Ticker

6/recent/ticker-posts

Ad Code

Responsive Advertisement

ದಲಿತ ಸಾಹಿತ್ಯ ಪರಿಷತ್ತು ಹಾಗೂ ಮುಕ್ತ ಜೀವನ ಸಂಸ್ಥೆ ವತಿಯಿಂದ ಮಹಾಪರಿನಿಬ್ಬಾಣ

ಮಧುಗಿರಿ: ಭಾರತ ದೇಶದ ಎಲ್ಲಾ ವರ್ಗದ ಮಹಿಳೆಯರಿಗೂ ಸ್ವತಂತ್ರವಾಗಿ ಬದುಕಲು ಸಂವಿಧಾನದಲ್ಲಿ ಸಮಾನತೆಯನ್ನು ಕೊಟ್ಟ ದೇಶದ ಏಕೈಕ ವ್ಯಕ್ತಿ ಎಂದರೆ ನಮ್ಮ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಎಂದು ತಾಲೂಕು ದಂಡಾಧಿಕಾರಿಗಳಾದ ವೈ.ರವಿ ತಿಳಿಸಿದರು.



ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಾಹಿತ್ಯ ಪರಿಷತ್ತು ಹಾಗೂ ಮುಕ್ತ ಜೀವನ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ ಮಹಾಪರಿನಿಬ್ಬಾಣದ ಅಂಗವಾಗಿ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ನಮ್ಮ ದೇಶದ ಪ್ರತಿಯೊಬ್ಬ ಮಹಿಳೆಯರು ಬಾಬಾ ಸಾಹೇಬರನ್ನು ನೆನಪು ಮಾಡುತ್ತಾ ತಮ್ಮ ಮನೆಗಳಲ್ಲಿ ಅವರ ಫೋಟೋ ಇಟ್ಟು ಪೂಜಿಸಬೇಕು. ಅವರ ನೆನಪಿಗಾಗಿ ಇಷ್ಟೋಂದು ಸಂಖ್ಯೆಯಲ್ಲಿ ಮೇಣದ ಬತ್ತಿ ಬೆಳಗಿಸಿ ಮಹಾತ್ಮರನ್ನು ಜ್ಞಾಪಿಸುತ್ತಿರುವ ಕೆಲಸ ಮಾಡುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.

ಸರ್ಕಲ್ ಇನ್ಸ್ಪೆಕ್ಟರ್ ಸರ್ದಾರ್ ಮಾತನಾಡಿ, ಅಂಬೇಡ್ಕರ್ ಸಾಹೇಬರ ಹಾದಿಯಲ್ಲಿ ಸುಂದರವಾದ ದೇಶದ ಭವಿಷ್ಯವಿದೆ ನಾವೆಲ್ಲರೂ ಅವರು ತೋರಿದ ಹಾದಿಯಲ್ಲಿ ನಡೆದರೆ ಅವರು ಕಂಡ ಕನಸು ನನಸಾಗಿ ಜಗ್ಗತ್ತಿಗೆ ನಾವು ಮಾದರಿಯಾಗುತ್ತೆವೆ ಅಂಬೇಡ್ಕರ್ ಸಾಹೇಬರ ಬಳಿ ಅದ್ಬುತವಾದ ಜ್ಞಾನ ಭಂಡಾರವೇ ಇತ್ತು ಅದುವೇ ಪುಸ್ತಕಗಳು ಇಂದಿನ ವಿಧ್ಯಾರ್ಥಿಗಳು ನಿರಂತರ ಶಿಕ್ಷಣಾಭ್ಯಾಸದ ಕಡೆ ಗಮನ ಕೊಡುತ್ತ ದೇಶದ ಉತ್ತಮ ಪ್ರಜೆಗಳಾಗಿ ಎಂದರು.

ಪುರಸಭಾ ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ, ಇತಿಹಾಸವನ್ನು ಅರಿತವರು ಇತಿಹಾಸವನ್ನು ನಿರ್ಮಿಸಬಲ್ಲರು ಎಂದು ಅಂಬೇಡ್ಕರ್ ಸಾಹೇಬರು ಸಾರಿ ಹೋಗಿದ್ದಾರೆ ಆದರೆ ಇಂದು ಶಿಕ್ಷಣವಂತರು ಇವರ ಮಾತನ್ನು ಮರೆತು ದೇಶದ ಬಗ್ಗೆ ಚಿಂತಿಸದೆ ಸ್ವಂತಕ್ಕಾಗಿ ಸ್ವಾರ್ಥಿಗಳಾಗುತ್ತ ನಮ್ಮ ಸಮ ಸಮಾಜದ ದಾರಿ ಕೆಡಿಸುತ್ತಿರುವುದು ಆತಂಕದ ವಿಷಯವಾಗಿದೆ ಎಂದರು. 

ರಾಜ್ಯ ಸಹಕಾರಿ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್ ಗಂಗಣ್ಣ ಮಾತನಾಡಿ, ಭಾರತೀಯರಾದ ನಾವು ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆ, ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋದಾಗ ಇಂತಹ ಆಚರಣೆಗಳಿಗೆ ಅರ್ಥ ಬರುತ್ತದೆ ಅವರ ಪ್ರತಿಮೆಗೆ ಬರೀ ಹಾರಗಳು ಹಾಕುವುದರಿಂದ ಅವರಿಗೆ ಗೌರವ ಕೊಟ್ಟಾಗೆ ಅಲ್ಲ ಅವರ ಕೊಡುಗೆಗಳ ಬಗ್ಗೆ ಜನ ಸಾಮನ್ಯರಿಗೆ ತಿಳಿಸಬೇಕು ಆಗ ಗೌರವ ಕೊಟ್ಟಂತಾಗುತ್ತದೆ ಎಂದರು.

ಭಾಕ್ಸ್ :  ಈವೇಳೆ ಅಂಬೇಡ್ಕರ್ ವೃತ್ತದ ಸುತ್ತಲೂ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರು ಸಹ ಬಂದು ಮೆಣದ ಬತ್ತಿ ಹಿಡಿದು ಭಾಗವಹಿಸಿದ್ದು ವಿಶೇಷವಾಗಿತ್ತು ಪ್ರತಿ ವರ್ಷದಂತೆ ಈ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮವು ಆಚರಿಸುತ್ತಿದ್ದು ಬಾಬಾ ಸಾಹೇಬರ ಪರಿನಿಬ್ಬಾಣದ ದಿನ ಐನೂರು ಕ್ಯಾಂಡಲ್ ಹಚ್ಚಿ ಸ್ಮರಿಸಿದ ಎಲ್ಲರಿಗೂ ಅಬಾರಿ ಆಯೋಜಕರಾದ ದ.ಸಾ.ಪ ತಾಲೂಕು ಅಧ್ಯಕ್ಷ ಡಾ.ಮಹರಾಜು ಹಾಗೂ ಮುಕ್ತ ಜೀವನ ಸಂಸ್ಥೆಯ ಡಾ.ಸಂಜೀವ್ ಮೂರ್ತಿ. 

ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್.ಬಿ.ಟಿ ರಾಮು, ಸಿದ್ದಾಪುರ ಗ್ರಾ.ಪಂ.ಅದ್ಯಕ್ಷ ವೀರಣ್ಣ ಮಾತನಾಡಿದರು. 

ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಜು, ಖಜಾಂಚಿ ವಿನಯ್ ಕುಮಾರ್, ಚಲನಚಿತ್ರ ಸಾಹಿತಿ ಹನುರಾಜ್, ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ರಾಂ ಪ್ರಸಾದ್, ಸ.ನೌ.ಸಂಘದ ಖಜಾಂಚಿ ಚಿಕ್ಕರಂಗಪ್ಪ,ಉಪನ್ಯಾಸಕ ಶಿವಕುಮಾರ್,ಶಿಕ್ಷಕರಾದ ರಂಗನಾಥ್,ರಂಗಶ್ಯಾಮಿ, ಸಿಆರ್‍ಪಿ ಜಗದೀಶ್, ಕೃಷ್ಣಮೂರ್ತಿ, ಐಟಿಐ ಹನ್ಮಂತರಾಯಪ್ಪ, ನಾಗಭೂಷಣ್, ಜೀವಿಕ ತಾಲೂಕು ಸಂಚಾಲಕ ಹನುಮಂತರಾಯ, ದಲಿತ ಮುಖಂಡರಾದ ಮುದ್ದೆನೇರಳೆಕೇರೆ ರಾಜು,ಮಲೇರಂಗಪ್ಪ , ಬಿಜವರ ರವಿ ,ನಿಲಯ ಪಾಲಕರಾದ ರಾಮಾಂಜಿನಪ್ಪ, ಜಯಮ್ಮ,ವಿಜಯಲಕ್ಷ್ಮೀ,ಈರಮುದ್ದಣ್ಣ ಹಾಗೂ ಕಾಲೇಜು ವಿಧ್ಯಾರ್ಥಿಗಳು ಭಾಗವಹಿಸಿದ್ದರು


Post a Comment

0 Comments

Ad Code

Responsive Advertisement