Ticker

6/recent/ticker-posts

Ad Code

Responsive Advertisement

ಡಾ. ಕೋಟೇಶ್ ಅವರಿಗೆ ಶ್ರದ್ಧಾಂಜಲಿ ಸಭೆ**


 ಹಿರಿಯ ಪತ್ರಕರ್ತ ಡಾ.ಕೊಟೇಶ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು KERA ಸಂಘಟನೆಯ ಮುಖ್ಯಸ್ಥರು ಹಾಗೂ ಕಾರ್ಯ ಕಾರಿ ಸಮಿತಿಯ ಸದಸ್ಯರುಗಳ ಸಮ್ಮುಖದಲ್ಲಿ ಮೌನಾಚರಣೆ ಸಲ್ಲಿಸುವ ಮುಖಾಂತರ ನೆರವೇರಿಸಲಾಯಿತು.

ಡಾ. ಕೋಟೇಶ್ ಅವರು ದಿನಾಂಕ. 2/11/21  ನಿಧನರಾಗಿದ್ದು, ಇಂದು ಹತ್ತನೇ ದಿನದ ಶ್ರದ್ಧಾಂಜಲಿ ಹಾಗೂ ಸಂತಾಪ ಸಭೆ  KERA ಮುಖ್ಯ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಬೆಂಗಳೂರು ನಗರ KERA ಸಂಘಟನೆಯ ಅಧಕ್ಷರಾದ ಡಾ. ಶ್ರೀನಿವಾಸ ಅವರು ಮಾತನಾಡುತ್ತ ಡಾ. ಕೊಟೇಶ ರವರ ಸಾಧನೆಗಳನ್ನು, ವ್ಯಕ್ತಿತ್ವವನ್ನು ಅವರು ನಡೆದು ಬಂದ ದಾರಿಯನ್ನು ವಿವರಿಸುತ್ತಾ ಪತ್ರಿಕಾ ರಂಗದಲ್ಲಿ ಅವರು ಗಳಿಸಿದ ಕೀರ್ತಿ ಮಾದ್ಯಮ ಮಿತ್ರರಿಗೆ ಒಂದು ಮಾದರಿ ಪಾಠ. ನಮ್ಮ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿಧನ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟ ಎಂದೂ ಸಂತಾಪ ವ್ಯಕ್ತಪಡಿಸಿದರು.

 ಹಿರಿಯ ಪತ್ರಕರ್ತ ಜಗಳೂರು ಲಕ್ಷ್ಮಣ ರಾವ್  ಮಾತನಾಡುತ್ತಾ, ಡಾ. ಕೊಟೇಶ ನಿಧನವು ತಮ್ಮ ಮನಸ್ಸಿಗೆ ತುಂಬಾ ನೋವನ್ನುಂಟುಮಾಡಿದೆ ಪುನರ್ ಜನ್ಮ ಇದೆಯೋ ಇಲ್ಲವೋ ಯಾರಿಗೂ ಗೊತ್ತಿರುವುದಿಲ್ಲ ಆದರೆ ಡಾ. ಕೊಟೇಶರವರಂತಹ ಮಿತ್ರರೂ ಮತ್ತೆ ಹುಟ್ಟಿಬರಲಿ ಎಂದೂ ತಿಳಿಸಿದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದರು.



 ಕೊಟೇಶರವರು ಡೆಕ್ಕನ್ ಹೆರಾಲ್ಡ್ ಸಂಸ್ಥೆಯಲ್ಲಿ  ಪ್ರಮುಖ  ವರದಿಗಾರರಾಗಿ ಕರ್ನಾಟಕದಲ್ಲಿ ಹಾಗೂ ದೇಶ ವಿದೇಶಗಳಲ್ಲಿಯೂ ಸೇವೆ ಸಲ್ಲಿಸಿರುತ್ತಾರೆ.

KERA ಸಂಘಟನೆಯ ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ  ಡಾ. ಶ್ರೀನಿವಾಸ್,  ಉಪಾಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಜಗಳೂರು ಲಕ್ಷ್ಮಣ ರಾವ್, ಸಿದ್ದರಾಮ ಜೇರಟಗಿ, (ಖಜಾಂಚಿ) ಈ.ಎಸ್. ವಿಶ್ವನಾಥ್ (ಜಂಟಿ ಕಾರ್ಯದರ್ಶಿ)  ವಿ. ಕೃಷ್ಣ ಮೂರ್ತಿ, (ಜಂಟಿ ಕಾರ್ಯದರ್ಶಿ) ಕಾರ್ಯಕಾರಿ ಸಮಿತಿ ಸದಸ್ಯರಾದ ಸುಕುಮಾರ, ಶ್ರೀಮತಿ ಪೂರ್ಣಿಮಾ,  ಬೆಂಗಳೂರು ಉತ್ತರ ಘಟಕದ ಡಾ.ರಮೇಶ ಶೆಟ್ಟಿ, ಅಶೊಕ್ ಗೌಡ ಪಾಟೇಲ, ಅರ್.ಶೇಷಾದ್ರಿ ರೆಡ್ಡಿ ರವರು ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement