ಕನ್ನಡ ಭಾಷೆ ಮಾತೃ ಸಮಾನವಾಗಿದೆ ,ಮಕ್ಕಳು ತಾಯಿಗೆ ಸೇವೆ ಸಲ್ಲಿಸುವಂತೆ ಮಾತೃ ಭಾಷೆಗೂ ಸೇವೆ ಸಲ್ಲಿಸಿದರೆ ಜೀವನ ಸಾರ್ಥಕವಾಗುತ್ತದೆ-ಜಂಟಿ ಪೋಲಿಸ್ ಆಯುಕ್ತರಾದ ರವಿಕಾಂತೇಗೌಡ
ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಶಾರದಾ ಪ್ರತಿಷ್ಟಾನ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಷ್ಟಾನದ ಚೊಚ್ಚಲ ಕೃತಿ ಬಿಡುಗಡೆ ಸಮಾರಂಭ .
ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಬೆಂಗಳೂರುನಗರ ಪೋಲಿಸ್ ಜಂಟಿ ಆಯುಕ್ತರಾದ ರವಿಕಾಂತೇಗೌಡರು ,ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಪ್ರಕಾಶಮೂರ್ತಿ ,ಹಿರಿಯ ರಂಗಕರ್ಮಿ ಗುಂಡಣ್ಣ ,ಶಾರದಾ ಪ್ರತಿಷ್ಠಾನ ಅಧ್ಯಕ್ಷರು ,ಪ್ರಕಾಶಕರಾದ ಮಾಗಡಿ ಗಿರೀಶ್ ,ಸಾಹಿತಿಗಳಾದ ರಾಜಶೇಖರ್ ಮಠಪತಿ ,ರಂಗಭೂಮಿಯ ಡಾ||ಬೇಲೂರು ರಘುನಂದನ್ ,ಶ್ರೀಮತಿ ಸುರಭಿರವರು ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿ ,ನಂತರ ಪದ ಪದ ಕಟ್ಟುಪದ ,ಕಟ್ಟುಪದಗಳ ಪುಸ್ತಕ ಲೋಕರ್ಪಣೆ ಮಾಡಿದರು.
ಜಂಟಿ ಪೋಲಿಸ್ ಆಯುಕ್ತರಾದ ರವಿಕಾಂತೇಗೌಡರು ಮಾತನಾಡಿ ಕನ್ನಡ ಭಾಷೆ ಮಾತೃ ಸಮಾನವಾಗಿದೆ .ಮಕ್ಕಳು ತಾಯಿಗೆ ಸೇವೆ ಸಲ್ಲಿಸುವಂತೆ ಮಾತೃ ಭಾಷೆಗೂ ಸೇವೆ ಸಲ್ಲಿಸಿದರೆ ಜೀವನ ಸಾರ್ಥಕವಾಗುತ್ತದೆ.
ಕಲೆ ಸಾಹಿತಿ ಲೋಕಕ್ಕೆ ಹಲವಾರು ಸಂಘ ,ಸಂಸ್ಥೆಗಳು ಶ್ರಮಿಸುತ್ತಿದೆ. ಇಂದಿನ ದಿನಮಾನಗಳಲ್ಲಿ ಸಾಹಿತ್ಯ ,ಕಲೆ ಬಗ್ಗೆ ಆಸಕ್ತಿ ಕಡಿಮೆ ಇದೆ .ಕನ್ನಡ ಭಾಷೆ ಬೆಳಯಲು ಸಾಹಿತಿಗಳ ಕೊಡುಗೆ ಅಪಾರವಿದೆ .
ರವಿ ಕಾಣದ್ದು ಕವಿ ಕಂಡ ಎಂಬಂತೆ ಸಮಾಜದ ಬದಲಾವಣೆಗೆ ಸಾಹಿತ್ಯ ಮಹತ್ವ ಪಾತ್ರವಹಿಸಿದೆ.
ಮಹನೀಯರುಗಳಾದ ಅಣ್ಣ ಬಸವಣ್ಣ ,ಅಲ್ಲಮಪ್ರಭು ವಚನಗಳು ಜನರ ಜೀವನಕ್ಕೆ ಸರ್ವಕಾಲಿಕ ಸತ್ಯವಾಗಿದೆ.
12ಶತಮಾನದ ವಚನಗಳು ನಾಡಿಗೆ ಡೊಡ್ಡ ಕಾಣಿಕೆ ನೀಡಿದೆ ಎಲ್ಲರು ವಚನದ ಮಾರ್ಗದಲ್ಲಿ ಸಾಗಿದರೆ ಜೀವನ ಸಾರ್ಥಕವಾಗುವುದು ಎಂದು ಹೇಳಿದರು.
ಅಧ್ಯಕ್ಷರಾದ ಮಾಗಡಿ ಗಿರೀಶ್ ರವರು ಮಾತನಾಡಿ ಕನ್ನಡ ಭಾಷೆ ಉಳಿಸಿ ,ಬೆಳಸಲು ,ನಾಡಿನ ಕಲೆ ,ಸಾಹಿತ್ಯ ,ಸಂಸ್ಕೃತಿ ಉಳಿಸಿ ಬೆಳಸಲು ಶಾರದಾ ಪ್ರತಿಷ್ಠಾನ ಉದ್ದೇಶವಾಗಿದೆ.ಕನ್ನಡ ಕಟ್ಟುಪದಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ ಅದನ್ನ ಮುಂದಿನ ಯುವ ಪೀಳಿಗೆ ಉಪಯೋಗವಾಗಲಿ ,ಅರಿತುಕೊಳ್ಳಲಿ ಮತ್ತು ಕನ್ನಡ ಸಾಹಿತ್ಯ ,ಸಂಸ್ಕೃತಿ ಇತಿಹಾಸ ಎಲ್ಲರಿಗೂ ತಿಳಿಯಬೇಕು ನಶಿಸಿ ಹೋಗಬಾರದು ಎಂದು ಹೇಳಿದರು.
0 Comments