ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಲೇಔಟ್ ನಲ್ಲಿ ಶಂಕರ್ ನಾಗ್ ಆಟೋ ಚಾಲಕರ ಸಂಘ ತಮ್ಮ ದೈನಂದಿನ ಸಂಪಾದನೆ ಒಂದು ಭಾಗವನ್ನುಉಳಿಕೆ ಮೂಲಕ ಸುಮಾರು ನಲವತ್ತು ಲಕ್ಷ ರೂಪಾಯಿ ಉಳಿತಾಯ ಮಾಡಿರುವ ಈ ಆಟೋ ಚಾಲಕರ ಸಂಘ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರಶಂಸೆ ವ್ಯಕ್ತಪಡಿಸಿದರು.
ನಂದಿನ ಲೇಔಟ್ ನಲ್ಲಿರುವ ದಿವಂಗತ ಶಂಕರನಾಗ್ ಆಟೋ ಚಾಲಕರ ಸಂಘದಿಂದ ಇಂದು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ಶ್ರಮಿಕ ವರ್ಗವಾದ ಆಟೋಚಾಲಕರು ಏನೇ ಕಷ್ಟ ವಿದ್ದರೂ ಕನ್ನಡದ ಅಭಿಮಾನ ಮತ್ತು ಕನ್ನಡದ ಖ್ಯಾತ ನಟರ ಸ್ಮರಣೋತ್ಸವವನ್ನು ತಪ್ಪದೇ ಮಾಡುತ್ತಿರುವುದು ಶ್ಲಾಘನೀಯ. ಇದರೊಂದಿಗೆ ಸಂಘ ರಚನೆಮಾಡಿಕೊಂಡು 40 ಲಕ್ಷ ರೂಪಾಯಿ ಉಳಿಸಿರುವುದು ಇಡೀ ರಾಜ್ಯಕ್ಕೆ ಮಾದರಿಯಾದ ಕೆಲಸ. ಈ ಕೆಲಸವನ್ನು ಇತರೆ ಆಟೋ ಚಾಲಕರ ಸಂಘಗಳು ಮಾಡುವಂತೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಇದರೊಂದಿಗೆ ನಮ್ಮ ಶಾಸಕರು ಸಹಾಯ ಮಾಡುತ್ತಾರೆ ಎನ್ನುವ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಕೆ ವಿ ರಾಜೇಂದ್ರಕುಮಾರ್ ಮಂಡಲ ವೈದ್ಯರಾದ ಭರತ್ ಭೂಷಣ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಗರಾಜ್, ಸುರಭಿ ನಾಗರಾಜ್, ರೈಲ್ವೇ ನಾರಾಯಣ ಸೇರಿದಂತೆ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಅನ್ನದಾನ ಕಾರ್ಯಕ್ರಮದಲ್ಲಿ ಸಚಿವ ಕೆ.ಗೋಪಾಲಯ್ಯ ನವರು ಪಾಲ್ಗೊಂಡರು.
0 Comments