Ticker

6/recent/ticker-posts

Ad Code

Responsive Advertisement

BREAKING NEWS : ರಾಜ್ಯದಲ್ಲಿ ಹೊಸ ತಳಿಯ ಕೊರೊನಾ ಪ್ರಕರಣ ಪತ್ತೆ: ಕಟ್ಟೆಚ್ಚರ ವಹಿಸಲು ಸೂಚನೆೆ: ರಾಜ್ಯಕ್ಕೆ ಬರುವವರಿಗೆ ಟೆಸ್ಟ್ ಕಡ್ಡಾಯ

ನವಂಬರ್ 26, ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ 6 ಮತ್ತು ಬೋಟ್ಸ್ವಾನಾದಲ್ಲಿ 3, ಹೊಸ ಕೊವಿಡ್19 ತಳಿಯ ಕೇಸ್‌ಗಳು ಪತ್ತೆ ಆಗಿವೆ. ಅದೇ ರೀತಿಯಾಗಿ ಹಾಂಗ್ ಕಾಂಗ್‌ನಲ್ಲಿ ಹೊಸ ತಳಿಯ ಪ್ರಕರಣವೊಂದು ಕಂಡುಬ0ದಿದೆ. 

ಕೊರೊನಾ ವೈರಸ್ನ ಬಿ.1.1.529 ಹೊಸ ತಳಿಯ ಪ್ರಕರಣಗಳು ವಿದೇಶಗಳಲ್ಲಿ ಕಂಡುಬ0ದಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಹೊಸ ತಳಿ ವೇಗವಾಗಿ ಹರಡಲಿದೆ ಎಂದು ತಜ್ಞರಿಂದ ಎಚ್ಚರಿಕೆ ಹಾಗೂ ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿ ಸೋಂಕು ತೀವ್ರತೆ ಬಗ್ಗೆ ಎಚ್ಚರಿಕೆ ಹಿನ್ನೆಲೆ ರಾಜ್ಯದಲ್ಲೂ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ಕೊಟ್ಟಿದೆ. ಹೊಸ ತಳಿಯ ಬಗ್ಗೆ ಕೇಂದ್ರದಿAದಲೂ ಕಟ್ಟೆಚ್ಚರ ನೀಡಲಾಗಿದೆ. ಬೋಟ್ಸ್ವಾನಾದಲ್ಲಿ 3, ದಕ್ಷಿಣ ಆಫ್ರಿಕಾದಲ್ಲಿ 6 ಹೊಸ ಕೊವಿಡ್19 ತಳಿಯ ಕೇಸ್‌ಗಳು ಪತ್ತೆ ಆಗಿವೆ. ಹಾಂಗ್ಕಾAಗ್‌ನಲ್ಲಿ ಹೊಸ ತಳಿಯ 1 ಕೇಸ್ ಕಂಡುಬ0ದಿದೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೂರು ದೇಶಗಳಿಂದ ಕರ್ನಾಟಕ ರಾಜ್ಯಕ್ಕೆ ಬರುವವರಿಗೆ ಟೆಸ್ಟ್ ಕಡ್ಡಾಯ ಮಾಡಲಾಗಿದೆ.

ಟೆಸ್ಟ್, ಸ್ಕ್ರೀನಿಂಗ್ ಹಾಗೂ ಟ್ರ‍್ಯಾಕಿಂಗ್ ಮಾಡುವಂತೆ ರಾಜ್ಯ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. 3 ದೇಶಗಳಿಂದ ಬಂದಿರುವವರನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡಿ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ವಿದೇಶಗಳಿಂದ ರಾಜ್ಯಕ್ಕೆ ಬಂದವರಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬAದರೆ ಸ್ಯಾಂಪಲ್ಸ್ ಸೀಕ್ವೆನ್ಸಿಂಗ್ ಮಾಡಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಹೊಸ ಕೊವಿಡ್ ರೂಪಾಂತರದ ಪ್ರಕರಣ ಪತ್ತೆಯಾಗಿಲ್ಲ. ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿರುವ ಹೊಸ ಕೊವಿಡ್-19 ರೂಪಾಂತರಿಯ ಯಾವುದೇ ಪ್ರಕರಣಗಳು ಭಾರತದಲ್ಲಿ ಇಲ್ಲಿಯವರೆಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ (ಎಎನ್‌ಐ) ಶುಕ್ರವಾರ ವರದಿ ಮಾಡಿದೆ ಎಂದು ತಿಳಿದುಬಂದಿದೆ. ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಬಿ.1.1.529 ಎಂದು ಗುರುತಿಸಲಾದ ಕೊರೊನಾವೈರಸ್ನ ಹೊಸ ರೂಪಾಂತರವನ್ನು ಪತ್ತೆಹಚ್ಚಿರುವುದಾಗಿ ಘೋಷಿಸಿದ ನಂತರ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳು ಅಂತರಾಷ್ಟ್ರೀಯ ಪ್ರಯಾಣಿಕರನ್ನು ಕಠಿಣವಾಗಿ ಪರೀಕ್ಷಿಸಲು ಮತ್ತು ಪರೀಕ್ಷಿಸಲು ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ನೀಡಿತು.

ಹೊಸ ರೂಪಾಂತರದಲ್ಲಿನ ರೂಪಾಂತರಗಳ ವರದಿಗಳು “ಗಂಭೀರವಾದ ಸಾರ್ವಜನಿಕ ಆರೋಗ್ಯ ಪರಿಣಾಮಗಳನ್ನು” ಹೊಂದಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. “ಈ ರೂಪಾಂತರವು ಗಣನೀಯವಾಗಿ ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಹೀಗಾಗಿ ಇತ್ತೀಚೆಗೆ ಸಡಿಲಿಸಲಾದ ವೀಸಾ ನಿರ್ಬಂಧಗಳು ಮತ್ತು ಅಂತರರಾಷ್ಟ್ರೀಯ ಪ್ರಯಾಣವನ್ನು ತೆರೆಯುವ ದೃಷ್ಟಿಯಿಂದ ದೇಶಕ್ಕೆ ಗಂಭೀರವಾದ ಸಾರ್ವಜನಿಕ ಆರೋಗ್ಯ ಪರಿಣಾಮಗಳನ್ನು ಹೊಂದಿದೆ ” ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement