ನವಂಬರ್ 15, ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ವಿವಿಧ ಮಾರ್ಗಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ರಾತ್ರಿ ಸಾರಿಗೆ ಸೇವೆಗಳನ್ನು ಕಲ್ಪಿಸುತ್ತಿದೆ.
ಕೋವಿಡ್-19, ಲಾಕ್ಡೌನ್ ಸಡಿಲಿಕೆಗೊಂಡ ನಂತರದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಹಾಗೂ ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು, ಹಾಗೂ ಕೊರೊನಾ ವೈರಸ್/ವೈರಾಣು ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ನಿರ್ದೇಶಿಸಿರುವ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ರಾತ್ರಿ ಸಾರಿಗೆಗಳನ್ನು ಕಾರ್ಯಾಚರಣೆ ಗೊಳಿಸಲಾಗುತ್ತಿದೆ.
ಸಂಸ್ಥೆಯು ನಗರ ಮತ್ತು ನಗರದ ಹೊರವಲಯ ಪ್ರಯಾಣಿಕರಿಗೆ ರಾತ್ರಿ ಸಾರಿಗೆ ಸೇವೆಯ ಅವಶ್ಯಕತೆಯನ್ನು ಪರಿಗಣಿಸಿ ಸರ್ಕಾರದ ಮಾರ್ಗಸೂಚಿ ಅನ್ವಯ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಮುಖ ಬಸ್ ನಿಲ್ದಾಣ ಮತ್ತು ಇತರೆ ನಿಲ್ದಾಣಗಳಿಂದ ನಗರ ಮತ್ತು ನಗರದ ವಿವಿಧ ಪ್ರದೇಶಗಳಿಗೆ 48 ಗಂಟೆಗಳಲ್ಲಿ ಒಟ್ಟು 70 ಸಾರಿಗೆಗಳ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕಾಗಿ ವಿನಂತಿ.
-ವಾರ್ತಾ ಜಾಲ

0 Comments