ಆರೋಪಿಯು ನೀಡಿದ ಮಾಹಿತಿ ಮೇರೆಗೆ ಸುಮಾರು 25 ಲಕ್ಷ ರೂ. ಬೆಲೆ ಬಾಳುವ 455 ಗ್ರಾಂ ತೂಕದ ಚಿನ್ನಾಭರಣಗಳನ್ನು ಮತ್ತು ನಗದು ಹಣ ರೂ.12,423/- ಅನ್ನು ವಶಪಡಿಸಿಕೊಳ್ಳುವಲ್ಲಿ ರಾಜಾಜಿನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ. ಆರೋಪಿ ಆಟೋ ಡ್ರೆವರ್ ಕೆಲಸ ಮಾಡಿಕೊಂಡಿದ್ದು, ಈತನು ನಂದಿನಿಲೇಔಟ್ ಪೊಲೀಸ್ ಠಾಣೆಯ ಕನ್ನಾ ಕಳವು ಪ್ರಕರಣದ ಹಳೆ ಎಂ.ಓ. ಆಸಾಮಿಯಾಗಿದ್ದು, ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ 2018 ನೇ ಸಾಲಿನಲ್ಲಿ 2 ಹಗಲು ಮತ್ತು ರಾತ್ರಿ ಕನ್ನಾ ಕಳವು ಪ್ರಕರಣದಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿರುತ್ತಾನೆ. ಆರೋಪಿಯು ಆಟೋರಿಕ್ಷಾವನ್ನು ಓಡಿಸುವಾಗ ಬೀಗ ಹಾಕಿರುವ ಅಂಗಡಿ ಮನೆಗಳನ್ನು ಗುರುತಿಸಿಕೊಂಡು ನಂತರ ಬಂದು ಕಳ್ಳತನ ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಯ ಬಂಧನದಿAದ ರಾಜಾಜಿನಗರ ಪೊಲೀಸ್ ಠಾಣೆಯ 2-ಹಗಲು ಮತ್ತು ರಾತ್ರಿ ಕನ್ನಾ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಪ್ರಕರಣದಲ್ಲಿ ಕೆ.ಎಸ್. ವೆಂಕಟೇಶ್ ನಾಯ್ಡು, ಎಸಿಪಿ, ಮಲ್ಲೇಶ್ವರಂ ಉಪ ವಿಭಾಗದ ರವರ ಮಾರ್ಗದರ್ಶನದಲ್ಲಿ ಆರ್.ಪಿ. ಅಶೋಕ್, ಪೊಲೀಸ್ ಇನ್ಸ್ಪೆಕ್ಟರ್, ರಾಜಾಜಿನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಪ್ರದೀಪ್‌ಕುಮಾರ್ ಸಿ., ಅನಿಲ್‌ಕುಮಾರ್ ಟಿ., ಶಿವಮೂರ್ತಿ ಯು., ಮತ್ತು ಎಎಸ್‌ಐಗಳಾದ ಜಗದೀಶ್, ಶಂಕರ್ ಜಿ.ಎಲ್. ಹಾಗೂ ಸಿಬ್ಬಂದಿಗಳಾದ ನಾಯಕರ ಜಿ.ಗಿರೀಶ್, ಚಂದ್ರಶೇಖರ್, ಗೌತಮ್‌ರೂಗಿ, ಬೀರಪ್ಪ, ಗೋಪಿನಾಥ್ ಬಿ, ವಿಶ್ವನಾಥ್ ಪಂಚಾಳ, ವಿಠ್ಠಲ್ ನಾಯಕರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
0 Comments