Ticker

6/recent/ticker-posts

Ad Code

Responsive Advertisement

ಪುರವರ : ಜಿನುಗುತ್ತಿರುವ ಮಳೆ ಜನರ ಓಡಾಟ ಅಸ್ತವ್ಯಸ್ತ

 ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರ ದಲ್ಲಿ ಇಂದು ಬೆಳಗ್ಗೆಯಿಂದ ಜಿನುಗುತ್ತಿರುವ ಮಳೆಯ ಹನಿಗಳ ನಡುವೆ ಜನರ ಓಡಾಟ ಅಸ್ತವ್ಯಸ್ತವಾಗಿದೆ.




ಸುತ್ತಲೂ ಕೆಸರು ತುಂಬಿದ್ದು ಜಿಟಿಜಿಟಿ ಮಳೆಯಲ್ಲಿ ಕೂಡ ಪ್ರತಿ ಶುಕ್ರವಾರದಂತೆ ಸಂತೆ ಇದ್ದು ಇಂದು ಜನರಿಲ್ಲದ ತರಕಾರಿಗಳೆಲ್ಲಾ ಹಾಗೆ ಉಳಿದು ಜನರು ಬರುವುದನ್ನು ಕಾಯುತ್ತಿರುವ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ.    ಬಿಸಿಲು ಗರಿಗೆದರಿದರೆ ಜನರ ಓಡಾಟ ಹೆಚ್ಚಾಗಿರುತ್ತದೆ ಸುಗ್ಗಿಕಾಲ ವಾಗಿರುವುದರಿಂದ ರೈತಾಪಿಗಳು ಜಮೀನುಗಳ ಬಳಿ ತೊಡಗಿಕೊಂಡಿರುತ್ತಾರೆ ಆದರೂ ತರಕಾರಿಯನ್ನು ಕೊಳ್ಳಲು ಜನರು ಧಾವಿಸುತ್ತಿದ್ದು ಮಾರಾಟಗಾರರಲ್ಲಿ ಉತ್ಸಾಹ ತರುತ್ತಿತ್ತು ಆದರೆ ಈ ತುಂತುರು ಮಳೆಯಿಂದಾಗಿ ಜನರ ಓಡಾಟ ವಿಲ್ಲದೆ ತರಕಾರಿ ಮಾರುವವರು ದಾರಿಯನ್ನೆ ನೋಡುತ್ತ ಚಳಿಯಲ್ಲಿ ಕುಳಿತಿದ್ದಾರೆ. ಹಾಗೆ ಆಟೋ ಚಾಲಕರು ಕೂಡ ಜನರಿಲ್ಲದೆ ಆಟೋಗಳನ್ನು ಸಾಲಾಗಿ ನಿಲ್ಲಿಸಿ ಯಾರಾದರೂ ಬರಬಹುದೇನೋ ಎಂಬ ಆಸೆಯಲ್ಲಿ ಸಾಲಾಗಿ ನಿಲ್ಲಿಸಿರುವುದು ಕಾಣಬಹುದು.

Post a Comment

0 Comments

Ad Code

Responsive Advertisement