ಮಧುಗಿರಿ : ತಾಲೂಕಿನಲ್ಲಿ ಮಳೆ ಹೆಚ್ಚಾಗಿದ್ದು ಎಲ್ಲಾ ಕೆರೆಗಳು ತುಂಬಿರುವ ಹಿನ್ನೆಲೆಯಲ್ಲಿ ನೀರು ಹರಿಯುತ್ತಿರುವ ಸ್ಥಳಗಳಿಗೆ ಹಾಗೂ ಕೆರೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ವೈ.ರವಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಈ ಬಾರಿಯ ಮಳೆಯಿಂದಾಗಿ ತಾಲೂಕಿನ ಎಲ್ಲಾ ಕೆರೆ-
ಕಟ್ಟೆಗಳು ತುಂಬಿದ್ದು, ದಶಕಗಳ ನಂತರ ನದಿಗಳು ತುಂಬಿ ಹರಿಯುತ್ತಿವೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಅನಾಹುತಗಳು ಆಗುವ ಸಂಭವವಿದ್ದು, ಪೋಷಕರು ನದಿ ಪಾತ್ರಗಳಿಗೆ ಹಾಗೂ ಕೆರೆ-ಕಟ್ಟೆಗಳ ಬಳಿ ತಮ್ಮ ಮಕ್ಕಳು ಹೋಗದಂತೆ ನೋಡಿಕೊಳ್ಳಬೇಕು. ಕೆರೆ - ಕಟ್ಟೆ ಹಾಗೂ ಹಳ್ಳಗಳಲ್ಲಿ ಮೀನು ಹಿಡಿಯಲು ಮಕ್ಕಳನ್ನು ಕರೆದುಕೊಂಡರೆ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
0 Comments