Ticker

6/recent/ticker-posts

Ad Code

Responsive Advertisement

KASAPA ELECTIONS : ಕ.ಸಾ.ಪ.ಚುನಾವಣೆ: ಸಿ.ಕೆ.ರಾಮೇಗೌಡ ಎಂ.ಪ್ರಕಾಶಮೂರ್ತಿ ಬಿರುಸಿನ ಪ್ರಚಾರ

ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಕೆ.ರಾಮೇಗೌಡರಿಗೆ ಮತ್ತು ಬೆಂಗಳೂರು ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂ.ಪ್ರಕಾಶಮೂರ್ತಿರವರಿಗೆ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘ ಮತ್ತು ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಬೆಂಬಲ



ವುಡ್ ಲ್ಯಾಂಡ್ಸ್ ಹೋಟೆಲು ಸಭಾಂಗಣದಲ್ಲಿ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ರವರ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಂಗೊಳ್ಳಿ ಕೃಷ್ಣಮೂರ್ತಿರವರ  ನೇತೃತ್ವದಲ್ಲಿ ಕ.ಸಾ.ಪ.ಚುನಾವಣೆ ನಿಂತಿರುವ ರಾಜ್ಯ ಕ.ಸಾ.ಪ ಅಭ್ಯರ್ಥಿ ಸಿ.ಕೆ.ರಾಮೇಗೌಡರಿಗೆ ಮತ್ತು ನಗರ ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂ.ಪ್ರಕಾಶಮೂರ್ತಿರವರಿಗೆ ಬೆಂಬಲಿಸಿ ಪೂರ್ವಬಾವಿ ಸಭೆ ಆಯೋಜಿಸಲಾಗಿತ್ತು .


ಗೌರವಾಧ್ಯಕ್ಷರಾದ ಹೆಚ್.ವಿ.ಅಶ್ವಥ್ ರವರು , ಕನ್ನಡ ಪರ ಹೋರಾಟಗಾರಾದ ನಲ್ಲಪ್ಪ ,ಸುಂದರ್ ರವರು ಮತ್ತು ಸಾವಿರಾರು ಬಿ.ಬಿ.ಎಂ.ಪಿ.ಅಧಿಕಾರಿ ,ನೌಕರರು ಪಾಲ್ಗೊಂಡಿದ್ದರು.

ಅಧ್ಯಕ್ಷರಾದ ಅಮೃತ್ ರಾಜ್ ಮತ್ತು ಪಾಲಿಕೆ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಂಗೊಳ್ಳಿ ಕೃಷ್ಣಮೂರ್ತಿರವರ ಸರ್ವಾನುಮತ ಬೆಂಬಲ ನೀಡಿರುವ ಪತ್ರವನ್ನು ಅಭ್ಯರ್ಥಿಗಳಾದ ಸಿ.ಕೆ.ರಾಮೇಗೌಡರಿಗೆ ಮತ್ತು ಎಂ.ಪ್ರಕಾಶಮೂರ್ತಿರವರಿಗೆ ನೀಡಿದರು


ಅಧ್ಯಕ್ಷರಾದ ಅಮೃತ್ ರಾಜ್ ರವರು ಮಾತನಾಡಿ ಬಿ.ಬಿ.ಎಂ.ಪಿ.ಯಲ್ಲಿ 5000ಕ್ಕೂ ಹೆಚ್ಚು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಸದಸ್ಯತ್ವ ಪಡೆದಿದ್ದಾರೆ. ಕನ್ನಡ ಭಾಷೆಗೆ ಪ್ರಥಮ ಆದ್ಯತೆಯನ್ನು ಬಿ.ಬಿ.ಎಂ.ಪಿ.ನೀಡಿದೆ.ಕ.ಸಾ.ಪ. ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿ ಆಯ್ಕೆಯಾಗಬೇಕು ಎಂದು ನಮ್ಮ ಸಂಘದ ತೀರ್ಮಾನವಾಗಿದೆ .ಕನ್ನಡ ಪರ ಹೋರಾಟಗಾರರಾದ ಮತ್ತು ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ವಾಗುವುದು ಎಂಬ ಮಾತಂತೆ ಸಿ.ಕೆ.ರಾಮೇಗೌಡರು ಮತ್ತು ಎಂ.ಪ್ರಕಾಶಮೂರ್ತಿರವರು ನಿಸ್ವಾರ್ಥವಾಗಿ ತಾಯಿ ಭುವನೇಶ್ವರಿ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ನಾಡು ,ನುಡಿ ಮತ್ತು ಜಲ ಸಮಸ್ಯೆ ಬಂದರೆ ಯಾವುದೇ ಕಾರಣಕ್ಕೂ ಹೆದರದೇ, ಆಳುಕದೇ ಹೋರಾಟಕ್ಕೆ ಇಳಿಯುತ್ತಾರೆ.

ಸಿ.ಕೆ.ರಾಮೇಗೌಡರು ಮತ್ತು ಎಂ.ಪ್ರಕಾಶಮೂರ್ತಿ ನಿತ್ಯ ಕನ್ನಡ ತಾಯಿಯ ಸೇವೆ ಅಪೂರ್ವ ಹೋರಾಟ ರತ್ನಗಳು.

ಜಾತ್ಯತೀತ ,ಎಲ್ಲ ಧರ್ಮದವರ ಸಮಾನವಾಗಿ ಕಾಣುವ ಮತ್ತು ಯುವ ಸಾಹಿತಿಗಳಿಗೆ ಪ್ರೋತ್ಸಹಿಸು ಕನ್ನಡ ಭಾಷೆ ಬೆಳವಣಿಗೆ ಸೇವೆ ಸಲ್ಲಿಸುತ್ತಿರುವ ಇವರಿಗೆ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸಂಪೂರ್ಣ ಬೆಂಬಲ ನೀಡುತಿದ್ದೇವೆ.ಕ.ಸಾ.ಪ.ಚುನಾವಣೆಯಲ್ಲಿ ಗೆದ್ದು  ಕನ್ನಡ ಭಾಷೆ ಉಳಿಸಿ ,ಬೆಳಸಲು ಮತ್ತು ತಾಯಿ ಭುವನೇಶ್ವರಿಯ  ಸೇವೆ ಮಾಡುವಂತಾಗಲಿ ಎಂಬ ಆಶಯ ಎಂದು ಹೇಳಿದರು.

ಕ.ಸಾ.ಪ.ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಕೆ.ರಾಮೇಗೌಡರು ಮಾತನಾಡಿ ಮೈಸೂರು ಮಹಾ ರಾಜರಾದ ನಾಲ್ವಡಿ ಕೃಷ್ಣರಾಜ್ ಒಡೆಯರ್ ರವರು ಸ್ಥಾಪನೆ ಮಾಡಿದರು .ಕನ್ನಡ ಭಾಷೆ ,ನಾಡಿಗೆ ಅಪೂರ್ವ ಕೊಡುಗೆ ನೀಡಿದ್ದಾರೆ .ಮಹಿಳೆಯರಿಗೆ ಮತ್ತು ಎಲ್ಲ ಸಮಾಜ ಮತ್ತು ಧರ್ಮದವರಿಗೆ ಸಮಾನ ಅವಕಾಶ ನೀಡಿದ ನಾಲ್ವಡಿ ಕೃಷ್ಣರಾಜ್ ಒಡೆಯರ್ ರವರ ಆದರ್ಶ ಮಾರ್ಗದರ್ಶನ ಪಾಲಿಸುತ್ತಾ ನಾನು ಕ.ಸಾ.ಪ.ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ .

ಸಂವಿಧಾನ ಆನ್ವಯ ರಾಜ್ಯದಲ್ಲಿ 15ವರ್ಷದಿಂದ ವಾಸಿಸುವ ಎಲ್ಲರು ಕನ್ನಡಿಗರು .ಅವರ ಮಾತೃ ಭಾಷೆ ಯಾವುದೇ ಇರಲಿ  ಕನ್ನಡ ಭಾಷೆ ಕಲಿಯಬೇಕು ಮತ್ತು ಕನ್ನಡದಲ್ಲಿ ವ್ಯವಹಾರಿಸಬೇಕು .

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಎಂದರೆ ಕನ್ನಡ ತಾಯಿಯ ಸೇವೆ ಮಾಡುವ ಕೆಲಸ .

ಎಂ.ಪ್ರಕಾಶಮೂರ್ತಿರವರು ಮಾತನಾಡಿ ಕನ್ನಡ ಎಂದರೆ ಬನ್ನಿ ,ನಮ್ಮ ಸಂಗಡ .

ಕನ್ನಡ ಭಾಷೆಯ ಬಗ್ಗೆ ಅಭಿಮಾನ ,ಪ್ರೀತಿ ಇಟ್ಟಿರುವ ಎಲ್ಲರ ಸೇವೆ ಮಾಡುವುದು ನಮ್ಮ ಕರ್ತವ್ಯ .

ನಾವು ಹುಟ್ಟಿರುವ ನಾಡು ,ಮಾತೃ ಭಾಷೆ ಬಗ್ಗೆ ಅಭಿಮಾನವಿರಬೇಕು ಅನ್ಯ ಭಾಷಿಗರಿಗೆ ಕನ್ನಡ ಕಲಿಸುವ ಕಾರ್ಯವಾಗಬೇಕು .

ಉದ್ಯೋಗದಲ್ಲಿ ಕನ್ನಡಿಗರಿಗೆ ಅವಕಾಶ ಸಿಗಬೇಕು .

ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ.ಚುನಾವಣೆಯಲ್ಲಿ ಸ್ಪರ್ಥಿಸಿರುವ ನನಗೆ ಹೆಚ್ಚಿನ ಮತ ನೀಡಿ ನನ್ನ ಮುಂದಿನ ಗುರಿ .

ಕನ್ನಡ ಸಾಹಿತ್ಯ ಪರಿಷತ್ ಆನ್ನು ಹೊಸ ದಿಕ್ಕಿನತ್ತ ದೂರದೃಷ್ಟಿ ಚಿಂತನೆ ಮಾಡಲಾಗಿದೆ .ಕನ್ನಡಿಗರ ರಕ್ಷಣೆ ಮತ್ತು ಕನ್ನಡ ಭಾಷೆ ಬೆಳವಣಿಗೆ ಹಗಲಿರುಳು ಶ್ರಮ ವಹಿಸುತ್ತೇನೆ ಎಂದು ಹೇಳಿದರು.

VARTHAJALA, Bengaluru.

Post a Comment

0 Comments

Ad Code

Responsive Advertisement