Ticker

6/recent/ticker-posts

Ad Code

Responsive Advertisement

ವರುಣನ ಆರ್ಭಟ: ಮಧುಗಿರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ.

ಮಧುಗಿರಿ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸ್ಥಿತಿ ಹೇಗಿದೆ ಅಂದರೆ ಮಳೆಯಿಂದಾಗಿ ಶೋಚನೀಯ ಹಂತಕ್ಕೆ ತಲುಪಿದೆ. ಇತ್ತೀಚೆಗೆ ಜಿಲ್ಲಾದ್ಯಂತ ಸುರಿಯುತ್ತಿರುವ ಎಡೆಬಿಡದ ಮಳೆಯಲ್ಲಿ ಎಲ್ಲಾ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ.     



ಹೆಚ್ಚಿದ ಮಳೆಯ ಕಾರಣದಿಂದಾಗಿ ಕೆರೆ ಹಳ್ಳ ತೊರೆಗಳು ತುಂಬಿ ಹರಿಯುತ್ತಿವೆ. ಆದರೆ      

ಎಡೆಬಿಡದ ಮಳೆಯಿಂದಾಗಿ ಮಧುಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆಯು ಅಲ್ಲಲ್ಲಿ ತೊಟ್ಟಿಕ್ಕುತ್ತಿದ್ದು, ರೋಗಿಗಳು ಆಸ್ಪತ್ರೆಗೆ ದಾವಿಸಲು ಕೂಡ ಹಿಂದೇಟು ಹಾಕುತ್ತಿದ್ದಾರೆ.      

ಕಟ್ಟಡದ ಕೆಲವೊಂದು ಕೊಠಡಿಗಳು ತುಂಬಾ ತೊಟ್ಟಿಕ್ಕುತಿದ್ದು, ಗಿಜಿಗುಡುವ ಪರಿಸ್ಥಿತಿ ಎದುರಾಗಿದೆ. 

ಮುಖ್ಯವಾಗಿ ಶವಾಗಾರದ ಛಾವಣಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ತೊಟ್ಟಿಕ್ಕುತ್ತಿದ್ದು, ವ್ಯವಸ್ಥೆಯು ತುಂಬಾ ಹದಗೆಟ್ಟಿದೆ. ಹಾಗೆಯೇ ಡಯಾಲಿಸಿಸ್ ನ ಕೊಠಡಿ ಸಹ ತುಂಬಾ ತೊಟ್ಟಿಕ್ಕುತ್ತಿರುವುದರಿಂದ ಡಯಾಲಿಸಿಸ್ ಮಾಡಿಸಿಕೊಳ್ಳುವುದಕ್ಕೂ ಕೂಡ ತುಂಬಾ ಭಯಪಡುತ್ತಿದ್ದಾರೆ. 

ಜೊತೆಗೆ ಡಯಾಲಿಸಿಸ್ ಮಾಡಿಸಿಕೊಳ್ಳುವವರಿಗೆ ತುಂಬಾ ತೊಂದರೆಯಾಗುತ್ತಿದೆ. 

ಎಡೆಬಿಡದ ಮಳೆಯಿಂದಾಗಿ ಈ ರೀತಿಯ ತೊಂದರೆ ಏರ್ಪಟ್ಟಿದ್ದು ,ರೋಗಿಗಳು ಭಯದ ವಾತಾವರಣದಿಂದ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಅವಸ್ಥೆಯಿಂದ ಪಾರು ಮಾಡಿದರೆ ಒಳಿತು. 

ಸಾರ್ವಜನಿಕ ಆಸ್ಪತ್ರೆ ಯಾಗಿರುವುದರಿಂದ ತಾಲೂಕಿನಾದ್ಯಂತ ಹಲವಾರು ರೋಗಿಗಳು ತಮ್ಮ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಲು ಧಾವಿಸುತ್ತಾರೆ. ಆದರೆ, ಇಂತಹ ಪರಿಸ್ಥಿತಿ ನೋಡಿದಾಗ ಯಾರು ತಾನೇ ಈ ಆಸ್ಪತ್ರೆಗೆ ಬರಲು ಧೈರ್ಯ ಮಾಡುತ್ತಾರೆ?

Post a Comment

0 Comments

Ad Code

Responsive Advertisement