಕಾಣ್ತಿದ್ದಾರೆ ಅಷ್ಟೇ. ಆವರ ಆಸೆ ಎಂದಿಗೂ ನನಸ್ಸಾಗಲ್ಲ. ಕೆಲವು ನಗರ ಸಭೆಗಳಲ್ಲಿ ಅಲ್ಪಸಂಖ್ಯಾತರಿ0ದ ಮತ ಜಾಸ್ತಿ ಬಂದಿದೆ ಎಂದು ಬೀಗುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪರವಾದ ಅಲೆ ಕೇವಲ ಕನಸ್ಸಿನ ಮಾತು, ಕನಸ್ಸು ಕಾಣೋದಕ್ಕೆ ಯಾವುದೇ ಟ್ಯಾಕ್ಸ್ ಇಲ್ಲ. ೨೦೨೩ರ ನಂತರವೂ ೫ ವರ್ಷಗಳ ಕಾಲ ಬಿಜೆಪಿ ಸರ್ಕಾರವೇ ಇರಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸದ ಮಾತುನಗಳನ್ನಾಡಿದರು.

ಕಳೆದ ಬಾರಿಗಿಂತ ನಮಗೆ ದೊಡ್ಡ ಪ್ರಮಾಣದ ಯಶಸ್ವಿ ಸಿಕ್ಕಿದೆ. ತವರು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದರಿಂದ ನಮಗೆ ಸಾಧನೆ ಮಾಡಲಾಗಿರಲಿಲ್ಲ. ನಮ್ಮ ಕ್ಷೇತ್ರದಲ್ಲಿ ಯಾವತ್ತೂ ಕೂಡ ಗೆದ್ದಿರಲಿಲ್ಲ, ನಮ್ಮಲ್ಲಿ ಅಲ್ಪ ಸಂಖ್ಯಾತರು ೬೦% ಇದ್ದಾರೆ. ಹೀಗಾಗಿ ಗೆಲ್ಲಲು ಆಗಲಿಲ್ಲ. ಗ್ರಾಮ ಪಂಚಾಯತಿಯಲ್ಲಿ ನಾವು ಹೆಚ್ಚಿದ್ದೇವೆ. ಪಟ್ಟಣ ಪಂಚಾಯತಿಯಲ್ಲಿ ಈಗ ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದೇವೆ. ಅಲ್ಪಸಂಖ್ಯಾತರಿರೋ ಯಾವುದೋ ಕಡೆ ನಗರ ಸಭೆಯಲ್ಲಿ ನಾಲ್ಕು ಸೀಟು ಹೆಚ್ಚು ಪಡೆದಿದ್ದಾರೆ. ಅಷ್ಟಕ್ಕೆ ಗೆದ್ದಿದ್ದೇವೆ ಅಂತ ಬೀಗೋದು ಬೇಡ. ಬಿಜೆಪಿ ೨೦೨೨ರಲ್ಲೂ ಇರಲಿದೆ, ೨೦೨೩ಕ್ಕೂ ಮತ್ತೆ ಅಧಿಕಾರಕ್ಕೆ ಬರಲಿದೆ, ಮುಂದೆಯೂ ಅಧಿಕಾರವನ್ನ ನಡೆಸಲಿದ್ದೇವೆ ಎಂದರು.

ಇನ್ನು ಸಚಿವ ಈಶ್ವರಪ್ಪ ಅವರು ಕೂಡ ಕಾಂಗ್ರೆಸ್ ಬಗ್ಗೆ ಲೇವಡಿ ಮಾಡಿದರು. ೨೫ ವರ್ಷಗಳ ನಂತರ ಕಾಂಗ್ರೆಸ್‌ಗೆ ಗಂಡು ಮಗು ಹುಟ್ಟಿದೆ, ಆ ರೀತಿ ಅವರು ಸಂಭ್ರಮಿಸುತ್ತಿದ್ದಾರೆ ಎಂದು ಈಶ್ವರಪ್ಪ ಲೇವಡಿ ಮಾಡಿದರು. ಎಲ್ಲಿಲ್ಲಿ ಗೆದ್ದಿದ್ದೇವೆ ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತೇವೆ, ಬರುವಂತಹ ದಿನಗಳಲ್ಲಿ ಎಲ್ಲಾ ಕಡೆ ಅಧಿಕಾರ ತರುವ ಕೆಲಸ ಮಾಡುತ್ತೇವೆ. ಬಿಜೆಪಿ ಬುಡ ಅಲ್ಲಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ಕಿಡಿಕಾರಿದರು. ೨೫ ವರ್ಷ ಮದ್ವೆ ಆದ್ಮೆಲೆ ಗಂಡು ಮಗು ಹುಟ್ಟದ ಹಾಗೇ ಅವ್ರು ಸಂಭ್ರಮಿಸುತ್ತಿದ್ದಾರೆ. ನಾಮಕರಣ ಮಾಡಿ ಒಳ್ಳೆಯ ಹೆಸರಿಟ್ಟರೇ ನಾನು ಭಾಗಿಯಾಗುತ್ತೇನೆ ಎಂದ ಕಾಲೆಳೆದರು.

ಶೀಘ್ರವೇ ಬಿಬಿಎಂಪಿ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಚುನಾವಣೆಯಲ್ಲಿ ಗೆಲ್ಲಲು ಸರ್ಕಾರ ಸಜ್ಜಾಗಿದೆ. ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲು ಜನವರಿ ೨ರಂದು ಬೆಂಗಳೂರು ಶಾಸಕರ ಸಭೆಯನ್ನು ಸಿಎಂ ಕರೆದ. ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ ೧೦ಗಂಟೆಗೆ ನಡೆಯಲಿರುವ ಸಭೆಗೆ ಬೆಂಗಳೂರಿನ ಎಲ್ಲಾ ಶಾಸಕರನ್ನು ಆಹ್ವಾನಿಸಲಾಗಿದೆ.

೧೫ ರಿಂದ ೧೮ನೇ ವರ್ಷದ ಮಕ್ಕಳಿಗೆ ಲಸಿಕೆ ಹಿನ್ನೆಲೆ, ಜನವರಿ ೩ ರಂದು ಲಸಿಕಾಕರಣ ಕಾರ್ಯಕ್ರಮದ ಚಾಲನೆಗೆ ಆದೇಶ ಹೊರಡಿಸಲಾಗಿದೆ. ಜಿಲ್ಲೆಗಳ ಉಸ್ತುವಾರಿ ಸಚಿವರಿಂದ ಜಿಲ್ಲೆಗಳಲ್ಲಿ ಲಸಿಕಾ ಚಾಲನೆಗೆ ಆದೇಶಿಸಲಾಗಿದೆ. ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರಿಂದ ಲಸಿಕಾಕರಣ ಕಾರ್ಯಕ್ರಮದ ಚಾಲನೆಗೆ ಸೂಚಿಸಲಾಗಿದೆ. ನನ್ನ ಪ್ರಕಾರ ಅಧಿಕಾರ ವಿಕೇಂದ್ರೀಕರಣ ಆಗಬೇಕು. ಡಿ.ಸಿ ಮತ್ತು ಸಿಇಓ ಜೊತೆ ಆಗಬೇಕು. ಹಲವು ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಜಲ ಜೀವನ್ ಮಿಷನ್, ಆವಾಸ್ ಯೋಜನೆ, ರಾಜ್ಯ ಸರ್ಕಾರದ ಹಲವಾರು ಯೋಜನೆ ಬಗ್ಗೆ ಚರ್ಚೆ ಆಗಿದೆ. ಬಡತನ ರೇಖೆಗಿಂತ ಕಳಗಿರೋರನ್ನ ಮೇಲೆತ್ತುವ ಯೋಜನೆ ಬಗ್ಗೆ ಚರ್ಚೆ ಆಗಿದೆ. ಕೋವಿಡ್ ನಿರ್ವಹಣೆ, ವ್ಯಾಕ್ಸಿನ್ ನೀಡುವ ಬಗ್ಗೆ ಚರ್ಚೆ ಆಗಿದೆ.ಕೆಲವೆಡೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ, ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ಮಾಡಿ ರಿಪೋರ್ಟ್ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

Varthajala Daily, Bengaluru

Post a Comment

0 Comments

Ad Code

Responsive Advertisement