Ticker

6/recent/ticker-posts

Ad Code

Responsive Advertisement

Breaking News: ಗುಜರಿ ವಸ್ತುಗಳ ಹರಾಜಿನಿಂದ ನೈಋತ್ಯ ರೈಲ್ವೆಗೆ ನೂರು ಕೋಟಿಗಿಂತ ಹೆಚ್ಚು ಲಾಭ!!

ಹುಬ್ಬಳ್ಳಿ, ಡಿ. 30: ನೈಋತ್ಯ ರೈಲ್ವೆಗೆ ಸಂಬ0ಧಪಟ್ಟ ಗುಜರಿ ವಸ್ತುಗಳ ಮಾರಾಟದಿಂದ ೧೦೦ ಕೋಟಿಗು ಹೆಚ್ಚು ರೂಗಳು ಲಾಭವಾಗಿದ್ದು, ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದು ತಿಳಿದುಬಂದಿದೆ.

ಮಾರ್ಚ್ ೨೦೨೨ರ ವೇಳೆಗೆ ನೈಋತ್ಯ ರೈಲ್ವೆ ರೂ ೧೫೦ ಕೋಟಿಗೂ ಹೆಚ್ಚಿನ ಮೊತ್ತದ ಮಾರಾಟವನ್ನು ಸಾಧಿಸುವ ವಿಶ್ವಾಸವಿದೆ ಎಂದು ಹುಬ್ಬಳ್ಳಿ ವಿಭಾಗದ ಪ್ರಧಾನ ವ್ಯವಸ್ಥಾಪಕರು ಸುದ್ಧಿಗಾರರಿಗೆ ತಿಳಿಸಿದ್ದಾರೆ.

ನೈಋತ್ಯ ರೈಲ್ವೆಯು ಗುಜರಿ ವಸ್ತುಗಳ ಸಂಗ್ರಹಣೆ ಹಾಗೂ ವಿಲೇವಾರಿಗೆ ವ್ಯವಸ್ಥಿತ ನಿರ್ವಹಣಾ ಪದ್ಧತಿಯನ್ನು ಅನುಸರಿಸುತ್ತಾ ಬಂದಿರುವುದು ಶ್ಲಾಘನೀಯ.

ಗುಜರಿ ವಸ್ತುಗಳ ವಿಲೇವಾರಿಯನ್ನು ಆನ್ ಲೈನ್ ಹರಾಜಿನ (ಇ-ಆಕ್ಷನ) ಮೂಲಕ ನಡೆಸಲಾಗುವುದು, ಇದರಲ್ಲಿ ದೇಶಾದ್ಯಂತ ಗುಜರಿ ವ್ಯಾಪಾರಿಗಳು ಪಾಲ್ಗೊಳ್ಳುತ್ತಾರೆ ಎಂದು ಪ್ರಧಾನ ವ್ಯವಸ್ಥಾಪಕರು ತಿಳಿಸಿದರು.

ಕೋವಿಡ-19ರ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಭಾರತೀಯ ರೈಲ್ವೆ ಗುಜರಿ ವಸ್ತುಗಳ ಸಂಗ್ರಹಣೆಗೆ ಒತ್ತು ನೀಡಿ ಅವುಗಳನ್ನು ಹರಾಜಿನ ಮೂಲಕ ಮಾರಾಟ ಮಾಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು ರೂ. ೧೫೦ ಕೋಟಿಗಳ ಮಾರಾಟವನ್ನು ಸಾಧಿಸಿ ಇಂದಿನವರೆಗಿನ ದಾಖಲೆಯನ್ನು ಮೀರುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಅಲ್ಲದೆ ಒಂದೇ ದಿನದಲ್ಲಿ ರೂ ೬.೬೮ ಕೋಟಿ ಮೌಲ್ಯದ ಗುಜರಿ ವಸ್ತು ಮಾರಾಟದಿಂದ ಗಳಿಸಿರುವುದು ಸಹ ದಾಖಲೆ ಎಂದೆನಿಸಿದೆ.

Varthajala Daily, Bengaluru

Post a Comment

0 Comments

Ad Code

Responsive Advertisement