Ticker

6/recent/ticker-posts

Ad Code

Responsive Advertisement

ಸಾಮನ್ಯ ಕಾರ್ಯಕರ್ತನಿಗೂ ಅಧಿಕಾರ ಕೊಡುವ ಏಕೈಕ ಪಕ್ಷ ಬಿ.ಜೆ.ಪಿ.

ಮಧುಗಿರಿ : ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ  ಸಾಮನ್ಯ ಕಾರ್ಯಕರ್ತನಿಗೂ ಅಧಿಕಾರ ಕೊಡುವ ಏಕೈಕ ಪಕ್ಷ ಎಂದರೆ ಅದು ಬಿ.ಜೆ.ಪಿ.ಪಕ್ಷ ಮಾತ್ರ ಎಂದು ವಿಧಾನಪರಿಷತ್ ಸದಸ್ಯ ಎಂ.ಚಿದಾನಂದಗೌಡ ತಿಳಿಸಿದರು.


ಪಟ್ಟಣದ ಕನ್ನಡ ಭವನದಲ್ಲಿ ಬಿ.ಜೆ.ಪಿ.ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ ಅವರು, ಈ ಭಾರಿ ಬಿಜೆಪಿ ಪಕ್ಷದ ಅಭ್ಯರ್ಥಿ ಲೋಕೇಶ್ ಗೌಡ ಅವರು ಈ ವಿಧಾನಪರಿಷತ್ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಲು ಕಾರ್ಯಕರ್ತರು ಪಣ ತೊಡಬೇಕು. ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಜನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ  ನಮ್ಮ ಪಕ್ಷದ 5 ಜನ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಇಬ್ಬರು ಸಂಸದರು, ಇಬ್ಬರು ಮಂತ್ರಿಗಳು ಹಾಗೂ ಒಬ್ಬರು ಕೇಂದ್ರ ಮಂತ್ರಿಗಳಿರುವುದು ನಮ್ಮ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ. ಮಧುಗಿರಿ ಕೊರಟಗೆರೆ ಹಾಗೂ ಪಾವಗಡ ತಾಲೂಕುಗಳಲ್ಲಿ ನಮ್ಮ ಸಂಖ್ಯಾ ಬಲಕ್ಕೆ ಕೊರತೆಯಾದರೂ ಕಾರ್ಯಕರ್ತರು ಚುನಾಯಿತ ಪ್ರತಿನಿಧಿಗಳ ಮನವೊಲಿಸಿ ನಮ್ಮ ಲೋಕೇಶ್ ಗೌಡರ ಪರವಾಗಿ ಮತಯಾಚಿಸಬೇಕೆಂದು ಕರೆ ನೀಡಿದರು.

ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಲೋಕೇಶ್ ಗೌಡ ಮಾತನಾಡಿ, ಮಧುಗಿರಿ ಕ್ಷೇತ್ರವು ಅಭಿವೃದ್ದಿಯಲ್ಲಿ ತೀರಾ ಹಿಂದುಳಿದಿದ್ದು, ಈ ಭಾರಿ ಮತದಾರರು ಅಭಿವೃದ್ದಿ ಪರ ಹೆಚ್ಚಿನ ಒಲವು ತೋರಿದ್ದಾರೆ. ಮಲ್ಲಸಂದ್ರದಲ್ಲಿ ಬಿಬಿಎಂಪಿ ಸದಸ್ಯನಾಗಿ ನಾನು ಮಾಡಿರುವ ಉತ್ತಮ ಅಭಿವೃದ್ದಿ ಕೆಲಸಗಳನ್ನು ಗುರುತಿಸಿ ತುಮಕೂರು ಜಿಲ್ಲೆಯನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ನನ್ನನ್ನು ಪರಿಷತ್ ಚುನಾವಣ ಕಣಕ್ಕೆ ಇಳಿಸಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೀಡಿರುವ ಜನಪರ ಅಭಿವೃದ್ದಿ ಕಾರ್ಯಗಳನ್ನು ನೋಡಿ ಗ್ರಾ.ಪಂ, ನಗರಸಭೆ ಮತ್ತು ಪುರಸಭೆ ಪ್ರತಿನಿಧಿಗಳು ನನಗೆ ಪ್ರಥಮ ಪ್ರಾಶಸ್ತ್ಯದ ಮತ ಚಲಾಯಿಸುತ್ತಾರೆ ಎಂಬ ಆಶಾಭಾವನೆ ಹೊಂದಿದ್ದೇನೆ ಎಂದು ತಿಳಿಸಿದರು. 

ಮಧುಗಿರಿ ಮಂಡಲ ಅಧ್ಯಕ್ಷರಾದ ಪಿ.ಎಲ್.ನರಸಿಂಹಮೂರ್ತಿ ಮಾತನಾಡಿ ವಿರೋಧ ಪಕ್ಷದವರು ಬಿಜೆಪಿ ಪಕ್ಷ ಸ್ಥಳೀಯರಿಗೆ ಅವಕಾಶ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರುಗಳು ಯಾವ ಸ್ಥಳೀಯರು ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ನಮ್ಮ ಪಕ್ಷದ ಅಭ್ಯರ್ಥಿ ಈಗಾಗಲೇ ಕಾರ್ಯಕರ್ತರ ಹೃದಯದಲ್ಲಿದ್ದು, ಅಧಿಕ ಬಹುಮತದಿಂದ ಈ ಚುನಾವಣೆಯಲ್ಲಿ ಜಯಗಳಿಸಲಿದ್ದಾರೆ ಎಂದು ತಿಳಿಸಿದರು.

ತೆಂಗು ಮತ್ತು ನಾರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷ ಪ್ರಭಾಕರ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ನಾಗರಾಜಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿ ಪಾವಗಡ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ನವೀನ್ ಸೀತಾರಾಂ ನಾಯ್ಕ, ಕೊರಟಗೆರೆ ಮಂಡಲದ ಅಧ್ಯಕ್ಷ ಪವನ್, ತಾಲ್ಲೂಕು ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಂ, ನಾಗೇಂದ್ರ, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಕಾರ್ತಿಕ್ ಆರಾಧ್ಯ, ಪ್ರಧಾನ ಕಾರ್ಯದರ್ಶಿ ತೇಜಸ್ ಗೌಡ, ಗುರು ಪ್ರಸಾದ್, ಉಪಾಧ್ಯಕ್ಷ ಹೆಚ್.ಜಿ.ಪ್ರಸನ್ನ, ಕಾರ್ಯದರ್ಶಿ ರವಿಕಿರಣ್ ಮುಖಂಡರಾದ ಲಕ್ಕಣ್ಣ, ನವೀನ್ ಹಾಗೂ ಮುಂತಾದವರು ಇದ್ದರು.

Post a Comment

0 Comments

Ad Code

Responsive Advertisement