ನವೆಂಬರ್ 26, ಬೆಂಗಳೂರು: ರಾಜ್ಯದಲ್ಲಿ ಇಂದು ಕರೋನ ಏರಿಕೆಯಾಗಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರಿನಲ್ಲಿ ಇಂದು ಒಬ್ಬರು ಕರೋನದಿಂದ ಮೃತಪಟ್ಟಿರುವ ಬಗ್ಗೆ ವರದಿ ಸಿಕ್ಕಿದೆ. ರಾಜ್ಯದಲ್ಲಿ ಒಟ್ಟು 6 ಜನರು ಕರೋನದಿಂದ ಮೃತ ಪಟ್ಟಿರುವ ಬಗ್ಗೆ ವರದಿ ಸಿಕ್ಕಿದೆ. ಈ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 220 ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಇಂದು 402 ಜನರಿಗೆ ಕರೋನ ಪಾಸಿಟಿವ್ ಇದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6611 ಎಂದು ತಿಳಿದುಬಂದಿದೆ.
0 Comments