November 12, Mysuru: ವೇತನ ನೀಡುವಂತೆ ಒತ್ತಾಯಿಸಿ ಮೈಸೂರು ವೈದ್ಯಕೀಯ ಕಾಲೇಜಿನ ನಿವಾಸಿ ವೈದ್ಯಾಧಿಕಾರಿಗಳು (Resident doctors) ಪ್ರತಿಭಟನೆ ನಡೆಸಿದರು.
ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ವೈದ್ಯರು, ಶಾಂತಿಯುತ ಹೋರಾಟಕ್ಕೆ ಯಾವುದೇ ಫಲ ಸಿಗದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿವರೆಗೆ ಧರಣಿ ನಡೆಸುತ್ತಿದ್ದೇವೆ ಎಂದು ಮಾದ್ಯಮದವರಿಗೆ ತಿಳಿಸಿದರು.
ಸುಮಾರು 15 ತಿಂಗಳಿನಿಂದ ಬಾಕಿ ಉಳಿದಿರುವ ವೇತನ ಮತ್ತು ಭತ್ಯೆಗಳನ್ನು ಪಾವತಿಸುವಂತೆ ಒತ್ತಾಯಿಸಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿವಾಸಿ ವೈದ್ಯರು ನವೆಂಬರ್ 12 ರಂದು ಶುಕ್ರವಾರ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಮ್ಮ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ವೈದ್ಯರು, ಶಾಂತಿಯುತ ಹೋರಾಟಕ್ಕೆ ಯಾವುದೇ ಫಲ ಸಿಗದ ಹಿನ್ನೆಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಕೋವಿಡ್-19 ಭತ್ಯೆಗಳ ಪಾವತಿಯನ್ನು ಪೂರ್ಣಗೊಳಿಸಬೇಕು ಮತ್ತು ಇಲ್ಲಿಯವರೆಗೆ ಬಾಕಿ ಉಳಿದಿರುವ ಸ್ಟೈಫಂಡ್‌ಗಳನ್ನು ಸಂಪೂರ್ಣವಾಗಿ ಪಾವತಿಸಬೇಕು ಎಂದು ಮೈಸೂರು ಆಸ್ಪತ್ರೆಯ ನಿವಾಸಿ ವೈದ್ಯರ ಸಂಘವು ಜಿಲ್ಲಾಧಿಕಾರಿಗಳಿಗೆ ತಮ್ಮ ಪತ್ರದಲ್ಲಿ ಒತ್ತಾಯಿಸಿತು. ಕಳೆದ ಎರಡು ತಿಂಗಳಿನಿಂದ ವೇತನವನ್ನು ಪಾವತಿಸದ ಹಿರಿಯ ನಿವಾಸಿಗಳಿಗೆ 2021ರ ಬ್ಯಾಚ್‌ಗೆ ಎಸ್‌ಆರ್-ಗ್ರೇಡ್‌ಗೆ ಸಮಾನವಾಗಿ ಪಾವತಿಸಬೇಕು. ದ್ವಿತೀಯ ವರ್ಷದ ಪಿಜಿ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಿಗೆ ನೀಡಬೇಕಿರುವ 5,000 ಸ್ಟೈಫಂಡ್ ಪಾವತಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ್ಯಾಂತ ಹೋರಾಟ ನಡಸಲಾಗುವುದು ಎಂದು ಹೇಳಿದರು.
Vartajaala
0 Comments