ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದಂತೆ. ಗ್ರಾಮದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯ್ತಿ ಇದ್ದು, ಇದರಲ್ಲಿ ಜನರಿಂದ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಆಳ್ವಿಕೆ ನಡೆಸುತ್ತಾರೆ. ಇಲ್ಲಿಯೂ ಭ್ರಷ್ಟತೆಯ ಸೋಂಕು ತಗಲು ತುಂಬಾ ವರ್ಷಗಳಾದರೂ, ಕೇವಲ ಅಧಿಕಾರಿಗಳು ಖಾತೆ, ಅದು, ಇದು ಅಂತಹ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿತ್ತುದ್ದನ್ನು ಕಂಡಿದ್ದೇವೆ.
ಆದರೆ ಬೆಂಗಳೂರು ನಗರಜಿಲ್ಲೆಯ ಯಲಹಂಕ ತಾಲ್ಲೂಕಿನ ಜಾಲಾ ಹೋಬಳಿಯ ಬಾಗಲೂರು ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜೆ.ಮುನೇಗೌಡ, ಎಂಬ ವ್ಯಕ್ತಿ, ಪಂಚಾಯ್ತಿಯ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಏನೂ ಮಾಡಿಲ್ಲವೇನೋ ಎಂಬAತೆ ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯಿಂದ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವ ಸ್ಥಾನ ಎರಡರಿಂದಲೂ ವಜಾಗೊಂಡಿದ್ದಾರೆ.
ಘಟನೆ ಹಿನ್ನೆಲೆ : ಈಗ್ಗೆ ಒಂದು ವರ್ಷದ ಕೆಳಗೆ, ಜಿಯೋ ಕಂಪನಿ ತನ್ನ ಮೊಬೈಲ್ ಟರ‍್ಗಳಿಗೆ ಕೇಬಲ್ ಅಳವಡಿಸಲು ಗ್ರಾಮ ಪಂಚಾಯ್ತಿಗಳಿಗೆ ಶುಲ್ಕ ಕಟ್ಟಿ `ನಿರಾಕ್ಷೇಪಣಾ ಪತ್ರ' ಪಡೆಯಬೇಕಾಗಿತ್ತು. ಅದರಂತೆ ಕಂಪನಿಯ ಗುತ್ತಿಗೆದಾರ ಆನಂದ್ ಎನ್ನುವವರು ಗ್ರಾಮ ಶುಲ್ಕದ ಹಣದ ಬಾಬ್ತು ಹನ್ನೆರಡು ಲಕ್ಷಗಳಿಗೆ ಪಂಚಾಯ್ತಿ ಹೆಸರಿಗೆ ಬ್ಯಾಂಕಿನ ಡಿಮ್ಯಾಂಡ್ ಡ್ರಾಫ್ಟ್ ತೆಗೆಸಿ ನೀಡಿದ್ದಾರೆ.
ಈ ಮುನೇಗೌಡ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹೆಸರಿನ್ಲಿ ಸಂಜಯನಗರದ ಶಾಖೆಯ ಬ್ಯಾಂಕೊAದರಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಈ ಕೇಬಲ್ ಕಂಪನಿಯವರು ನೀಡಿದ ಡಿ.ಡಿಯನ್ನು ಕ್ಯಾಷ್ ಮಾಡಿಸಿಕೊಂಡು ದುರ್ಬಳಕೆ ಮಾಡಿ ಕೊಂಡಿದ್ದಾನೆ. ಆಗ ಜಿಯೋ ಕಂಪನಿ ಗುತ್ತಿಗೆದಾರ ಆನಂದ್ ಬಾಗಲೂರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣೇ ಶ್ವರಿಯವರ ಬಳಿ ನಿರಾಕ್ಷೇಪಣಾ ಪತ್ರವನ್ನು ಕೇಬಲ್ ಅಳವಡಿಸಲು ಕೇಳಿದ್ದಾರೆ. ಪಂಚಾಯ್ತಿಗೆ ತೆರಿಗೆಯನ್ನೇ ಕಟ್ಟಿಲ್ಲ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹೇಳಿದ್ದಾರೆ. ಆಗ ಆಶ್ಚರ್ಯಚಕಿತನಾದ ಆನಂದ್ ತಾನು ತೆರಿಗೆ ಹಣದ ಡಿ.ಡಿ.ಯನ್ನು ತೆಗೆಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಜೆ.ಮುನೇಗೌಡರ ಕೈಗೆ ನೀಡಿರುವುದಾಗಿ ತಿಳಿಸಿದ್ದಾರೆ. ಈಗ ಶಾಖ್ ಆಗುವ ಸರದಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾದ ಅನ್ನ ಪೂರ್ಣೇಶ್ವರಿಯವರದ್ದು, ಅವರು ಈ ಬಗ್ಗೆ ಪೊಲೀಸ್‌ಠಾಣೆಯಲ್ಲಿ ದೂರು ಸಲ್ಲಿಸಿದಾಗ, ಗ್ರಾಮ ಪಂಚಾಯ್ತಿ ಹೆಸರಿನಲ್ಲಿ ಎರಡು ಮೂರು ಬಾರಿ ಒಟ್ಟು ಅರವತ್ತನಾಲ್ಕು ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ನಕಲಿ ಖಾತೆಯನ್ನು ಈ ಹಿಂದೆ ಬಾಗಲೂರಿನ ಗ್ರಾಮ ಪಂಚಾಯ್ತಿಯಲ್ಲಿ ಕರ ವಸೂಲಿಗಾರರಾಗಿದ್ದ ಮುನಿವೆಂಕಟರಮಣ ಎನ್ನುವವರ ಹೆಸರಿನಲ್ಲಿ ತೆರೆಯಲಾಗಿದೆ.
ಈ ಹಗರಣ ನಡೆದು ಒಂದು ವರ್ಷವಾದರೂ ಸಂಬAಧಿಸಿದ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನ ನೀಡದೆ ಸಾಕಷ್ಟು ತಾತ್ಸಾರ ತೋರಿದ್ದರು. ಇದಕ್ಕೆ ಕಾರಣ ಜೆ.ಮುನೇಗೌಡರ ಪ್ರಸಾದ ಎಲ್ಲರನ್ನೂ ತಲುಪಿತ್ತು. ಈ ಮುನೇಗೌಡ ಎಂತಹ ಚಾಣಾಕ್ಷ ಎಂದರೆ ಸ್ಥಳೀಯ ಬಾಗಲೂರು ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ರಾಮಮೂರ್ತಿ ಎಂಬ ವಂಚಕನಿಗೆ ಪ್ರಸಾದ ನೀಡಿ, ಈ ಹರಾಮಖೋರ ರಾಮಮೂರ್ತಿ ತಾನು ವರ್ಗಾವಣೆಯಾಗುವ ಕೊನೆಯ ದಿನದವರೆಗೂ, ಮುನೇಗೌಡನ ಆರೋಪದ ಮೇಲೆ ಚಾರ್ಜ್ಷೀಟ್ ಹಾಕಿರಲೇ ಇಲ್ಲ. ನಂತರ ಮುನೇಗೌಡ ಬಂಧಿತನಾಗಿ ನಾಲ್ಕೆöÊದು ದಿನ ಶ್ರೀಕೃಷ್ಣ ಜನ್ಮಸ್ಥಾನವನ್ನೂ ಕಂಡುಬAದಾಗಿತ್ತು. ಆಮೇಲೆ ಈತನ ಮೇಲಿನ ಆರೋಪ ಸಾಬೀತು ಆಗುವಂತಹ ಸಾಕ್ಷಿಗಳೆಲ್ಲಾ ದೊರೆತು ಈತನ ವಜಾ ವಿಷಯದ ಫೈಲ್, ಜಿಲ್ಲಾ ಪಂಚಾಯ್ತಿಯ ಕಾರ್ಯದರ್ಶಿ ಬಳಿ ತಲುಪಿತು. ಆಗಲೂ ಜೆ.ಮುನೇಗೌಡ ತನ್ನ ಕರಾಮತ್ತು ಬಿಡದೆ, ತಾನು ಕಾಂಗ್ರೆಸ್ ಪಕ್ಷದಲ್ಲಿದ್ದರೂ, ಬಿಜೆಪಿಯ ಆಗಿನ ಆರ್.ಡಿ.ಪಿ.ಆರ್. ಮಂತ್ರಿ ಆರ್.ಅಶೋಕ್‌ರ ಬೀಗರಾದ ದೊಡ್ಡಜಾಲ ಸೀನಪ್ಪನವರ ಕಾಲಿಗೆ ಬಿದ್ದು ಆ ಫೈಲ್‌ಗೆ ಜಿಲ್ಲಾ ಪಂಚಾಯ್ತಿ ಹಾಗೂ ಆರ್.ಡಿ.ಪಿ.ಆರ್. ಅಧಿಕಾರಿಗಳು ಸಹಿ ಹಾಕದಂತೆ ನೋಡಿಕೊಂಡೆ. ಅವರಿಗೆಲ್ಲಾ ಎಷ್ಟೆಷ್ಟು ಪ್ರಸಾದ ಸಲ್ಲಿಸಿದಮೋ ಮುನೇಗೌಡನಿಂದ ಅವೇದ್ಯ ತಿಂದವರು ಮಾತ್ರ ಬಲ್ಲರು. ಕಡೆಗೂ ಮುನೇಗೌಡನ ಪಾಪದ ಕೊಡ ತುಂಬಿ ಇನ್ನು ಅವನ ಅಧಿಕಾರ ಒಂದು ತಿಂಗಳು ಇರುವಾಗಲೇ ಅಧ್ಯಕ್ಷ ಸ್ಥಾನ ಮತ್ತು ಸದಸ್ಯ ಸ್ಥಾನದಿಂದ ವಜಾಗೊಂಡಿದ್ದಾರೆ.
ಈ ಹಿಂದೆ ಇವನಿಗೆ ಸಹಕರಿಸಿದ ಬಾಗಲೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ರಾಮಮೂರ್ತಿ ಇಂದಿರಾನಗರಕ್ಕೆ ವರ್ಗಾವಣೆಗೊಂಡು ಅಲ್ಲಿ ಹತ್ತು ಲಕ್ಷ ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಅಮಾನತ್ತುಗೊಂಡವ ಇನ್ನೂ ಮತ್ತೆ ಕೆಲಸಕ್ಕೆ ಆದೇಶ ಪಡೆಯದೆ ಅಲೆಯುತ್ತಿದ್ದಾರೆ.
ಮುನೇಗೌಡ ವಜಾಗೊಳ್ಳಲು ಬಾಗಲೂರಿನ ಕೆಲವು ಗ್ರಾಮ ಪಂಚಾಯ್ತಿ ಸದಸ್ಯರು ತಮ್ಮ ಕೈಯಿಂದ ಖರ್ಚು ಮಾಡಿಕೊಂಡು ಕಛೇರಿಗಳ ಬಾಗಿಲಿಗೆ ಪ್ರತಿದಿನ ಅಲೆದಾಡಿದ್ದು ಅವರ ಶ್ರಮಕ್ಕೆ ಈಗ ಫಲ ದೊರೆತಿದೆ. ಎಲ್ಲಕಿಂತ ಹೆಚ್ಚಿನ ಆನಂದ, ಬಾಗಲೂರು ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಯವರಿಗೆ ಆಗಿದೆ.
ಏಕೆಂದರೆ ಇವರಿಬ್ಬರೂ ಈ ಮುನೇಗೌಡರ ಕಾಟಕ್ಕೆ ನಲುಗಿ ಹೋಗಿದ್ದರು. ಈಗ ಹಾಯಾಗಿ ಉಸಿರಾಡುತ್ತಾ ಅಭಿವೃದ್ಧಿ ಕಾರ್ಯಕೈಗೊಳ್ಳಲು ಸೂಕ್ತ ವಾತಾವರಣ ನಿರ್ಮಾಣವಾಗಿದೆ. ಸರ್ಕಾರ ಜೆ.ಮುನೇಗೌಡರಿಂದ ಪಂಚಾಯ್ತಿಯಿAದ ದುರ್ಬಳಕೆ ಮಾಡಿಕೊಂಡ ಹಣವನ್ನು ಮರಳಿ ಪಡೆದು ನಡೆಸಿರುವ ಇನ್ನೂ ಅನೇಕ ಬಾನಗಡಿ, ವಂಚನೆಗಳ ಬಗ್ಗೆ ತನಿಖೆ ನಡೆಸಿದರೆ ಮತ್ತಷ್ಟು ಭ್ರಷ್ಟತೆ ಹೊರಬೀಳುತ್ತದೆ. ಅಂತಹ ಅಧಿಕಾರಿಗಳು ಇದ್ದಾರೆಯೇ ಎನ್ನುವುದು ಮಾತ್ರ ಪ್ರಶ್ನೆ.
0 Comments